ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ “ ನ್ಯಾಯಪತ್ರʼದ ಹೆಸರಿನ ಪಕ್ಷದ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆ ಅಧ್ಯಕ್ಷ ಪಿ.ಚಿದಂಬರಂ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ಪೂರ್ಣ ರಾಜ್ಯತ್ವ ಘೋಷಿಸಲಾಗುವುದು ಎಂದಿದೆ. ಅಲ್ಲದೇ ಕನಿಷ್ಠಬೆಂಬಲಬೆಲೆ (ಎಂಎಸ್‌ಪಿ) ಗಾಗಿ ಕಾನೂನು ರಚನೆ ಸೇರಿದಂತೆ ಮತ್ತಿತ್ತರ ಪ್ರಮುಖ ಅಂಶಗಳನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದೆ. ಈ ಪ್ರಣಾಳಿಕೆಯು 5 ‘ನ್ಯಾಯ’ ಮತ್ತು 25 ‘ಖಾತರಿ’ಗಳನ್ನು ಒಳಗೊಂಡಿದೆ. ಆಧರಿಸಿದೆ. ಕಾಂಗ್ರೆಸ್ ಪ್ರಣಾಳಿಕೆ
ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ ಚಿದಂಬರಂ ಪ್ರಣಾಳಿಕೆ ಬಿಡುಗಡೆ ಕುರಿತು ಮಾತನಾಡಿ, “ನಾವು ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸುತ್ತೇವೆ. ಲಡಾಖ್‌ನ ಬುಡಕಟ್ಟು ಪ್ರದೇಶಗಳನ್ನು ಸೇರಿಸಲು ನಾವು ಸಂವಿಧಾನದ ಆರನೇ ಶೆಡ್ಯೂಲ್ ಅನ್ನು ತಿದ್ದುಪಡಿ ಮಾಡುತ್ತೇವೆ. “ಪಾಕಿಸ್ತಾನದೊಂದಿಗಿನ ಸಂಬಂಧವು ಮೂಲಭೂತವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸುವ ಅದರ ಇಚ್ಛೆ ಮತ್ತು ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.””ಕಾಂಗ್ರೆಸ್ ಅಗ್ನಿಪಥ್ ಯೋಜನೆಯನ್ನು ರದ್ದಪಡಿಸಿ ನಮ್ಮ ಸೈನಿಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವ ಸೇನೆ, ನೌಕಾಪಡೆ ಮತ್ತು ವಾಯುಪಡೆ ಅನುಸರಿಸುವ ಸಾಮಾನ್ಯ ನೇಮಕಾತಿ ಕಾರ್ಯವಿಧಾನಗಳನ್ನು ಜಾರಿಗೊಳಿಸಲಾಗುವುದು ಎಂದರು. ಕಾಂಗ್ರೆಸ್ ಪ್ರಣಾಳಿಕೆ
“ಲಡಾಖ್‌ನಲ್ಲಿ ಚೀನಾದ ಒಳನುಗ್ಗುವಿಕೆ ಮತ್ತು 2020 ರಲ್ಲಿ ಗಾಲ್ವಾನ್ ಘರ್ಷಣೆಯು ದಶಕಗಳಲ್ಲಿ ಭಾರತೀಯ ರಾಷ್ಟ್ರೀಯ ಭದ್ರತೆಗೆ ದೊಡ್ಡ ಹೊಡೆತವನ್ನು ನೀಡಿತು. ಜೂನ್ 19, 2020 ರಂದು, ಪ್ರಧಾನಿ ನರೇಂದ್ರ ಮೋದಿ, ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದರಿಂದ ನಮ್ಮ ಮಾತುಕತೆಯ ಸ್ಥಾನವು ಸಾಕಷ್ಟು ದುರ್ಬಲವಾಯಿತು. 21 ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳ ಹೊರತಾಗಿಯೂ, ಚೀನಾದ ಪಡೆಗಳು ಭಾರತೀಯ ಭೂಪ್ರದೇಶವನ್ನು ಆಕ್ರಮಿಸುವುದನ್ನು ಮುಂದುವರೆಸಿದೆ ಮತ್ತು ಪೂರ್ವ ಲಡಾಖ್‌ನಲ್ಲಿರುವ 65 ಗಸ್ತು ಕೇಂದ್ರಗಳಲ್ಲಿ 26 ಕ್ಕೆ ಭಾರತೀಯ ಪಡೆಗಳಿಗೆ ಪ್ರವೇಶವನ್ನು ನಿರಾಕರಿಸಿದೆ, ಇದು 2,000 ಚದರ ಕಿ.ಮೀ ಪ್ರದೇಶಕ್ಕೆ ಸಮಾನವಾಗಿದೆ. ಡೋಕ್ಲಾಮ್‌ನಲ್ಲಿ ಚೀನಾ ನಿರ್ಮಾಣವು ಈಶಾನ್ಯ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಸಿಲಿಗುರಿ ಕಾರಿಡಾರ್‌ಗೆ ಅಪಾಯವನ್ನುಂಟುಮಾಡುತ್ತದೆ. ಔಪಚಾರಿಕ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ಅನುಪಸ್ಥಿತಿಯಿಂದಾಗಿ, ನೀತಿ ನಿರೂಪಣೆಯು ತಾತ್ಕಾಲಿಕ ಮತ್ತು ವೈಯಕ್ತಿಕವಾಗಿದೆ. “ವಿವರವಾದ ಚರ್ಚೆಯ ನಂತರ, ಕಾಂಗ್ರೆಸ್ ಸಮಗ್ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ನೀಡುವುದಾಗಿ ಚಿದಂಬರಂ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಣಾಳಿಕೆ ಕುರಿತು ವಿವರಿಸಿದರು.ಕಾಂಗ್ರೆಸ್ ಪ್ರಣಾಳಿಕೆ
ನೋಟು ಅಮಾನ್ಯೀಕರಣ, ರಫೇಲ್ ಡೀಲ್, ಪೆಗಾಸಸ್ ಪ್ರಕರಣ, ಪಿಎಂ ಕೇರ್ ಫಂಡ್ ಮತ್ತು ಎಲೆಕ್ಟೋರಲ್ ಬಾಂಡ್‌ಗಳು ಇತ್ಯಾದಿಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಹೇಳಿದರು. ಅಲ್ಲದೆ, ಬಿಜೆಪಿಗೆ ಸೇರ್ಪಡೆಯಾದ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವವರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಇದನ್ನು ಓದಿ : ದೆಹಲಿ ದಾರಿ ರೈತರಿಗೆ ಮುಚ್ಚಿದಿರಿ ನಮ್ಮೂರ ದಾರಿ ಬಿಜೆಪಿಗೆ ಮುಚ್ಚಿದೆ : ರೈತರಿಂದ ಪೋಸ್ಟರ್ ಅಭಿಯಾನ
ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಏನಿದೆ?
ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳ ಬಗ್ಗೆ ಮಾತನಾಡುವುದಾದರೆ, ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗಗಳು, ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ., ಜಾತಿ ಗಣತಿ, ಎಂಎಸ್‌ಪಿಗೆ ಕಾನೂನು ಸ್ಥಾನಮಾನ, ಎಂಎನ್‌ಆರ್‌ಇಜಿಎ ವೇತನ ರೂ 400, ತನಿಖಾ ದುರುಪಯೋಗ ತಡೆಗಟ್ಟುವಿಕೆ, ಕಾನೂನಿನಲ್ಲಿ ಬದಲಾವಣೆ, ಸಾಚಾರ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿಯೂ ಘೋಷಿಸಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ
ಕಾಂಗ್ರೆಸ್ ಪ್ರಕಾರ, ಪ್ರಣಾಳಿಕೆಯು, ‘ಭಾಗಿತ್ವ ನ್ಯಾಯ’, ‘ಕಿಸಾನ್ ನ್ಯಾಯ’, ‘ಮಹಿಳಾ ನ್ಯಾಯ’, ‘ಕಾರ್ಮಿಕ ನ್ಯಾಯ’ ಮತ್ತು ‘ಯುವ ನ್ಯಾಯ’. ‘ಯುವ ನ್ಯಾಯ’ ಎಂಬ ಐದು ತತ್ವಗಳನ್ನು ಆಧರಿಸಿದೆ. ಐದು ಖಾತರಿಗಳಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆ ಮತ್ತು ಒಂದು ವರ್ಷದವರೆಗೆ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ 1 ಲಕ್ಷ ರೂ.ನೀಡುವುದಾಗಿ ಹೇಳಿದೆ.
‘ಹಂಚಿಕೆನ್ಯಾಯ’ದಡಿ ಜಾತಿ ಗಣತಿ ನಡೆಸಿ ಶೇ.50ರ ಮೀಸಲಾತಿಯನ್ನು ರದ್ದುಪಡಿಸುವ ‘ಖಾತರಿ’ಯನ್ನು ಕಾಂಗ್ರೆಸ್ ನೀಡಿದೆ. ‘ಕಿಸಾನ್ ನ್ಯಾಯ್’ ಅಡಿಯಲ್ಲಿ, ಪಕ್ಷವು ಕನಿಷ್ಟ ಬೆಂಬಲ ಬೆಲೆ (MSP), ಸಾಲ ಮನ್ನಾ ಆಯೋಗದ ರಚನೆ ಮತ್ತು GST ಮುಕ್ತ ಕೃಷಿಗೆ ಕಾನೂನು ಸ್ಥಾನಮಾನದ ಭರವಸೆ ನೀಡಿದೆ.
‘ಕಾರ್ಮಿಕ ನ್ಯಾಯ’ ಅಡಿಯಲ್ಲಿ, ಕಾರ್ಮಿಕರಿಗೆ ಆರೋಗ್ಯದ ಹಕ್ಕನ್ನು ಒದಗಿಸುವುದು, ದಿನಕ್ಕೆ ಕನಿಷ್ಠ ರೂ 400 ವೇತನ ಮತ್ತು ನಗರ ಉದ್ಯೋಗ ಖಾತರಿಯನ್ನು ಖಚಿತಪಡಿಸುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ. ಅಲ್ಲದೆ ‘ನಾರಿ ನ್ಯಾಯ’ದಡಿ ‘ಮಹಾಲಕ್ಷ್ಮಿ’ ಖಾತ್ರಿಯಡಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ.ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ
ಇನ್ನು ಪಕ್ಷದ ಪ್ರಣಾಳಿಕೆ ಬಿಡುಗಡೆಗೂ ಮುನ್ನವೇ ಕಾಂಗ್ರೆಸ್ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿತ್ತು. ಈ ಅಭಿಯಾನದ ಅಡಿಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರು 14 ವಿವಿಧ ಭಾಷೆಗಳಲ್ಲಿ ಮುದ್ರಿಸಲಾದ ಈ ಖಾತರಿ ಕಾರ್ಡ್‌ಗಳನ್ನು ಮುಂದಿನ ಕೆಲವು ವಾರಗಳವರೆಗೆ ಭಾರತದಾದ್ಯಂತ 8 ಕೋಟಿ ಕುಟುಂಬಗಳಿಗೆ ವಿತರಿಸಲಿದ್ದಾರೆ. ಪ್ರತಿ ಗ್ಯಾರಂಟಿ ಕಾರ್ಡ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಘೋಷಿಸಿದ 5 ನ್ಯಾಯಗಳು ಮತ್ತು 25 ಖಾತರಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆ
ಇದನ್ನು ನೋಡಿ : ಸಿಪಿಐಎಂ ಸ್ಪರ್ಧೆ |ಹೋರಾಟಗಳ ಪ್ರಭಾವ ಮತಗಳಾಗಿ ಪರಿವರ್ತನೆ ಆಗಲಿವೆ Janashakthi Media