ಬೆಂಗಳೂರು: ಮೆಡಿಕಲ್ ಶಾಪ್ ಸಿಬ್ಬಂದಿಗೆ ಮಾತ್ರ ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಎಲ್ಲಾ ವೈದ್ಯರು ಬರವಣಿಗೆ ಅಸ್ಪಷ್ಟವಾಗಿರುತ್ತದೆ ಎಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಕನ್ನಡ
ಬೆಂಗಳೂರಿನ ವೈದ್ಯರೊಬ್ಬರು ಬರೆದಿರುವ ಔಷಧ ಚೀಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ವೈದ್ಯರೊಬ್ಬರು ಇಂಗ್ಲಿಷ್ ಬದಲು ಕನ್ನಡದಲ್ಲೇ ಔಷಧ ಚೀಟಿಯನ್ನು ಬರೆಯುವ ಮೂಲಕ ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ವೈದ್ಯಲೋಕದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.
ನಗರದ ಕೆ.ವಿ.ಡೆಂಟಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಹರಿಪ್ರಸಾದ್ ಸಿ.ಎಸ್. ಬದಲಾವಣೆ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಬಳಿ ಆರೋಗ್ಯ ತಪಾಸಣೆಗೆ ಬಂದ ವ್ಯಕ್ತಿಗೆ ಕನ್ನಡದಲ್ಲೇ ಔಷಧಿ ಚೀಟಿಯನ್ನು ಬರೆದುಕೊಟ್ಟು ಮಾದರಿಯಾಗಿದ್ದಾರೆ. ಔಷಧ ಚೀಟಿಯ ಪ್ರಕಾರ ಸೆ.2 ರಂದು ರವಿಶಂಕರ್ ಎಂಬ ವ್ಯಕ್ತಿ ಡಾ. ಹರಿಪ್ರಸಾದ್ ಬಳಿ ಆರೋಗ್ಯ ತಪಾಸಣೆಗೆ ಹೋಗಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಟ ದರ್ಶನ್
ಈ ವೇಳೆ ಜೆನ್ ಮ್ಯಾಕ್ಸ್ 500 ಎಂಜಿ ಊಟದ ನಂತರ ಹಾಗೂ ಮೇಗಡಾಲ್ ಮಾತ್ರೆ ಊಟದ ನಂತರ ಎಂದು ಕನ್ನಡಲ್ಲಿ ಬರೆದಿದ್ದಾರೆ. ಔಷಧಿಯನ್ನು ಎಷ್ಟು ದಿನ ತೆಗೆದುಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಕನ್ನಡದಲ್ಲೇ ಬರೆದಿದ್ದಾರೆ. ಹೀಗಾಗಿ ಈ ಔಷಧ ಚೀಟಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಅಂದಹಾಗೆ ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯಲು ಆದೇಶ ಹೊರಡಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಒಂದೇ ವೇಳೆ ಕನ್ನಡದಲ್ಲಿ ಬರೆಯಲು ಬರದಿದ್ದರೆ, ಪ್ರಾಧಿಕಾರಿಂದ ಕಲಿಕಾ ಕೇಂದ್ರ ಆರಂಭಿಸುತ್ತೇವೆ ಎಂದು ಸಹ ಬಿಳಿಮಲೆ ಹೇಳಿದ್ದಾರೆ.
ಇದನ್ನೂ ನೋಡಿ: ರಾಜ್ಯಗಳಿಗೆ ಆರ್ಥಿಕ ಕೊರತೆಯುಂಟು ಮಾಡುವ ತೆರಿಗೆ ವ್ಯವಸ್ಥೆ ಮತ್ತು 16ನೆ ಹಣಕಾಸು ಆಯೋಗ : ಮುಂದೇನು? Janashakthi