ಬೆಂಗಳೂರು: ಈಚೆಗೆ ನಮ್ಮ ಗೃಹ ಮಂತ್ರಿಗಳಾದ ಶ್ರೀ ಜಿ.ಪರಮೇಶ್ವರ ರವರು ಸೌಜನ್ಯ ಪ್ರಕರಣ ಮುಗಿದ ಅಧ್ಯಾಯವೆಂದು ಪ್ರಕಟಿಸಿರುವುದನ್ನು ಸಿಪಿಐ(ಎಂ) ಖಂಡಿಸಿದೆ.
ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು, ಸೌಜನ್ಯ ಪ್ರಕರಣ ನಡೆದು ಒಂದು ದಶಕವೇ ಪೂರೈಸಿದ್ದರೂ, ತನಿಖಾ ಸಂಸ್ಥೆಗಳಿಗೆ ಆರೋಪಿಯನ್ನು ಕಂಡು ಹಿಡಿಯಲು ಸಾಧ್ಯವಾಗದಿರುವಾಗ, ಈ ರೀತಿಯ ಹೇಳಿಕೆಗಳು, ಗೃಹ ಸಚಿವಾಲಯ ಮತ್ತು ರಾಜ್ಯ ಸರಕಾರದ ಕುರಿತಂತೆ ರಾಜ್ಯದ ಜನತೆ ಯಾವ ರೀತಿ ಜನತೆಯಲ್ಲಿ ಆತಂಕ ಉಂಟು ಮಾಡಿದೆ ಮತ್ತು ಸರಕಾರದ ನಡೆಯ ಭಾವಿಸಬಹುದು! ಈ ಹೇಳಿಕೆಯು ರಾಜ್ಯ ಕುರಿತು ಅನುಮಾನಿಸುವಂತಾಗಿದೆ ಎಂದರು.
ಇದನ್ನೂ ಓದಿ:ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಂಧನಕ್ಕೆ : ಸಿಪಿಐಎಂ ಆಗ್ರಹ
ಈಗಲೂ ಸೌಜನ್ಯ ಪ್ರಕರಣದಲ್ಲಿ ಆರೋಪಿ ಯಾರೆಂದು ತನಿಖಾ ಸಮಿತಿಗಳಿಗೆ ಗುರುತಿಸಲಾಗಲಿಲ್ಲ! ಈ ನಡುವೆ ಸೌಜನ್ಯ ಪ್ರಕರಣದ ಪ್ರಮುಖ ಸಾಕ್ಷಿಗಳು ಕೊಲ್ಲಲಟ್ಟಿದ್ದಾರೆ, ಇದೆಲ್ಲವೂ ಜನತೆಯ ನಡುವೆ ನಮ್ಮ ತನಿಖಾ ಸಂಸ್ಥೆಗಳು ಇಷ್ಟು ದುರ್ಬಲವೇ ಅಥವಾ ತನಿಖಾ ಸಂಸ್ಥೆಯನ್ನು ಸ್ವತಂತ್ರವಾಗಿ ತನಿಖೆ ನಡೆಸದಂತೆ ಒತ್ತಡ ಹೇರಿ ಅಪರಾಧಿಯನ್ನು ರಕ್ಷಿಸುವಂತೆ ಅಧಿಕಾರ ದುರುಪಯೋಗ ಮಾಡಲಾಯಿತೇ?’ ಎಂಬ ಪ್ರಶ್ನೆಗಳನ್ನು ಮತ್ತು ಆತಂಕಗಳನ್ನು ಹುಟ್ಟು ಹಾಕಿದೆ ಎಂದು ಹೇಳಿದರು.
ಈ ಘಟನೆಯ ಸಮಯದ ಸುತ್ತಲೂ ಆ ಪ್ರದೇಶದಲ್ಲಿ 400 ಕ್ಕೂ ಹೆಚ್ಚು ಕೊಲೆಗಳು ಹಾಗೂ ಆತ್ಮಹತ್ಯೆಗಳು ನಡೆದಿವೆ ಎನ್ನಲಾಗಿದೆ. ಈ ಎಲ್ಲದರ ಕುರಿತಂತೆ, ಆತಂಕಿತ ಜನತೆ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ನ್ಯಾಯ ಕೋರಿ ಜನ ಚಳುವಳಿಗಳನ್ನು ಪುನಹ ಆರಂಭಿಸಿವೆ ಎಂದು ಹೇಳಿದರು.
ಇದೆಲ್ಲವನ್ನು ಗಮನಿಸಿ, ರಾಜ್ಯ ಸರಕಾರ, ಗೃಹ ಸಚಿವ ಶ್ರೀ ಪರಮೇಶ್ವರವರ ಹೇಳಿಕೆಯನ್ನು ಹಿಂಪಡೆದು, ಈ ಪ್ರಕರಣಗಳನ್ನು ವಿಶೇಷ ತನಿಖಾ ಸಮಿತಿಗಳಿಗೆ ವಹಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಮನವಿ ಮಾಡುತ್ತದೆ. ಮುಖ್ಯ ಮಂತ್ರಿಗಳು, ಪಕ್ಷಪಾತಕ್ಕೆ ಅವಕಾಶವಿಲ್ಲದಂತಹ, ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಆಗ್ರಹಿಸಿದ್ದಾರೆ.