ಮರಣ ಪರಿಹಾರ ವೈದ್ಯಕೀಯ ನೆರವು ಹಚ್ಚಳಕ್ಕೆ ಸ್ವಾಗತ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಸ್ವಾಭಾವಿಕ ಮರಣ ಹೊಂದಿದಲ್ಲಿ ಪರಿಹಾರ ಧನವನ್ನು ಈಗಿರುವ ರೂ.75,000/- ದಿಂದ ರೂ. 1,50,000/- ಕ್ಕೆ, ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ 5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿರುವ ತೀರ್ಮಾನವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CWFI) ಸ್ವಾಗತಿಸುತ್ತದೆ. ಅದೇ ಸಂದರ್ಭದಲ್ಲಿ ಹ್ರದ್ರೋಗ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಟಾಪ್ ಅಪ್ ರೂಪದಲ್ಲಿ ಹೆಚ್ಚಿಗೆ ಪರಿಹಾರ ನೀಡಿರುವುದು ಕೂಡಾ ಸ್ವೀಕಾರಾರ್ಹ ವಾಗಿದೆ ಎಂದು ಸಿಐಟಿಯು ನೇತೃತ್ವದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಿಳಿಸಿದೆ.
ಈ ಕುರಿತು ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಜಂಟಿ ಹೇಳಿಕೆ ನೀಡಿದ್ದು, 6ನೇ ಕ್ಲಾಸಿನಿಂದ 12ನೇ ಕ್ಲಾಸಿನ ವರೆಗೆ ವಸತಿ ಶಾಲೆಗಳನ್ನು ಎಲ್ಲಾ 31 ಜಿಲ್ಲೆಗಳಲ್ಲಿ ಸ್ಥಾಪಿಸುವ ಹೆಸರಲ್ಲಿ ಕಲ್ಯಾಣ ಮಂಡಳಿ ನಿಧಿ 750 ಕೋಟಿ ರೂಪಾಯಿಗಳನ್ನು ಬಳಕೆ ಮಾಡಲಾಗುವುದು ಎನ್ನುವ ಪ್ರಸ್ತಾವವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ರು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ತನ್ನ ತೀವ್ರ ವಿರೋಧವನ್ನು ವ್ಯಕ್ರಪಡಿಸಿಸಿದ್ದಾರೆ.
ಇದನ್ನು ಓದಿ:ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿದೆ: ಥಾವರ್ ಚಂದ್ ಗೆಹ್ಲೊಟ್
ಈ ಪ್ರಸ್ತಾಪವು 1996 ಕಾಯಿದೆಗೆ ವಿರೋಧವಾಗಿದೆ. ಮಂಡಳಿ ಆರಂಭಗೊಂಡ ಕಾಲದಿಂದಲೂ ಭವ್ಯ ಸೌಧಗಳನ್ನು ನಿರ್ಮಿಸುವ ಕಾರ್ಮಿಕರಿಗೆ ಸ್ವತಃ ಅವರ ವಸತಿ ನಿರ್ಮಾಣಕ್ಕೆ 2ರಿಂದ 5 ಲಕ್ಷ ಸಹಾಯಧನ ಬೇಕೆಂದು ಕಾರ್ಮಿಕರು ಹೋರಾಡುತ್ತಿದ್ದಾರೆ. ಆದರೆ ಅದನ್ನು ನೀಡಲಿಲ್ಲ ಬದಲಾಗಿ ನಕಲಿ ಕಾರ್ಮಿಕರನ್ನು ಸೃಷ್ಟಿಸಿದ ಕೊಳಚೆ ನಿರ್ಮೂಲನಾ ಮಂಡಳಿಗೆ ರೂ 522 ಕೋಟಿ ಮಂಡಳಿ ನಿಧಿ ನೀಡಲಾಗಿದೆ. ಈಗ ಸಾಲದೆಂಬಂತೆ ರೂ 750 ಕೋಟಿ ಹಣದಲ್ಲಿ ವಸತಿ ಶಾಲೆ ನಿರ್ಮಿಸಲು ಹೊರಟಿದೆ. ಇದು ಕಾರ್ಮಿಕ ಸಚಿವರು ಹಾಗೂ ಅವರ ಹಿಂಭಾಲಕರು ಮತ್ತು ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯಕ್ರವಲ್ಲದೆ ಬೇರೆನೂ ಅಲ್ಲ ಇದರಿಂದ ಬಡ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಇರುವ ಸರ್ಕಾರಿ ವಸತಿ ಶಾಲೆಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುತ್ತಿದ್ಸಾರೆ.ಅಲ್ಲದೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕೆಲಸವೇ ಹೊರತು ವಸತಿ ಶಾಲೆ ತೆರೆಯುವುದಲ್ಲ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು CWFI ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದನ್ನು ಓದಿ:ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಪಾಪಿಗಳು
ಕರ್ನಾಟಕ ಹೈಕೋರ್ಟ್ ಕಲ್ಯಾಣ ಮಂಡಳಿ ನಿಧಿ ದುರುಪಯೋಗ ವಾಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಎಜಿ ತನಿಖೆ ನಡೆಸಲು ಆದೇಶಿಸಿದೆ ಅಲ್ಲದೆ. 2021 ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ವಿತರಿಸಲು ತೀರ್ಪುನೀಡಿದೆ. ಅದನ್ನು ಒಳಗೊಂಡು ಇತರೆ ಘೋಷಿತ ಕಾರ್ಯಕ್ರಮಗಳನ್ನು ಮಂಡಳಿ ಸಂಪರ್ಕವಾಗಿ ಜಾರಿಗೊಳಿಸುವುದೇ ಕಾರ್ಮಿಕರಿಗೆ ನೀಡುವ ನ್ಯಾಯ ವಾಗಿದೆ. ಹಾಗಾಗಿ ಬಜೆಟ್ ಪ್ರಸ್ತಾಪಿತ ವಸತಿ ಶಾಲೆ ನಿರ್ಮಾಣವನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.