102 ಕ್ಷೇತ್ರಗಳಲ್ಲಿ ಆರಂಭವಾದ ಮತದಾನ; ಸಾಮಾನ್ಯ ಜನರೊಂದಿಗೆ ಮತಚಲಾಯಿಸಲು ಬಂದಿರುವ ನಾಯಕರು, ಸ್ಟಾರ್‌ಗಳು

ನವದೆಹಲಿ: ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಬೆಳಗ್ಗೆ ಶಾಂತಿಯುತವಾಗಿ ಆರಂಭವಾಗಿದೆ. ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಸೇಲಂನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೊದಲ ಹಂತದ ಮತದಾನದಲ್ಲಿ 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ. ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲರು ಕೂಡ ಇದ್ದಾರೆ.

ಇದನ್ನು ಓದಿ: ಕೇಂದ್ರ ಸಚಿವ ಜೋಷಿ ವಿರುದ್ಧ ಕೋಟಿ ರೂಪಾಯಿ ಒಡೆಯ ದಿಂಗಾಲೇಶ್ವರ ಸ್ವಾಮಿ ಸ್ಪರ್ಧೆ

ಸಾಮಾನ್ಯ ಜನರೊಂದಿಗೆ ಪ್ರಮುಖ ನಾಯಕರು ಸ್ಟಾರ್‌ಗಳು ಮತಚಲಾಯಿಸಲು ಬಂದಿರುವುದು ಎಲ್ಲೆಡೆ ಕಂಡುಬರುತ್ತಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ತವಾಂಗ್ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದಾರೆ. ಮೇಘಾಲಯದಲ್ಲಿ ಎನ್‌ಪಿಪಿ ಅಭ್ಯರ್ಥಿ ಅಗಾಥಾ ಸಂಗ್ಮಾ,ಜಬಲ್‌ಪುರದಲ್ಲಿ ಮತ  ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಆಶಿಶ್ ದುಬೆ ಮತ್ತು ಅವರ ಪತ್ನಿ, ದಿಬ್ರುಗಢದಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್, ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ, ನಾಗ್ಪುರದಲ್ಲಿ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಅವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದ್ದಾರೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯಲ್ಲಿ ಮತ ಚಲಾಯಿಸಿದ್ದಾರೆ.  ಹಿರಿಯ ನಟ ರಜನಿಕಾಂತ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಮತ ಚಲಾಯಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮತ ಚಲಾಯಿಸಿದ್ದು, ಮುಂತಾದವರು ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ.

ಇದನ್ನು ನೋಡಿ : ರಾಮ ನವಮಿ ವಿಶೇಷ : ರಾಮಯ್ಯ ಬಾರಯ್ಯ ಮೋದಿಯ ಕೇಳಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *