ಪುಸ್ತಕ ವಿಮರ್ಶೆ : ಪ್ರತಿ ಹೆಣ್ಣಿಗೂ ತಾಯಿಯಾಗುವಂತಹ ಬಯಕೆ ಇದ್ದೇ ಇರುತ್ತದೆ

– ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು
ʻಎಂದೂ ಹುಟ್ಟದ ಮಗುವಿಗೆ ಪತ್ರʼ, ತಾಯ್ತನವನ್ನು ರೋಮ್ಯಾಂಟಿಕ್ ಪರಿಕಲ್ಪನೆಯಲ್ಲಿ ನೋಡುವವರ ಮಧ್ಯೆ ಈ ಕೃತಿ ವಿಶಿಷ್ಟವಾಗಿ ವಿಭಿನ್ನವಾಗಿ ನಿಲ್ಲುತ್ತದೆ ಈ ಕೃತಿಯನ್ನು ನಾನು ಪೂರ್ವಗ್ರಹ ಪೀಡಿತಳಾಗಿಯೇ ಓದಲು ಆರಂಭಿಸಿದೆ. ತಾಯ್ತನವನ್ನೇ ತನ್ನ ಸರ್ವಸ್ವ ಅಂತ ತಿಳ್ಕೊಂಡಿರುವಂತದ್ದು ಮತ್ತು ಪುರುಷ ಪ್ರಧಾನ ನೆಲೆಯಲ್ಲಿ ಹೆಣ್ಣು ಫಲವತ್ತತೆಯ ಸಂಕೇತವಾಗಿಯೇ ಇರುವಂತದ್ದು ಈ ದೃಷ್ಟಿ ಕೋನಗಳಲ್ಲಿ ಕೃತಿ ಇರುತ್ತೆ ಅಂತ ತಿಳ್ಕೊಂಡಿದ್ದೆ. ಆದರೆ ನನ್ನ ಊಹೆ ತಪ್ಪಾಗಿತ್ತು.  ಪುಸ್ತಕ ವಿಮರ್ಶೆ

ಈ ಕೃತಿಯನ್ನು ಓದ್ತಾ ಓದ್ತಾ ಮಾನಸಿಕ ದೂರವನ್ನು ಮೀರಿದಂತಹ ಒಂದು ಆತ್ಮೀಯತೆ ಬೆಳೆಯುತ್ತಾ ಹೋಯಿತು ಬಹುಶಃ ಅಲ್ಲಿ ಒರಿಯಾನ ಫೆಲಾಚಿ ಮಾತಾಡ್ತಿಲ್ವೇನೋ ನಾನೇ ಮಾತಾಡುತ್ತಿದ್ದಿನೇನೋ ಎಂಬ ಭಾವನೆ ಮೂಡುತಿತ್ತು. ಪ್ರತಿ ಹೆಣ್ಣಿಗೂ ತಾಯಿಯಾಗುವಂತಹ ಬಯಕೆ ಇದ್ದೇ ಇರುತ್ತದೆ. ಆ ತಾಯಿ ಆಗುವಂಥ ಸಂದರ್ಭದಲ್ಲಿ ಆಗುವ ತಳಮಳಗಳು, ಆರೋಗ್ಯದಲ್ಲಿನ ಏರುಪೇರುಗಳು, ಒಂದು ಮಗುವಿಗೋಸ್ಕರ ತನ್ನ ಸರ್ವಸ್ವವನ್ನು ಒತ್ತೆಯಿಡಬೇಕು ಅನ್ನುವಂತಹ ಅಂಶಗಳು, ಒಲ್ಲದ ಮನಸ್ಸಿನಿಂದಲೇ ಇವೆಲ್ಲವನ್ನೂ ಸ್ವೀಕರಿಸುವಂತಹ ಹೆಣ್ಣು ತಾಯಿಯಾಗಲು ಮಾನಸಿಕವಾಗಿ ತಯಾರಾಗುತ್ತಾಳೆ ಅಥವಾ ತಯಾರು ಮಾಡಲಾಗುತ್ತದೆ. ಅಂತಹ ಹೆಣ್ಣು ಈ ಸಮಾಜದಲ್ಲಿ ದೇವತೆಯಾಗಿ ನಿಂತುಬಿಡುತ್ತಾಳೆ. ಮಗುವಿಗೆ ಪತ್ರ

ತಾನು ಬದುಕಬೇಕು, ತನಗೆ ಸ್ವತಂತ್ರ ಬೇಕು, ತನ್ನ ಅಸ್ತಿತ್ವ ಏನು? ಇನ್ನೊಬ್ಬರ ನೆರಳಿನಲ್ಲಿ, ಇನ್ನೊಬ್ಬರ ಅಡಿಯಾಳಾಗಿ ಇರಲಿಕ್ಕೆ ಇಷ್ಟಪಡದೇ ಇರುವಂತಹ ಹೆಣ್ಣು ಅಪರಾಧಿಯಾಗಿ ನಿಲ್ತಾಳೆ. “ನನಗೂ ಸ್ವಾತಂತ್ರ್ಯವಿದೆ ಯಾರು ಅದನ್ನು ನನ್ನಿಂದ ಕಸಿದುಕೊಳ್ಳಲಾಗದು ನೀನು ಸಹ ನಿನ್ನಿಂದ ನನಗೆ ಈ ರೀತಿಯ ಖಿನ್ನತೆಗಳಾಗುತ್ತಿವೆ. ನಿನ್ನನ್ನು ನಾನು ಇನ್ನು ಮುಂದೆ ಸಹಿಸಲಾರೆ”. “ನನ್ನ ದೇಹವೇನೋ ನಿನ್ನನ್ನು ಹೊರುವ ಪಾತ್ರೆಯಾಗಿರಬಹುದು ಅದಕ್ಕಾಗಿ ನನ್ನೆಲ್ಲ ಸರ್ವಸ್ವವನ್ನು ತ್ಯಾಗ ಮಾಡಬೇಕೆಂದರೆ ನಾನು ಸಿದ್ದಳಿಲ್ಲ”. ಬಹುಶಃ ತಾಯಿಯಾಗುವಂತಹ ಎಲ್ಲ ಹೆಣ್ಣು ಮಕ್ಕಳಲ್ಲಿ ಇರುವಂತಹ ಭಯಮಿಶ್ರಿತ ಭಾವನೆ. ಈಕೆ ಮದುವೆಯಾಗದೆ ತಾಯಿಯಾಗುತ್ತಿರುವವಳು. ಆ ಮಗುವಿನ ತಂದೆಗೂ ಬೇಡವಾದ, ಸಮಾಜಕ್ಕೂ ಬೇಡವಾದ ಭ್ರೂಣ ಅದು. ಒಂದು ಅಸ್ತಿತ್ವವನ್ನ ತನ್ನ ಒಡಲಲ್ಲಿಟ್ಟುಕೊಂಡು ಆ ಅಸ್ತಿತ್ವದ ಜೊತೆಗೆ ಸಂಭಾಷಣೆ ಮಾಡುವಂತಹ ರೀತಿ ನಿಜಕ್ಕೂ ಆಶ್ಚರ್ಯ. ಎಲ್ಲಾ ಹೆಣ್ಣು ಮಕ್ಕಳು ತಮ್ಮ ಒಡಲಲ್ಲಿರುವ ಮಗುವಿನ ಜೊತೆಗೆ ಹಾಗೆಯೇ ಮಾತಾನಾಡಿರುತ್ತಾರೆ. ಪುಸ್ತಕ ವಿಮರ್ಶೆ

ಇದನ್ನು ಓದಿ : ವಿಪಕ್ಷಗಳ ಜೊತೆ ನಂಟಿದೆ ಎಂದು ಒಪ್ಪಲು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ | ನ್ಯಾಯಾಲಯಕ್ಕೆ ತಿಳಿಸಿದ ಸಂಸತ್‌ ಭದ್ರತಾ ಲೋಪ ಪ್ರಕರಣದ ಆರೋಪಿಗಳು

ಆದರೆ ಇಲ್ಲಿ ಸ್ವಲ್ಪ ಭಿನ್ನ. ಆಕೆ ಮಗುವಿಗಾಗಿ ಹೇಳುವ ಕಥೆಗಳು ದುರಂತ ಕಥೆಗಳಾಗಿ ಈ ಸುತ್ತಣ ಸಮಾಜದ ನಿಜಮುಖಗಳನ್ನು ಪರಿಚಯಿಸುತ್ತವೆ ಖಂಡಿತವಾಗಿಯೂ ಸಮಾಜ ನಾ ಒಂದು ಕೊಂಡಂತೆ ಸುಂದರವಾಗಿಲ್ಲ ಅದನ್ನು ತಿಳಿಸಿಯೇ ಬೆಳೆಸಬೇಕೆನ್ನುವ ಆಕೆಯ ನಿರ್ಧಾರ ಸ್ವಾಗತಾರ್ಹ. ತನ್ನ ಜೀವನಕ್ಕಾಗಿ ದುಡಿಯುವ ಅನಿವಾರ್ಯತೆ ಮತ್ತು ಜಡತ್ವ ಬಯಸದೆ ಹೋರಾಡುವ ಹೆಣ್ಣು ಅದನ್ನ ಕಳ್ಕೊಂಡ್ಮೇಲೆ ಒಬ್ಬಳೆ ಹೊಣೆಗಾರ್ತಿಯಾಗಿರುತ್ತಾಳೆ. ಮಗುವನ್ನ ತೆಗೆಸಿಬಿಡು ಎಂದು ಹೇಳಿದ ತಂದೆ, ಅವಳ ಬಾಸ್, ಮೊದಲು ಶುಶ್ರೂಷೆ ಮಾಡುತ್ತಿದ್ದ ಡಾಕ್ಟರ್ ಸಹ ಅವಳನ್ನು ಅಪರಾಧಿ ಅಂತ ಹೇಳುತ್ತಾಳೆ. ಮಗುವಿನ ಅಸ್ತಿತ್ವದಲ್ಲಿ ತಂದೆಯ ಪಾತ್ರವೇನು ಅಂತ ನೋಡಿದಾಗ ಒಂದು ವೀರ್ಯಕಣ ಬಿಟ್ಟರೆ ಮತ್ತೇನು ಇಲ್ಲ. ಆ ವೀರ್ಯದಾನ ಮಾಡಿದ್ದೋ….. ಪತ್ರ ಅಥವಾ ತನ್ನ ದೇಹದ ಬಯಕೆಗಳನ್ನು ತೀರಿಸಿಕೊಂಡಿರುವ ಕಾರಣಕ್ಕೋ ಅದು ಮಗುವಿನ ರೂಪ ಪಡೆದರೆ ಅಧಿಕಾರ ಚಲಾಯಿಸುವ ಹಕ್ಕು ಪುರುಷನಿಗೆ ಧಾರಾಳವಾಗಿ ಬಂದುಬಿಡುತ್ತದೆ. ಅದಕ್ಕಾಗಿ ಬರುವ ಹೆಣ್ಣಿನ ಅಸ್ತಿತ್ವವನ್ನೇ. ಆಕೆಯ ಗರ್ಭದಲ್ಲಿದ್ದ ಮಗು ಆಕೆ ಅಪರಾಧಿಯೋ ಅಲ್ಲವೋ ಎಂದು ತೀರ್ಮಾನಿಸಬೇಕು ಎಂದು ಹೇಳಿದಾಗ ಎಲ್ಲಿಂದಲೋ ಒಂದು ಧ್ವನಿ ಕೇಳುತ್ತದೆ ಆ ಧ್ವನಿಯು ವಯಸ್ಕ ಪುರುಷನ ಧ್ವನಿಯಾಗಿರುತ್ತದೆ “ಅಮ್ಮ ನೀನು ಅಪರಾಧಿ ನೀನು ನನ್ನನ್ನು ಕೊಲ್ಲದೆ ಹೋದರೂ ಕೊಲ್ಲುವಂತಹ ಎಲ್ಲಾ ನಿರ್ಧಾರಗಳನ್ನು ನೀನು ಮಾಡಿದ್ದೆ” ಎನ್ನುತ್ತಾನೆ. ಅದು ಸಹ ಪುರುಷನೇ ಅಲ್ಲವೇ ಹೆಣ್ಣಿನ ಅಂತರಾಳವನ್ನು ತಿಳಿದುಕೊಳ್ಳಲು ಹೇಗೆ ತಾನೇ? ಅಲ್ಲಿಗೆ ತನ್ನ ದೇಹದಲ್ಲಿ ಆಗುವಂತಹ ಎಲ್ಲಾ ಬದಲಾವಣೆಗಳನ್ನು, ತಿರಸ್ಕಾರಗಳನ್ನು, ಅಪಮಾನವನ್ನು ನುಂಗಿಕೊಂಡು ಬದುಕಿದರೆ ಮಾತ್ರ ಹೆಣ್ಣಾಗುತ್ತಾಳೆ. ಮಗುವಿಗೆ ಪತ್ರ

ಇಲ್ಲಿ ಬರುವ ಹೆಣ್ಣು ತಾಯಿಯಾಗುತ್ತಿರುವವಳು, ತನ್ನ ಅಸ್ತಿತ್ವವನ್ನು, ಸ್ವಾತಂತ್ರವನ್ನು, ಇರುವಿಕೆಯನ್ನ ಹುಡುಕಿಕೊಳ್ಳೋದಕ್ಕೆ ಪ್ರಯತ್ನ ಪಡುವುದರಿಂದ ಆಕೆ ಸಮಾಜದ ದೃಷ್ಟಿಯಲ್ಲಿ ಹೆಣ್ಣಲ್ಲ. ವಾಸ್ತವವಾಗಿ ಕೇವಲ ಒಂದು ಮಗುವಿಗಾಗಿ ಇಡೀ ತನ್ನ ಅಸ್ತಿತ್ವವನ್ನು ಅಡಮಾನ ಇಡುತ್ತಾಳೆ ಅಂತ ಅಂದ್ರೆ ನಿಜವಾಗಿಯೂ ಇದಕ್ಕಿಂತ ದುರಂತ ಯಾವುದು ಇಲ್ಲ. ಪ್ರಸ್ತುತದಲ್ಲೂ 40-50 ವರ್ಷಗಳಾದ್ರೂ ಕೂಡ ತಮ್ಮದೇ ರಕ್ತದ ಮಗು ಬೇಕು ಎಂದು ಐವಿಎಫ್ ಮಾಡಿಸಿಕೊಳ್ಳುವಂತಹ ಈ ಕಾಲಘಟ್ಟದಲ್ಲಿ ಇಂತಹ ಮಹಿಳೆಯರು ಮಾದರಿಯಾಗಬೇಕು. ಈ ಕೃತಿ ರಚನೆಯಾದ ಕಾಲಕ್ಕಾಗಲೇ ಐವಿಎಫ್ ಇತ್ತು ಎಂಬುದನ್ನು ನಾವು ಗಮನಿಸಬೇಕಾದ ಸಂಗತಿ ಈ ಕೃತಿಯಲ್ಲಿಯೇ ಬರುತ್ತದೆ . ಎಂದೂ ಹುಟ್ಟದ ಮಗುವಿಗೆ ಪತ್ರ (ಅದೇ ಮಗು ಮತ್ತೆ ಹುಟ್ಟುವುದಿಲ್ಲ, ಎಷ್ಟೇ ಗರ್ಭ ಧರಿಸಿದರೂ ಆ ಮಗುವೇ ಬೇರೆ…..) ಯಾರಾದರೂ ತನ್ನದೇ ಕಥನ ಅಂತ ಹೇಳಿ ಓದಿಸಿಕೊಂಡು ಹೋಗುವಂತಹದ್ದು. ಪುಸ್ತಕ ವಿಮರ್ಶೆಮಗುವಿಗೆ ಪತ್ರ

ಇದನ್ನು ನೋಡಿ : ಓ! ಹಾಗಾದರೆ ನೀವೂ ನಮ್ಹಾಗೆ…! ಮೂಲ : ಫಾಹ್ಮಿದಾ ರಿಯಾಜ್, ಭಾವಾನುವಾದ – ಬಿ.ಸುರೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *