ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದ್ದು, ದೇಶದ ಪ್ರತಿ ಮೂಲೆಯಲ್ಲಿ ದ್ವೇಷವನ್ನು ಸೋಲಿಸಿ, ಪ್ರೀತಿಯ ಅಂಗಡಿಯನ್ನು ತೆರೆಯುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್
‘ಇಂದು ಮೊದಲ ಹಂತದ ಮತದಾನ. ನೆನಪಿಡಿ, ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾತಂತ್ರದ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ. ಕಳೆದ 10 ವರ್ಷಗಳಲ್ಲಿ ದೇಶದ ಆತ್ಮಕ್ಕೆ ಆಗಿರುವ ಗಾಯಗಳಿಗೆ ನಿಮ್ಮ ಮತದ ಬಾಮ್ ಹಚ್ಚಿ ಪ್ರಜಾಪ್ರಭುತ್ವವನ್ನು ಬಲಪಡಿಸಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : ತಮಿಳುನಾಡು ಇಂಡಿಯಾ ಕೂಟದ ದಕ್ಷಿಣದ ಭದ್ರಕೋಟೆಯಾಗಿ ಉಳಿಯುವುದೆ?
ದೇಶದ ಪ್ರತಿಯೊಂದು ಮೂಲೆಯಲ್ಲಿ ದ್ವೇಷವನ್ನು ಸೋಲಿಸಿ ಪ್ರೀತಿಯ ಅಂಗಡಿ ತೆರೆಯಿರಿ ಎಂದು ಅವರು ಹೇಳಿದ್ದಾರೆ. ಅಪ್ರೆಂಟಿಸ್ ಹಕ್ಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ, ರಾಷ್ಟ್ರವ್ಯಾಪಿ ಜಾತಿಗಣತಿ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿಗಳ ಗ್ರಾಫಿಕ್ಸ್ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.
ಇದನ್ನು ನೋಡಿ : ಬಿಜೆಪಿ ಪ್ರಣಾಳಿಕೆ : ಇವತ್ತೇನು ಎಂಬುದಕ್ಕೆ ಉತ್ತರ ಇಲ್ಲ – 25 ವರ್ಷ ಕಾಯಬೇಕು Janashakthi Media