ಸಿವಿ ರಾಮನ್ ನಗರ | ಕಗ್ಗದಾಸ್ ಪುರ ಮುಖ್ಯ ರಸ್ತೆಯ ಕಾಮಗಾರಿ ನಿಧಾನಗತಿ, ಸಾರ್ವಜನಿಕರ ಪರದಾಟ

ಬೆಂಗಳೂರು: ಸಿವಿ ರಾಮನ್ ನಗರದ ಕಗ್ಗದಾಸ್ ಪುರ ಮುಖ್ಯ ರಸ್ತೆಯ  ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಗ್ಗದಾಸ್ ಪುರ ಮುಖ್ಯ ರಸ್ತೆಯಲ್ಲಿ ಪ್ರತಿ ದಿನ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜ್‌ಗಳಿಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು ಈ ರಸ್ತೆಯ ಮೂಲಕವೇ ಹಾದು ಹೋಗಬೇಕು. ಬ್ರಿಡ್ಜ್ ಕಟ್ಟುವುದಾಗಿ ರಸ್ತೆಯನ್ನು ಅಗೆದು ಹಾಕಿರುವುದರಿಂದ ಅ ಭಾಗದಿಂದ ಈ ಭಾಗಕ್ಕೆ ತೆರಳಬೇಕಾದರೆ ಸರ್ಕಸ್ ಮಾಡಿ ಬರಬೇಕು. ಒಂದು ವೇಳೆ ಅಯಾ ತಪ್ಪಿದರೆ ಕಾಮಗಾರಿ ನಡೆಯುವ ದೊಡ್ಡಮೊರಿಯೊಳಗೆ ಬೀಳಬೇಕಾಗುತ್ತದೆ. ಒಂದೆರಡು ದಿನದ ಹಿಂದೆ ಅಜ್ಜಿಯೊಬ್ಬರು ರಸ್ತೆ ದಾಟುವಾಗ ಅಯಾ ತಪ್ಪಿ ಬಿದ್ದರೆಂದು ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಾರ್ವಜನಿಕರು ಹೇಳಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಗೌರಮ್ಮ ಆಂತಕ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಶಾಲೆ ಇದೆ, ಹಲವಾರು ಅಪರ್ಟ್ ಮೆಂಟ್‌ಗಳು, ಅಂಗಡಿ ಮುಗ್ಗಟ್ಟುಗಳಿವೆ. ಕಗ್ಗದಾಸ್ ಪುರ ಮುಖ್ಯ ರಸ್ತೆ ಕಾಮಗಾರಿಯಲ್ಲಿರುವುದರಿಂದ ಶಾಲೆಗೆ ಬರಬೇಕಾದರೆ 4.5 ಕಿಲೋ ಮೀಟರ್ ಸುತ್ತಿ ಮಲ್ಲೇಶ್ ಪಾಳ್ಯದ ಕಡೆಯಿಂದ ಬರಬೇಕು. ಅ ರಸ್ತೆಯೂ ಸಹ ಟ್ರಾಫಿಕ್ ಜಾಮ್‌ನಿಂದ ಕೂಡಿರುತ್ತದೆ. ಈ ಸಮಸ್ಯೆಯಲ್ಲಿ ಶಾಲಾ ಕಾಲೇಜ್‌ಗೆ ಹೋಗುವ ಮಕ್ಕಳು ಹಾಗೂ ಕೆಲಸ ಕಾರ್ಯಗಳಿಗೆ ಹೋಗವ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕುರಿತು ಬಿಜೆಪಿ ನಾಯಕರನ್ನು ಪ್ರಶ್ನಿಸಿದರೆ, ಜನರಿಗೆ ಒಳ್ಳೆಯ ಕೆಲಸ ಮಾಡುವುದಕ್ಕೆ ರಸ್ತೆ ಮಾಡುತ್ತಿದ್ದೇವೆ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಗೌರಮ್ಮ ಆರೋಪಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ವ್ಯಾಪಕ ಬಡತನ : ಬಿಹಾರದ ಜಾತಿಗಣತಿ ಕಣ್ಣು ತೆರೆಸಬೇಕು

ನಿಜವಾಗಿಯೂ ಕ್ಷೇತ್ರದ ಶಾಸಕರಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ  ಕಾಮಗಾರಿ ಪೂರ್ಣಗೊಳ್ಳುವವರಿಗೂ ಸಾರ್ವಜನಿಕರ ಸಂಚಾರಕ್ಕೆ ಬೇರೆ ವ್ಯವಸ್ಥೆ ಮಾಡಿ ಇಂತಹ ಕೆಲಸಕ್ಕೆ ಕೈಹಾಕಬೇಕಿತು. ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾದ ಎಸ್. ರಘುರವರು ಚೆನ್ನಾಗಿರುವ ರಸ್ತೆಯನ್ನು ಅಗೆದು ಎತ್ತರದ ಬ್ರಿಡ್ಜ್ ಮಾಡುವುದಾಗಿ ಹೊಸ ಕಾಮಗಾರಿ ಮಾಡುತ್ತಿರುವುದು ಏಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅನಾಹುತ ಜರಗುವ ಮೊದಲೇ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಸಂಪೂರ್ಣ ಗೊಳಿಸಿ ಸ್ಥಳೀಯರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ತಿಳಿಸಿದ್ದಾರೆ.

ವಿಡಿಯೋ ನೋಡಿ: ಮಹಾಧರಣಿ : ದುಡಿಯುವ ಜನರ ಹೋರಾಟದ ಹಾಡುಗಳು| ಕ್ರಾಂತಿಯಾಗಲಿ ಈ ನೆಲದ ಕ್ರಾಂತಿಯಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *