ಅತಂತ್ರ ಎದುರಾದರೆ ಟಿಎಂಸಿ-ಬಿಜೆಪಿ ಮೈತ್ರಿ ಸರಕಾರ: ಮಿಶ್ರಾ ಆರೋಪ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಚುನಾವಣೆ ನಂತರ ಅತಂತ್ರ ಎದುರಾದಲ್ಲಿ ಟಿಎಂಸಿ-ಬಿಜೆಪಿ ಪಕ್ಷಗಳು ಕೈಜೋಡಿಸಬಹುದು ಸ್ಪಷ್ಟವಾಗುತ್ತಿದೆ ಎಂದು ಸಿಪಿಐ(ಎಂ) ಪಶ್ಚಿಮ ಬಂಗಾಳ ಕಾರ್ಯದರ್ಶಿ ಸೂರ್ಯ ಕಾಂತ ಮಿಶ್ರಾ ಹೇಳಿದ್ದಾರೆ.

ಅಲ್ಲದೆ ರಾಜ್ಯದಲ್ಲಿ ಇನ್ನು ಐದು ಹಂತದ ಮತದಾನ ಪ್ರಕ್ರಿಯೆ ಬಾಕಿ ಇದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : ದ್ವೇಷಪೂರಿತ ಭಾಷಣ, ಬಿಜೆಪಿ ಅಭ್ಯರ್ಥಿ ಸುವೇಂದು ಅವರಿಗೆ ಚುನಾವಣಾ ಆಯೋಗ ನೋಟಿಸ್‌ ಜಾರಿ

ಎಡಪಕ್ಷಗಳು, ಕಾಂಗ್ರೆಸ್‌ ಮತ್ತು ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್‌) ಪಕ್ಷಗಳು ಬಂಗಾಳದ ವಿಧಾನಸಭೆಗೆ ಸಂಯುಕ್ತಾ ಮೋರ್ಚಾ ರಂಗ ಮಾಡಿಕೊಂಡಿದ್ದು ಚುನಾವಣೆ ಸಂದರ್ಭದಲ್ಲಿ ಹಲವಾರು ದುಷ್ಕೃತ್ಯಗಳ ಬಗ್ಗೆ ಆಯೋಗಕ್ಕೆ ಹಲವಾರು ಬಾರಿ ದೂರುಗಳನ್ನು ನೀಡದ್ದರೂ ಸಹ ಯಾವುದೇ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಸಮಾಧಾನವನ್ನು ವ್ಯಕ್ತಪಡಿಸಿದರು.

ಚುನಾವಣಾ ಫಲಿತಾಂಶದ ಬಗ್ಗೆ ಅತಂತ್ರ ಎದುರಾದರೆ ಟಿಎಂಸಿಯೊಂದಿಗೆ ಕೈಜೋಡಿಸುವ ಸಾಧ್ಯತೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಸೂರ್ಯ ಕಾಂತ ಮಿಶ್ರಾ ಅವರು ಇದು ಕೇವಲ ವದಂತಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ : ಪಶ್ಚಿಮ ಬಂಗಾಳ ಚುನಾವಣೆ: ‘ಘೆರಾವ್ ಸಿಆರ್‌ಪಿಎಫ್’ ಹೇಳಿಕೆ ಕುರಿತು ಮಮತಾ ಬ್ಯಾನರ್ಜಿಗೆ ಇಸಿ ನೋಟಿಸ್

ಇಂದು ಪ್ರೆಸ್ ಕ್ಲಬ್ ಕೋಲ್ಕತಾ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಅವರು ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಚುನಾವಣಾ ಆಯೋಗದ ತಟಸ್ಥ ನೀತಿಗೆ ಬಗ್ಗೆ ವಿವರಿಸದ ಸೂರ್ಯ ಕಾಂತ ಮಿಶ್ರಾ ಅವರು “ಚುನಾವಣಾ ಅಕ್ರಮಗಳ ಬಗ್ಗೆ ಆಯೋಗಕ್ಕೆ ಹಲವಾರು ದೂರುಗಳನ್ನು ದಾಖಲಿಸಿದ್ದೇವೆ. ಆದರೆ ಅವುಗಳಲ್ಲಿ ಯಾವುದನ್ನೂ ಪರಿಹರಿಸಲಿಲ್ಲ. ಗಂಭೀರವಾದ ವಿವಿಧ ಘಟನೆಗಳು ನಡೆದಿವೆ. ಅವುಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಅವರು (ಇಸಿ) ಟಿಎಂಸಿ ಮತ್ತು ಬಿಜೆಪಿಯನ್ನು ಸಂತೋಷಪಡಿಸುವ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ತೋರುತ್ತದೆ” ಎಂದು ಸಭೆಗೆ ತಿಳಿಸಿದರು.

ಇದನ್ನು ಓದಿ : ಪಶ್ಚಿಮ ಬಂಗಾಳದ ಉದ್ಯೋಗ ಬಿಕ್ಕಟ್ಟು: ತೃಣಮೂಲದ ಒಂದು ದಶಕದ ಆಡಳಿತ

ರಾಜ್ಯದಲ್ಲಿ ಸಂಯುಕ್ತ ಮೋರ್ಚಾ ಸರಕಾರ ರಚಿಸಲು ಚುನಾವಣಾ ಕಣದಲ್ಲಿದೆ. ರಾಜ್ಯದ ಜನತೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ವಿರುದ್ಧಆಕ್ರೋಶಗೊಂಡಿದ್ದಾರೆ ಎಂದರೆ  ಟಿಎಂಸಿ ಹಾಗೂ ಬಿಜೆಪಿ ಮೈತ್ರಿ ಸರಕಾರ ರಚಿಸಲು ಸಾಧ್ಯವಾಗದಷ್ಟು ಸ್ಥಾನ ಗೆಲ್ಲಬಹುದು ಎಂಬುದು ಜನತೆ ಸಂಯುಕ್ತಾ ಮೋರ್ಚಾದ ಅಭ್ಯರ್ಥಿಗಳ ಪ್ರಚಾರದ ಬಗ್ಗೆ ವ್ಯಕ್ತಪಡಿಸುತ್ತಿರುವ ಉತ್ಸಾಹವನ್ನು ಗಮನಿಸಬಹುದು ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಮತದಾನ ಪ್ರಕ್ರಿಯೆಯಲ್ಲಿ ಈಗಾಗಲೇ ಮೂರು ಹಂತದ ಮತದಾನ ನಡೆದಿದೆ. ಉಳಿದ ಐದು ಹಂತದ ಮತದಾನ ಪ್ರಕ್ರಿಯೆ ಬಾಕಿ ಇದೆ. ಮೇ 2 ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *