ಬಡವರನ್ನು ಹಿಂಡಿ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವ ಮೋದಿ `ಅಭಿವೃದ್ಧಿ ಮಾದರಿ’ಯನ್ನು ಮುಂದುವರೆಸಿರುವ ಮಧ್ಯಂತರ ಒಕ್ಕೂಟ ಬಜೆಟ್ 2024-25

ಭಾರತದ ಅರ್ಥವ್ಯವಸ್ಥೆಯ ಸ್ಥಿತಿಯ ಬಗ್ಗೆ ಹಣಕಾಸು ಮಂತ್ರಿಗಳ ದೊಡ್ಡದೊಡ್ಡ ಮಾತುಗಳ ಹೊರತಾಗಿಯೂ, 2024 – 25  ಮಧ್ಯಂತರ ಒಕ್ಕೂಟ  ಬಜೆಟ್ ಭಾರತದ  ದುಡಿಯುವ ಜನರನ್ನು  ಎದುರಿಸುತ್ತಿರುವ  ಗಂಭೀರ  ಆರ್ಥಿಕ ಪರಿಸ್ಥಿತಿಯನ್ನು ಮತ್ತು ಮೋದಿ ಸರ್ಕಾರದ ‘ಅಭಿವೃದ್ಧಿ’ ಪರಿಕಲ್ಪನೆಯ ದುಷ್ಟ ಮುಖವನ್ನು ಪ್ರಕಟಪಡಿಸುತ್ತದೆ ಎಂದು ಸಿಪಿಐ(ಎಂಪೊಲಿಟ್‌ಬ್ಯುರೊ ತೀಕ್ಷ್ಣವಾಗಿ ವಿಮರ್ಶಿಸಿದೆಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವುದುಬಡವರನ್ನು ಮತ್ತಷ್ಟು ಬಡವರಾಗಿಸುವುದು ಮೋದಿ ಸರ್ಕಾರದ ‘ಅಭಿವೃದ್ಧಿ ಪರಿಕಲ್ಪನೆ ಎಂದಿರುವ ಸಿಪಿಐ(ಎಂ), 2023-24  ಪರಿಷ್ಕೃತ ಅಂಕಿಅಂಶಗಳು ಇದೇ ಕಥೆಯನ್ನು ಹೇಳುತ್ತವೆ ಎಂದಿದೆ. ಬಡವರನ್ನು

2024-25ರ ನಿಜವಾದ ಬಜೆಟ್ 2024 ರ ಚುನಾವಣೆಗಳ ನಂತರ ರಚನೆಯಾಗುವ ಹೊಸ ಸರ್ಕಾರ ಮತ್ತು ಸಂಸತ್ತಿನ ಜವಾಬಾýರಿಯಾಗಿದೆ. ಆದರೆ 2023-24 ರ ರೆವಿನ್ಯೂ ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ 13.3%ದಷ್ಟು ಬೆಳೆದಿದ್ದು, ಬಜೆಟ್ ಅಂದಾಜುಗಳನ್ನು ಮೀರಿದ್ದರೂ, ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ವೆಚ್ಚಗಳನ್ನು ಹಿಸುಕಿ ಬಜೆಟ್ ಅಂದಾಜುಗಳಿಗಿAತ ಕೆಳಕ್ಕೆ ಇಳಿಸಲಾಗಿದೆ ಎಂಬುದು ಗಮನಾರ್ಹ. ಈ ವೆಚ್ಚಗಳು ಕೇವಲ 7%ದಷ್ಟು ಬೆಳೆದಿವೆ, ಜಿಡಿಪಿಯ ಬೆಳವಣಿಗೆಗಿಂತಲೂ ಕಡಿಮೆ. ಜಿಡಿಪಿ ಬೆಳವಣಿಗೆ ಅಧಿಕೃತವಾಗಿ 8.9% ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಆಡಳಿತ ವೆಚ್ಚವು ಬಜೆಟ್ ಅಂದಾಜಿಗಿಂತ ಹೆಚ್ಚಿದ್ದರೂ ಅಭಿವೃದ್ಧಿ ವೆಚ್ಚದಲ್ಲಿ ಈ ಕೊರತೆ ಕಂಡುಬAದಿದೆ. ಅಂದರೆ ಕಲ್ಯಾಣ ಯೋಜನೆಗಳ ವೆಚ್ಚ ಹಾಗೂ ಬಂಡವಾಳ ವೆಚ್ಚದ ಮೇಲೆ ಕೊಡಲಿ ಏಟು ಬಿದ್ದಿದೆ. ಇದು ಭವಿಷ್ಯದ ಬೆಳವಣಿಗೆ ಮತ್ತು ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮತ್ತು ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆ ಹಾಗೂ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು ಮತ್ತು ಇತರ ಗುಂಪುಗಳಿಗೆ ಸಂಬಂಧಪಟ್ಟ ಯೋಜನೆಗಳಂತಹ ಹಲವಾರು ಬಾಬ್ತುಗಳ ವೆಚ್ಚಗಳನ್ನು ಬಜೆಟ್ ಮಟ್ಟಕ್ಕಿಂತ ಕೆಳಕ್ಕೆ ಇರಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಮತ್ತು ಪಿಎಂ ಪೋಷಣ್ ಮೇಲಿನ ಪರಿಷ್ಕೃತ ವೆಚ್ಚಗಳು ಬಜೆಟಿನಲ್ಲಿ ಹೇಳಿರುವುದಕ್ಕಿಂತ ಕಡಿಮೆಯಷ್ಟೇ ಅಲ್ಲ, 2022-23ರ ವೆಚ್ಚಕ್ಕಿಂತಲೂ ಕಡಿಮೆಯಾಗಿವೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಯೋಜನೆಗಳು ಎರಡೂ ರೀತಿಗಳಲ್ಲಿ ಕಡಿತವನ್ನು ಕಂಡಿವೆ. 2022-23ಕ್ಕಿಂತ 2023-24ರಲ್ಲಿನ ಈ ಕಡಿಮೆ ವೆಚ್ಚಗಳು ರಸಗೊಬ್ಬರ ಮತ್ತು ಆಹಾರ ಸಬ್ಸಿಡಿಗಳು, ಮನರೇಗ ಮತ್ತು ನಗರಾಭಿವೃದಿಂತಹ ಬಾಬ್ತುಗಳನ್ನೂ ಒಳಗೊಂಡಿವೆ. 2022-23 ಮತ್ತು 2023-24 ರ ನಡುವೆ ಆಹಾರ ಸಬ್ಸಿಡಿಗಳು 60470 ಕೋಟಿ ರೂ.ಗಳು ಮತ್ತು ರಸಗೊಬ್ಬರ ಸಬ್ಸಿಡಿಗಳು 62445 ಕೋಟಿ ರೂ.ಗಳ ಕಡಿತ ಕಂಡಿವೆ. 2023-24ರಲ್ಲಿ ಮನರೇಗ ಮೇಲಿನ ವೆಚ್ಚ ಹಿಂದಿನ ವರ್ಷಕ್ಕಿಂತ ರೂ. 4806 ಕೋಟಿಯಷ್ಟು ಕಡಿಮೆಯಾಗಿದೆ. ಗ್ರಾಮೀಣಾಭಿವೃದ್ಧಿ ವೆಚ್ಚಗಳು ಮತ್ತು ರಾಜ್ಯಗಳಿಗೆ ವರ್ಗಾವಣೆಗಳು ವಾಸ್ತವಿಕವಾಗಿ ಸ್ಥಗಿತಗೊಂಡಿವೆ, ಅಂದರೆ ಇವು ನೈಜ ಬೆಲೆಗಳಲ್ಲಿ ಕಡಿತವನ್ನೇ ಸೂಚಿಸುತ್ತವೆ. ರಾಜ್ಯಗಳನ್ನು ಮತ್ತಷ್ಟು ಹಿಂಡಲಾಗಿದೆ. ಏಕೆಂದರೆ, ಬಂಡವಾಳ ವೆಚ್ಚಗಳಿಗಾಗಿ ನೀಡಿರುವ ಸಾಲಗಳ ಮೊತ್ತ ಈ ಹಿಂದೆ ಜಿಎಸ್‌ಟಿ ಪರಿಹಾರದ ಬದಲಾಗಿ ನೀಡಲಾಗಿದ್ದ ಸಾಲಗಳಿಗಿಂತ ಬಹಳ ಕಡಿಮೆ ಎಂದು 2023-24 ರ ಪರಿಷ್ಕೃತ ಅಂಕಿಅAಶಗಳಲ್ಲಿರುವ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಗಮನ ಸೆಳೆದಿದೆ.

ಈ ರೀತಿ ಕೇಂದ್ರ ಸರ್ಕಾರದ ವೆಚ್ಚದಲ್ಲಿ ಹಿಂಡಿಕೆ ಮತ್ತು ಆದಾಯಗಳಲ್ಲಿ ತುಲನಾತ್ಮಕ ‘ಸುಧಾರಣೆ’ ಅತ್ಯಂತ ಕಳಪೆ ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆದಿದೆ. 2023-24ರಲ್ಲಿ ಅಂದಾಜು 7.3 % ‘ನೈಜ’ ಬೆಳವಣಿಗೆಯಿರುತ್ತದೆ ಎಂಬುದು ಶುದ್ಧ ಕಲ್ಪನೆಯಷ್ಟೇ. ಇದು ಮತ್ತು ಇತರ ವಿಷಯಗಳು, 2023-24 ರಲ್ಲಿ ಹಣದುಬ್ಬರ ದರವು ಕೇವಲ 1.6 %ಕ್ಕೆ  ಇಳಿದಿದೆ ಎಂಬ ಅಸಂಬದ್ಧ ಪ್ರತಿಪಾದನೆಯನ್ನು ಆಧರಿಸಿವೆ. ಇದು ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ದರಗಳಿಗೆ ತದ್ವಿರುದ್ಧವಾಗಿದೆ. ಈ ಹಣದುಬ್ಬರ ಸುಮಾರು 6%, ಮತ್ತು ಆಹಾರ ಹಣದುಬ್ಬರ 10% ರಷ್ಟಿದೆ. ರಿಜರ್ವ್ ಬ್ಯಾಂಕ್ ಬೆಲೆ ಏರಿಕೆಯನ್ನು ತಡೆಯಲು ತನ್ನ ರೆಪೋ ದರವನ್ನು ಫೆಬ್ರವರಿ 2023 ರಿಂದಲೂ 6.5% ದಲ್ಲೇ ಹಿಡಿದಿಟ್ಟುಕೊಂಡಿದೆ ಎಂಬುದು ಭಾರತದಲ್ಲಿ ಹಣದುಬ್ಬರದ ನೈಜ ಕಥೆಯನ್ನು ಪ್ರಕಟಪಡಿಸುತ್ತದೆ.

ಕಳಪೆ ಬೆಳವಣಿಗೆಯ ಹೊರತಾಗಿಯೂ, ನಿಧಾನವಾಗಿ ಬೆಳೆಯುತ್ತಿರುವ ಆದಾಯದ ಹಂಚಿಕೆಯನ್ನು ದೊಡ್ಡ ಉದ್ಯಮಿಗಳು, ಶ್ರೀಮಂತರು ಮತ್ತು ಸಂಪನ್ನರ ಪರವಾಗಿ ತೀವ್ರವಾಗಿ ತಿರುಗಿಸಲಾಗಿದೆ. ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಕಾರ್ಪೊರೇಟ್ ತೆರಿಗೆಗಳು ಮತ್ತು ಆದಾಯ ತೆರಿಗೆಗಳ ಆದಾಯವು ಗಣನೀಯವಾಗಿ ಹೆಚ್ಚಿರುವುದು, ತೆರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಅಲ್ಲ, ಬದಲಿಗೆ ಒಟ್ಟು ಆದಾಯದಲ್ಲಿ ಶ್ರೀಮಂತರ ಪಾಲು ಹೆಚ್ಚಾದ ಕಾರಣದಿಂದಾಗಿ. ಇದು K-ಆಕಾರದ ಚೇತರಿಕೆ, ದುಡಿಯುವ ಜನರನ್ನು ಹೆಚ್ಚು ಕೆಲಸ ಮಾಡಿ, ಕಡಿಮೆ ಪಡೆಯುವಂತೆ ಹಿಂಡುವ ‘ಅಭಿವೃದ್ಧಿ’ ಎಂದು ಪೊಲಿಟ್‌ಬ್ಯುರೊ ವರ್ಣಿಸಿದೆ.

ಈ ಮಧ್ಯಂತರ ಬಜೆಟ್, ದುಡಿಯುವ ಜನರನ್ನು `ಬೆಳವಣಿಗೆಯಲ್ಲಿ ಪಾಲುದಾರರು’ ಎಂದೆಲ್ಲಾ ಹೇಳುವ, `ನಿಜವಾದ ಸಾಮಾಜಿಕ ನ್ಯಾಯ’ ಎಂದು  ಬಿಂಬಿಸುವ ಮೋದಿ ಪ್ರಚಾರ ಯಂತ್ರದ ಡಂಗುರದ ಪೊಳ್ಳುತನವನ್ನು ಸಂಪೂರ್ಣವಾಗಿ ಬಯಲಿಗೆಳೆಯುತ್ತದೆ. ಈ ಬಜೆಟ್ ಭಾರತದ ಬಹುಪಾಲು ದುಡಿಯುವ ಜನರ ಜೀವನೋಪಾಯಗಳನ್ನು ಹಿಂಡಿ, ಕೆಲವರು ಗರಿಷ್ಟ ಲಾಭಗಳನ್ನು ಗಿಟ್ಟಿಸುವಂತೆ ಮಾಡುವ ಮೋದಿ ಸರ್ಕಾರದ ದುಷ್ಟ `ಅಭಿವೃದ್ಧಿ ಮಾದರಿ’ಯನ್ನು ಮುಂದಕ್ಕೆ ಒಯ್ಯುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬುರೊ ತೀಕ್ಷ್ಣವಾಗಿ ಟೀಕಿಸಿದೆ.

 

Donate Janashakthi Media

Leave a Reply

Your email address will not be published. Required fields are marked *