“ಕಾಶ್ಮೀರಿ ಫೈಲ್ಸ್ ” ಚಿತ್ರವನ್ನು ಪ್ರಶ್ನಿಸಿದ್ದಕ್ಕೆ ದಲಿತ ವ್ಯಕ್ತಿಗೆ ಅಮಾನವೀಯ ಶಿಕ್ಷೆ

ಜೈಪುರ: ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾದ ದಲಿತ ವ್ಯಕ್ತಿಯನ್ನು ಎಳೆದೊಯ್ದು ಆತನ ಮೂಗನ್ನು ದೇಗುಲದ ಜಗುಲಿಗೆ ತಿಕ್ಕಿಸಿದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ 11 ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಇನ್ನಿತರ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ? ಕೆಲ ದಿನಗಳ ಹಿಂದೆ ಖಾಸಗಿ ಬ್ಯಾಂಕ್‌ವೊಂದರಲ್ಲಿ ಸೀನಿಯರ್ ಸೇಲ್ಸ್ ಮ್ಯಾನೇಜರ್ ಆಗಿರುವ ರಾಜೇಶ್ ಕುಮಾರ್ ಮೇಘ್ವಾಲ್ ತಮ್ಮ ಫೇಸ್‌ಬುಕ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಟೀಕಿಸಿದ್ದರು. ಅಲ್ಲದೆ ದೌರ್ಜನ್ಯಗಳು ಕೇವಲ ಪಂಡಿತರ ಮೇಲಷ್ಟೇ ನಡೆದಿವೆಯೇ, ದಲಿತರ ಮೇಲೆ ನಡೆದಿಲ್ಲವೇ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ದಲಿತ ಸಮುದಾಯವೂ ತಾರತಮ್ಯ ಎದುರಿಸುತ್ತಿದೆ. ಮೋದಿ ಸರ್ಕಾರ ಜೈಭೀಮ್, ಶೂದ್ರ ದಿ ರೈಸಿಂಗ್ ಚಿತ್ರಗಳಿಗೆ ಏಕೆ ತೆರಿಗೆ ವಿನಾಯ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.

ಈ ಪೋಸ್ಟ್‌ಗೆ ಕೆಲವರು ಜೈ ಶ್ರೀರಾಮ್ ಮತ್ತು ಜೈ ಶ್ರೀಕೃಷ್ಣ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ದೇವರ ಬಗ್ಗೆ ಮೇಘ್ವಾಲ್ ಅವರು ದೇವರನ್ನು ಪ್ರಶ್ನಿಸಿ ಪ್ರತಿಕ್ರಿಯೆ ನೀಡಿದ್ದರು. ಆದರೆ, ತಮ್ಮ ತಪ್ಪಿನ ಅರಿವಾಗಿ ಮೇಘ್ವಾಲ್ ಅವರು ಕ್ಷಮಾಪಣೆಯನ್ನೂ ಕೋರಿದ್ದರು. ಆದರೆ ಕೆಲವು ಸ್ಥಳೀಯರು ಮೇಘ್ವಾಲ್ ಅವರನ್ನು ದೇವಸ್ಥಾನಕ್ಕೆ ಎಳೆದೊಯ್ದು, ಬಲವಂತದಿಂದ ದೇವಸ್ಥಾನದ ಜಗುಲಿಗೆ ಮೂಗು ತಿಕ್ಕಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

Donate Janashakthi Media

One thought on ““ಕಾಶ್ಮೀರಿ ಫೈಲ್ಸ್ ” ಚಿತ್ರವನ್ನು ಪ್ರಶ್ನಿಸಿದ್ದಕ್ಕೆ ದಲಿತ ವ್ಯಕ್ತಿಗೆ ಅಮಾನವೀಯ ಶಿಕ್ಷೆ

  1. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಬಿಲ್ ಕೇಳಿದರೆ ‘ಜಿಎಸ್ಟಿ’ ಆಗುತ್ತದೆ (ಅಂದರೆ ಖರೀದಿದಾರರಿಗೆ ದುಬಾರಿಯಾಗುತ್ತದೆ!’) ಎಂದು ಎಚ್ಚರಿಸುತ್ತಾರೆ. ಅಂದರೆ ಬಿಲ್ ಕೇಳಬೇಡಿ ಎಂದು ಅರ್ಥ. ಆಗಲಿ,
    ‘ಪರ್ವಾಗಿಲ್ಲ’ ಎಂದರೆ ‘ಬಿಲ್ ಹಾಕುವವರು ಊಟಕ್ಕೆ ಹೋಗಿದ್ದಾರೆ’ ಎನ್ನುತ್ತಾರೆ. ಬಹುಶಃ ತುಂಬಾ ಜನರಿಗೆ ಗೊತ್ತಿಲ್ಲ ಬಿಲ್ ಹಾಕದಿದ್ದರೂ ಖರೀದಿದಾರರರಿಂದ ವ್ಯಾಪಾರಿಗಳು ಜಿಎಸ್ಟಿ ವಸೂಲು ಮಾಡುತ್ತಾರೆ, ಅಲ್ಪ ಸ್ವಲ್ಪ ರಿಯಾಯಿತಿ ತೋರಿಸಿದಂತೆ ಮಾಡಿ. ಬಿಲ್ ಹಾಕದಿದ್ದಾಗ ಆ ಹಣ ವ್ಯಾಪಾರಿ – ಟ್ಯಾಕ್ಸ್ ಅಧಿಕಾರಿ – ರಾಜಕಾರಣಿಗಳ ಜೇಬು ಸೇರುತ್ತದೆ. ರಿಯಾಯ್ತಿ ಎಮ್ ಆರ್ ಪಿ ಯಿಂದ ಕೊಟ್ಟಿದ್ದು. ತೆರಿಗೆಯನ್ನು ಹೇಗೂ ವಸೂಲು ಮಾಡೇ ಮಾಡುತ್ತಾರೆ. ಆದರೆ ಬಿಲ್ ಹಾಕಿದರೆ ಮಾತ್ರ ಆ ಹಣ ಸರ್ಕಾರದ ಕ್ಯೆಗೆ ಹೋಗುತ್ತದೆ. ನನ್ನ ಅಂದಾಜಿನ ಪ್ರಕಾರ ಬಿಕರಿಯಾದ % 50 ಕ್ಕೂ ಕಡಿಮೆ ವಸ್ತುಗಳ ಜಿಎಸ್ಟಿ ಮಾತ್ರ ಸರ್ಕಾರವನ್ನು ತಲುಪುತ್ತದೆ. ಉಳಿದದ್ದೆಲ್ಲ ಕೃಷ್ಣನ ಲೆಕ್ಕಕ್ಕೆ ಹೋಗುತ್ತದೆ. ತೆರಿಗೆ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಶಾಮೀಲಾಗದೆ ಇದು ಸಾಧ್ಯವಿಲ್ಲ.

Leave a Reply

Your email address will not be published. Required fields are marked *