ತುಮಕೂರು : ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಡಾ. ಕೆ.ಪ್ರಕಾಶ್ ಆಯ್ಕೆಯಾಗಿದ್ದಾರೆ.
ಸಮಗ್ರ- ಸಮೃದ್ಧ- ಸೌಹಾರ್ದ ಕರ್ನಾಟಕಕ್ಕಾಗಿ ಆಗ್ರಹಿಸಿ ನಡೆದ 24 ನೇ ರಾಜ್ಯ ಸಮ್ಮೇಳನವು 35 ಜನರ ನೂತನ ರಾಜ್ಯ ಸಮಿತಿಯನ್ನು ಚುನಾಯಿಸಿದೆ. ಆ ಸಮಿತಿಯು 12 ಜನರ ಕಾರ್ಯದರ್ಶಿ ಮಂಡಳಿಯನ್ನು ಆಯ್ಕೆ ಮಾಡಿದ್ದು, ಕಾರ್ಯದರ್ಶಿಯಾಗಿ ಕೆ.ಪ್ರಕಾಶ್‌ರವನ್ನು ನೂತನ ಸಮಿತಿ ಆಯ್ಕೆ ಮಾಡಿದೆ.
ನೂತನ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಡಾ.ಕೆ.ಪ್ರಕಾಶ್, ಯು. ಬಸವರಾಜ್, ಜಿ.ಸಿ. ಬಯ್ಯಾರೆಡ್ಡಿ, ಮೀನಾಕ್ಷಿ ಸುಂದರಂ, ಎಸ್. ವರಲಕ್ಷ್ಮಿ, ಕೆ. ನೀಲಾ, ಎಂ.ಪಿ ಮುನಿವೆಂಕಟಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಸೈಯದ್ ಮುಜೀಬ್, ಯಾದವ ಶೆಟ್ಟಿ, ಕೆ. ಮಹಾಂತೇಶ್, ಚಂದ್ರಪ್ಪ ಹೊಸ್ಕೇರಾ ಆಯ್ಕೆಯಾಗಿದ್ದಾರೆ.
ನೂತನ ರಾಜ್ಯ ಸಮಿತಿ ಸದಸ್ಯರಾಗಿ 35 ಜನ ಆಯ್ಕೆಯಾಗಿದ್ದು, 12 ಜನ ಕಾರ್ಯದರ್ಶಿ ಮಂಡಳಿ ಸದಸ್ಯರು ಸೇರಿದಂತೆ, ದೇವಿ, ವಿಮಲಾ ಕೆ.ಎಸ್. ಪುಟ್ಟಮಾದು, ಎಸ್.ವೈ. ಗುರುಶಾಂತ್, ಜಿ.ನಾಗರಾಜ, ಬಿ. ಮಾಳಮ್ಮ, ಯಶ್ವಂತ್ ಟಿ, ಎಚ್.ಎಸ್. ಸುನಂದ, ಮುನೀರ್ ಕಾಟಿಪಳ್ಳ, ಸಿದ್ದಗಂಗಪ್ಪ, ನಿರುಪಾದಿ, ಸೂರ್ಯನಾರಾಯಣ ಪಿ, ಯಮುನಾ ಗಾಂವ್ಕರ್, ಸುರೇಶ್ ಕಲಾಗಾರ್, ಬಿ.ಎನ್. ಮಂಜುನಾಥ್, ಎನ್. ಪ್ರತಾಪಸಿಂಹ, ರಘುರಾಮರೆಡ್ಡಿ, ಕೆ.ಜಿ.ವಿರೇಶ್, ಸೂರಜ್ ನಿದಿಯಂಗ್, ಕೃಷ್ಣೇಗೌಡ ಟಿ.ಎಲ್, ಸತ್ಯಬಾಬು, ಭೀಮರಾಯ ಪೂಜಾರಿ, ಎನ್.ಕೆ.ಸುಬ್ರಮಣ್ಯ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಖಾಯಂ ಆಹ್ವಾನಿತರಾಗಿ ಬಾಸ್ಕರ್ ರೆಡ್ಡಿ, ಸುನೀಲ್‌ಕುಮಾರ್ ಬಜಾಲ್, ಡಾ. ಅನೀಲ್ ಕುಮಾರ್, ಗುರುರಾಜ ದೇಸಾಯಿ, ಮಾಲಿನಿ ಮೇಸ್ತಾ, ಮೀನಾಕ್ಷಿ ಬಾಳಿ ಆಯ್ಕೆಯಾಗಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರಿಯ ನಾಯಕರಾದ ವಿಜೆಕೆ ನಾಯರ್, ಜಿ.ಎನ್. ನಾಗರಾಜ್, ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಂಟ್ರೋಲ್ ಕಮೀಷನ್‌ನ ಸಂಚಾಲಕರಾಗಿ ಎನ್.ಕೆ ವಸಂತರಾಜ್, ಸದಸ್ಯರಾಗಿ ಗೌರಮ್ಮ ಮತ್ತು ಎಸ್‌ಕೆ ಗೀತಾ ಆಯ್ಕೆಯಾಗಿದ್ದಾರೆ.
ಈ ವೇಳೆ ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ ಬೇಬಿ, ಬಿ.ವಿ. ರಾಘವಲು, ಎ. ವಿಜಯರಾಘವನ್, ಕೇಂದ್ರ ಸಮಿತಿ ಸದಸ್ಯರಾದ ಕೆ.ಎನ್. ಉಮೇಶ್ ಇದ್ದರು.