ದೇವದುರ್ಗ (ಜಾಲಹಳ್ಳಿ) : ಇಲ್ಲಿಗೆ ಹತ್ತಿರವಿರುವ ಚಿಂಚೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಮಾನಂದ ಗುಡ್ಡದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು ₹ 45 ಸಾವಿರ ರೂ.ವೆಚ್ಚದ ಎರಡು ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಪ್ರಾಣಿ ಪಕ್ಷಿಗಳಿಗೆ ಜೀವ ಜಲ ಸಿಕ್ಕಂತಾಗಿದೆ.
ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಗುಡ್ಡದಲ್ಲಿರುವ ವನ್ಯಜೀವಿಗಳಿಗೆ ಕುಡಿಯುವ ನೀರಿನ ಆಹಾ ಕಾರ ಶುರುವಾಗಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಎರಡು ನೀರಿನ ತೊಟ್ಟಿಗಳನ್ನು ನಿರ್ಮಾಸಿದ್ದರೂ ನೀರಿನ ಸಂಪರ್ಕ ಇಲ್ಲದೆ ಹೊಲಗಳಲ್ಲಿ ಇರುವ ಖಾಸಗಿ ಬೋರವೆಲ್ ನಿಂದ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತಿದೆ.
ಇದನ್ನೂ ಓದಿ : ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು
ಆಗ್ರಹ: ಪರಮಾನಂದ ಗುಡ್ಡದಲ್ಲಿ ಸಾವಿರಕ್ಕೂ ಹೆಚ್ಚು ಮರಗಳಿದ್ದು,ಪ್ರತಿ ವರ್ಷ ಪರಮಾನಂದ ಸೇವಾ,ಸಾಮೂಹಿಕ ವಿವಾಹವಾಗಳು ಜರುಗುತ್ತವೆ.ಅರಣ್ಯ ಇಲಾಖೆ ಮರಗಳಿಗೆ ಶಾಶ್ವತ ನೀರು ಉಣಿಸುವ ಕ್ರಿಯಾ ಯೋಜನೆ ತಯಾರುಸಿಕೊಳ್ಳಬೇಕಿದೆ.ಮರಗಳು ಅಚ್ಚ ಹಸಿರಿನಿಂದ ಕೂಡಿದರೆ ವನ್ಯಜೀವಿಗಳ ದಂಡೆ ಇಲ್ಲಿಗೆ ಹರಿದು ಬರುತ್ತಿದೆ. ಇದರಿಂದ ಈ ಭಾಗದಲ್ಲಿ ಒಂದು ಉತ್ತಮ ಪ್ರವಾಸಿಗರ ತಾಣವಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಗಮನಹರಿಸಿ ಶಾಶ್ವತ ಕುಡಿಯುವ ನೀರಿನ ಸಂಪರ್ಕ ಜೋತೆಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ರೈತ ಸಂಘದ ಮುಖಂಡರಾದ ಬಸವರಾಜ ನಾಯಕ,ಚಂದ್ರಶೇಖರ ನಾಯಕ ಆಗ್ರಹಿಸಿದರು