ಟ್ರೋಲ್‌ಗಳಿಗೆ ಹೆದರಬೇಡಿ : ಚಿಕ್ಕಬಳ್ಳಾಪುರ ನೂತನ ಶಾಸಕರಿಗೆ ಸ್ಪೀಕರ್‌ ಖಾದರ್‌ ಸಲಹೆ

ಬೆಂಗಳೂರು:  ಗೌರವಾನ್ವಿತ ರಾಜ್ಯಪಾಲರ ಭಾಷಣಕ್ಕೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತಾ. ಬಡ ಕುಟುಂಬದ ಹುಡುಗ ಕೂಡ ವಿಧಾನಸಭೆ ತಲುಪುವುದಕ್ಕೆ ಪ್ರೇರಣೆಯಾದ ಡಾ.ಬಿ.ಆರ್‌ ಅಂಬೇಡ್ಕರ್‌, ಅನಾಥ ಹುಡುಗರಿಗೆ ಅನ್ನ ಇಟ್ಟು ಬೆಳೆಸಿದ ಸಿದ್ದಗಂಗೆ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡುವ ಮೂಲಕ ಇಂದು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಭಾಷಣ ಮಾಡಿದರು.

ಈ ವೇಳೆ ಪ್ರದೀಪ್‌ ಈಶ್ವರ್‌ ಅವರಿಗೆ ಸಲಹೆ ನೀಡಿದ ಸ್ಪೀಕರ್‌ ಖಾದರ್‌ ಅವರು, ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದೀರಿ. ಆತ್ಮವಿಶ್ವಾಸದಿಂದ,  ಧೈರ್ಯದಿಂದ ಮಾತನಾಡಿ. ಇಲ್ಲಿ ಯಾವುದೇ ಪರೀಕ್ಷೆ ನಡೆಯುತ್ತಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ. ಮೊದಲ ಬಾರಿಗೆ ಮಾತನಾಡುವಾಗೆ ಗಡಿಬಿಡಿ  ಆಗೋದು ಸಹಜ, ಆದರಿಂದ ಟ್ರೋಲ್‌ ಮಾಡ್ತಾರೆ ಅನ್ನೋ ಭಾವನೆ ಬೇಡ ನೀವು ಏನು ಹೇಳಬೇಕು ಅದನ್ನು ಸದನದ ಮುಂದಿಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ನೂತನ ಶಾಸಕರಿಗೆ ಬಲಪಂಥೀಯರಿಂದ ಮೋಟಿವೇಶನ್ ಭಾಷಣ: ಸ್ಪೀಕರ್‌ U.T. ಖಾದರ್‌ಗೆ ಪತ್ರ ಬರೆದ ಸಿಪಿಐ(ಎಂ)

ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಸರ್ಕಾರದ ಯೋಜನೆಗಳಿಗೆ ಮೆಚ್ಚುಗೆ ಸೂಚಿಸಿದ ಶಾಸಕ ಪ್ರದೀಪ್‌ ಈಶ್ವರ್‌ ಅವರು, ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್‌ ಅಷ್ಟೇ! ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಅನ್ನೋದು ದೇವರು. ಸಿದ್ಧರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯರಿಗೆ ಹಸಿವಿನ ಅನುಭವ ಇದೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಗೃಹಜ್ಯೋತಿ ಯೋಜನೆ ಕೇವಲ ಮನೆಯನ್ನು ಬೆಳೆಗುತ್ತಿಲ್ಲ. ಕೋಟ್ಯಾಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೇ , ಇಂಗ್ಲೀಷ್‌ ಇರೋದೇ ತಪ್ಪು ಮಾತನಾಡಲು. ಆದರೆ ಕನ್ನಡ ಇದೋದು ಸರಿಯಾಗಿ ಮಾತನಾಡಲು, ಬಡವರ ದೇವಾಲಯ ಕನ್ನಡ ಶಾಲೆ ಬಡವರ ಮಕ್ಕಳು ವಿಧಾನಸೌಧಕ್ಕೆ ಬರೋದು ಸಾಧ್ಯವಾಗಿರೋದು ಸಂವಿಧಾನದಿಂದ. ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ.

ಐಎಎಸ್‌ ಮತ್ತು ಮೆಡಿಕಲ್‌ ಓದಲು ಬರುವ ಕನ್ನಡ ಮಾಧ್ಯಮವನ್ನು ಸರ್ಕಾರದ ಆದ್ಯತೆ ಮೇಲೆ ಪರಿಗಣಿಸಬೇಕು. ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮರಿಚಿಕೆ ಆಗಬಾರದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ-ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು.ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಬೇಕು ಎಂದರು.

ಬಡವರು ಬೆಳಿಬೇಕು ಕಣಯ್ಯ ಎಂಬಂತೆ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇವುಗಳನ್ನು ಟೀಕೆ ಮಾಡುವುದು ಉತ್ತಮವಲ್ಲ. ಪ್ರತಿ ಮನೆಯ ಅಕ್ಕಿ, 2 ಸಾವಿರ ರೂಪಾಯಿ ನೀಡುತ್ತಿದ್ದೇವೆ. ಮನೆಗೆ ಅಕ್ಕಿ ಜೊತೆಗೆ 2 ಸಾವಿರ ಹಣ ಕೊಟ್ಟರೆ ಬಡ ಮಹಿಳೆಯ ಕುಟುಂಬ ನಿರ್ವಹಣೆಗೆ ಸುಲಭ ಆಗುತ್ತದೆ. ಸಿದ್ದರಾಮಯ್ಯ ಅವರಿಗೆ ಹಸಿವಿನ ಬೆಲೆ ಗೊತ್ತಿತ್ತು. ಆದ್ದರಿಂದಲೇ ಇಂತಹ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *