ಜೈಪುರ: “ಇಡೀ ದೇಶದೊಂದಿಗೆ, ಪಾಕಿಸ್ತಾನ ಕೂಡಾ ರಾಜಸ್ಥಾನದ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದು… ಮುಖ್ಯುವಾಗಿ ಲಾಹೋರ್ ಟೋಂಕ್ ಸ್ಥಾನದ ಮೇಲೆ ಕಣ್ಣಿಟ್ಟಿದೆ” ಎಂದು ವಿವಾದಿತ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಮಂಗಳವಾರ ಹೇಳಿಕೆ ನೀಡಿದ್ದಾರೆ. ಅವರು ರಾಜಸ್ಥಾನ ಟೋಂಕ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಲ್ಲಿ ಕಾಂಗ್ರೆಸ್ನಿಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಸಚಿನ್ ಪೈಲೆಟ್ ಸ್ಪರ್ಧಿಯಾಗಿದ್ದಾರೆ. 200 ಸದಸ್ಯ ಬಲವಿರುವ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದೆ.
ಸಭೆಯಲ್ಲಿ ಮಾತನಾಡಿದ ಬಿಧುರಿ, “ಟೋಂಕ್ನಲ್ಲಿರುವ ಜನರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರಿಗೆ ಆಶ್ರಯ ನೀಡುತ್ತಾರೆ. ಇನ್ನು ಲಾಹೋರ್ ಚುನಾವಣೆಯ ಮೇಲೆ ಕಣ್ಣಿಟ್ಟಿದೆ… ಚುನಾವಣೆ ಮುಗಿದ ನಂತರ ಲಾಹೋರ್ನಲ್ಲಿ ಲಡ್ಡು ಹಂಚದಂತೆ ಎಚ್ಚರ ವಹಿಸಬೇಕು. ಮುಂಬರುವ ಚುನಾವಣೆಯ ಫಲಿತಾಂಶದ ಮೇಲೆ ಹಮಾಸ್ನಂತಹ ಭಯೋತ್ಪಾದಕರು ಕೂಡ ಕಣ್ಣಿಟ್ಟಿದ್ದಾರೆ” ಎಂದು ದಕ್ಷಿಣ ದೆಹಲಿ ಸಂಸದರೂ ಆಗಿರುವ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ಸಿಡಿದು 60 ಕ್ಕೂ ಹೆಚ್ಚು ಮಂದಿಗೆ ಗಾಯ, ಹಲವರ ಕಣ್ಣಿಗೆ ಹಾನಿ
ಬಿಧುರಿ ಅವರ ಹೇಳಿಕೆಗಳು ರಾಜ್ಯದಲ್ಲಿ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ರಾಜಸ್ಥಾನವನ್ನು ಕಾಂಗ್ರೆಸ್ನಿಂದ ಅಧಿಕಾರ ಹಿಡಿಯಲು ಬಿಜೆಪಿ ಸತಾಯಗತ ಹೋರಾಟ ನಡೆಸುತ್ತಿದೆ. ವಿವಾದಿತ ಸಂಸದರಾಗಿರುವ ರಮೇಶ್ ಅವರನ್ನು ಬಿಜೆಪಿ ಟೋಂಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ.
ವಿವಾದಾತ್ಮಕ ಹೇಳಿಕೆಗಳ ಮೂಲಕವೆ ಪ್ರವರ್ಧಮಾನಕ್ಕೆ ಬಂದಿರುವ ರಮೇಶ್, ಇತ್ತೀಚೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಅವಹೇಳನಕಾರಿ ಜನಾಂಗೀಯ ಹೇಳಿಕೆ ನೀಡಿದ್ದರು. ಅವರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಅದಾಗ್ಯೂ, ಬಿಜೆಪಿ ಅವರನ್ನು ಸಚಿಲ್ ಪೈಲೆಟ್ ಅವರು ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದೆ.
ರಮೇಶ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಅಂತಹ ವರ್ತನೆಯನ್ನು ಪುನರಾವರ್ತಿಸಿದರೆ “ಕಠಿಣ ಕ್ರಮ” ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಘಟನೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಬಿಧುರಿ ಅವರನ್ನು ಕರೆಸಿದ್ದರು ಎಂದು ವರದಿಯಾಗಿದೆ.
ವಿಡಿಯೊ ನೋಡಿ: ಕಾರ್ನಾಡ್ ನೆನಪು : ಕಾರ್ನಾಡ್ ನಾಟಕಗಳಲ್ಲಿ ʻಪೌರಾಣಿಕ ವಸ್ತುʼ – ಡಾ.ಎಚ್, ಎಲ್, ಪುಷ್ಪಾರವರ ಮಾತುಗಳು