ಬೆಂಗಳೂರು : ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಪೊರೇಟ್-ಕೋಮುವಾದಿ ಧೋರಣೆಗಳಿಂದಾಗಿ ದೇಶದ ದುಡಿಯುವ ಜನತೆ ಅಪಾರ ಪ್ರಮಾಣದ ಸಂಕಟವನ್ನು ಅನುಭವಿಸುವಂತಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಜಂಟಿ ಹೇಳಿಕೆ ನೀಡಿರುವ ಸಂಘಟನೆಗಳ ಪೂರ್ಣ ಪಠ್ಯ ಈ ಕೆಳಗಿನಂತಿದೆ..
ನಮ್ಮ ಬದುಕಿನ ಪ್ರತಿಯೊಂದು ವಲಯದಲ್ಲೂ ದೇಶ ಹಾಗೂ ವಿದೇಶದ ಬಹುರಾಷ್ಟ್ರೀಯ ಹಾಗೂ ಗುತ್ತೇದಾರಿ ಕಂಪನಿಗಳ ಹಿಡಿತ ಬಲಗೊಳ್ಳುತ್ತಿದ್ದು ಸಂವಿಧಾನ ಖಾತರಿ ಪಡಿಸಿರುವ ಪ್ರತಿಯೊಂದು ಹಕ್ಕಿಗೂ ಗಂಭೀರ ತೊಂದರೆ ಉಂಟು ಮಾಡುತ್ತಿದೆ. ದಿವಾಳಿಕೋರ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳು ರೈತರ, ಕಾರ್ಮಿಕರ, ದಲಿತರ, ಮಹಿಳೆಯರ ವಿದ್ಯಾರ್ಥಿ ಯುವಜನರ ಬದುಕಿಗೆ ಎಷ್ಟೊಂದು ವಿನಾಶಕಾರಿಯಾಗಿವೆ ಎಂಬುದು ಈ ನೀತಿಗಳ ಮೂವತ್ತು ವರ್ಷಗಳ ಆಳ್ವಿಕೆಯಲ್ಲಿ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿದೆ ಎಂದು ದೂರಿದರು.
ಪರಿಸ್ಥಿತಿ ಹೀಗಿದ್ದರೂ ದೇಶದ ಕೃಷಿ ವಲಯವನ್ನು ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆ ಯನ್ನು ವಿದೇಶಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಸುಂಕ ರಹಿತವಾಗಿ ತೆರೆಯಲಾಗುತ್ತಿದೆ. ಸಂಸತ್ತಿನಲ್ಲಾಗಲಿ ಹಾಗೂ ರೈತರ, ಕಾರ್ಮಿಕರ ಜೊತೆಯಲ್ಲಾಗಲಿ ಯಾವುದೇ ರೀತಿ ಚರ್ಚೆ ನಡೆಸದೇ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮಕ್ಕೆ ತೊಂದರೆ ಉಂಟು ಮಾಡುವ ಅಸಮಾನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದಕ್ಕೆ ಬ್ರಿಟನ್ ಜೊತೆ ಭಾರತ ಸಹಿ ಮಾಡಿದೆ. ಇದೇ ರೀತಿಯ ಒಪ್ಪಂದ ಕ್ಕೆ ಆಮೇರಿಕಾ ಸಹಿ ಹಾಕುವಂತೆ ಭಾರತ ಒಂದು ಸಾರ್ವಭೌಮ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬುದನ್ನು ಮರೆತು ಬೆದರಿಕೆ ಹಾಗೂ ಒತ್ತಡ ಹಾಕುತ್ತಿದೆ.
ಇದನ್ನೂ ಓದಿ : ಚಿತ್ರದುರ್ಗ| ಹಿಂಡಸಕಟ್ಟೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ
ಕೆಲವೇ ಕೆಲವು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಲಾಭದ ಹಿತರಕ್ಷಣೆಗಾಗಿ ಕೋಟ್ಯಾಂತರ ಭಾರತೀಯರ ಹಿತವನ್ನು ಬಲಿಗೊಡುವುದನ್ನು ಕೂಡಲೇ ಭಾರತ ಸರ್ಕಾರ ನಿಲ್ಲಿಸಬೇಕು ,ಭಾರತದ ಒಟ್ಟಾರೆ ಹಿತಕ್ಕೆ ವಿರುದ್ದವಾಗಿರುವ ಬ್ರೀಟನ್ ಜೊತೆಗಿನ ಒಪ್ಪಂದ ವನ್ನು ಅಮಾನುತು ಮಾಡಬೇಕು ಹಾಗೂ ಸಾಮ್ರಾಜ್ಯಶಾಹಿ ಆಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತ್ವವನ್ನು ಕಾಪಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ, ಮಹಾನ್ ಸ್ವಾತಂತ್ರ್ಯ ಚಳವಳಿಯ ಐತಿಹಾಸಿಕ ಭಾರತ ಬಿಟ್ಟು ತೊಲಗಿ ವಾರ್ಷಕ ಆಚರಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ. ಎಂದು ಸರ್ಕಾರಕ್ಕೆ ಎಚ್ಚರಿಕೆ ನಿಡಿದರು.
ಹಕ್ಕೊತ್ತಾಯಗಳು
ಅಮೆರಿಕ ಜೊತೆ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದವನ್ನಾಗಲಿ ಹಾಗೂ ಮುಕ್ತ ವ್ಯಾಪಾರ ಒಪ್ಪಂದವನ್ನಾಗಲಿ ಮಾಡಿಕೊಳ್ಳಬಾರದು . ಆಮೇರಿಕಾ ವಿಧಿಸಿರುವ ಶೇಕಡಾ 25 ರಷ್ಟು ಆಮದು ಸುಂಕವನ್ನು ಪ್ರತಿಭಟಿಸಬೇಕು.ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ಜೊತೆಗಿನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದ (CETA)ವು ಹೈನುಗಾರಿಕೆ , ತರಕಾರಿಗಳು ಮತ್ತು ಹಣ್ಣುಗಳು ಸೇರಿದಂತೆ ಸಂಸ್ಕರಿಸಿದ ಆಹಾರಗಳ ಆಮದನ್ನು ಹೆಚ್ಚಿಸುತ್ತದೆ. ಇದು ಭಾರತದಲ್ಲಿ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿ ,ನಮ್ಮ ದೇಶದ ರೈತರ ಗಳಿಕೆ ಮತ್ತು ಸಣ್ಣ ಕೃಷಿ ವ್ಯಾಪಾರ ಸಂಸ್ಥೆಗಳ ಗಳಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.ಕುಲಾಂತರಿ ತಳಿಗಳ ಬೆಳೆಗಳ ಆಹಾರಗಳು, ಆಹಾರ ಧಾನ್ಯಗಳು, ಸೋಯಾ, ಜೋಳ, ಹತ್ತಿ ಇತ್ಯಾದಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಆಮೇರಿಕಾದ ಜೊತೆ ಮಾತುಕತೆಗಳು ನಡೆಯುತ್ತಿವೆ. ಅಲ್ಲದೇ ಭಾರತದ ಆರ್ಥಿಕತೆ ಒಳಗೆ ಅನಿಯಂತ್ರಿತವಾಗಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವನ್ನು ಉತ್ತೇಜಿಸಲಾಗುತ್ತಿದೆ. ಇದು ಕೂಡಲೇ ನಿಲ್ಲಬೇಕು . ಏಕಪಕ್ಷೀಯವಾಗಿ ಆಮೇರಿಕಾ ಭಾರತದ ಮೇಲೆ ವಿಧಿಸಿರುವ ಶೇಕಡಾ 25 ರಷ್ಟು ಅಮದು ಸುಂಕವು ನಮ್ಮ ದೇಶದ ಸಾರ್ವಭೌಮತ್ವದ ಮೇಲಿನ ಗಂಭೀರ ಆಕ್ರಮಣ ವಾಗಿದ್ದು ಇದನ್ನು ಭಾರತ ಸರ್ಕಾರ ತೀವ್ರವಾಗಿ ಪ್ರತಿಭಟಿಸಬೇಕು.
NPFAM ಹಾಗೂ NCP ಗಳನ್ನು ರದ್ದುಪಡಿಸಲು ಆಗ್ರಹ .ನವೆಂಬರ್ 2024 ರಂದು ಕೇಂದ್ರ ಸರ್ಕಾರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು (NPFAM)ಯು ಮೂಲಭೂತವಾಗಿ ಎಪಿಎಂಸಿ ಆಧುನೀಕರಣ, ಆಹಾರ ಧಾನ್ಯ ನಿರ್ವಹಣೆ, ಆಹಾರ ದಾಸ್ತಾನು ಮತ್ತು ಆಹಾರ ಸಂಸ್ಕರಣೆ ಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ದ ಮೂಲಕ ಖಾಸಗಿ ಬಂಡವಾಳ ವನ್ನು ಉತ್ತೇಜಿಸುವ ನೀತಿಯಾಗಿದೆ.ಜುಲೈ 2025 ರಲ್ಲಿ ಘೋಷಿಸಿರುವ ಹೊಸ ರಾಷ್ಟ್ರೀಯ ಸಹಕಾರ ನೀತಿ (NCP) ಯು ಎಲ್ಲಾ ರೀತಿಯ ಕೃಷಿ ಸಂಬಂದಿತ ಅಂಶಗಳಾದ ಸಾಲ ನೀಡಿಕೆ, ಕೃಷಿ ಲಾಗುವಾಡಗಳಾದ ಬೀಜ, ರಸಗೊಬ್ಬರ, ಕೀಟನಾಶಕ ,ಕೃಷಿ ಸೇವೆಗಳಾದ ಉಳುಮೆ, ಬಿತ್ತನೆ ,ನೀರಾವರಿ, ವಿದ್ಯುತ್ ಚ್ಛಕ್ತಿ , ಸಿಂಪಡಣೆ ,ಕಟಾವು ಯಂತ್ರೋಪಕರಣಗಳ ಒದಗಿಸುವಿಕೆ ಹಾಗೂ ಆಹಾರ ಬೆಳೆ ಖರೀದಿ ಹಾಗೂ ದಾಸ್ತಾನು ಮತ್ತು ಮಾರುಕಟ್ಟೆಗೆ ಜೋಡಣೆ ಮುಂತಾದವುಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದೇ ಸೂರಿನಲ್ಲಿ ಒದಗಿಸುವಂತೆ ರೈತ ಉತ್ಪಾದಕ ಸಂಘಗಳನ್ನು (FPO s) ಉತ್ತೇಜಿಸುವ ನೀತಿಯಾಗಿದೆ. ಈ ರೈತ ಉತ್ಪಾದಕ ಸಂಘಗಳು ತಮ್ಮ ಸದಸ್ಯರ ಒಳಗೆ ಲಾಭ ಹಂಚಿಕೆ ಮಾಡಿಕೊಳ್ಳುವ ಲಾಭ ಕೇಂದ್ರಿತ ಸಂಸ್ಥೆಗಳಾಗುವುದರಿಂದ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಮೂಲಕ ರೈತರಿಗೆ ನೆರವಾಗುವುದಾಗಲಿ ಹಾಗೂ ಕೃಷಿ ಕೂಲಿಕಾರರಿಗೆ ಕನಿಷ್ಠ ಕೂಲಿ ಸಿಗುವಂತೆ ಖಾತರಿ ಮತ್ತು ಸಾಮಾಜಿಕ ಕಲ್ಯಾಣದ ಗ್ಯಾರಂಟಿಯನ್ನು ನೀಡಲು ಸಾಧ್ಯವಿಲ್ಲ.ಈ ಎರಡು ನೀತಿಗಳು ಒಂದಕ್ಕೊಂದು ಪೂರಕವಾಗಿದ್ದು , ಕಾರ್ಪೊರೇಟ್ ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆಗಾಗಿ ವಾಣಿಜ್ಯ ಬೆಳೆಗಳನ್ನು ಉತ್ತೇಜಿಸಿ ನಮ್ಮ ಬೆಳೆ ಪದ್ದತಿಗಳನ್ನು ಬದಲಾಯಿಸುತ್ತವೆ. ರೈತರ ಸ್ವಾತಂತ್ರ್ಯ ಹಾಗೂ ಸುಸ್ಥಿರ, ಸ್ವಾವಲಂಬಿ ಕೃಷಿಯನ್ನು ನಿರ್ಲಕ್ಷಿಸುತ್ತದೆ. ಕೃಷಿ ಹಾಗೂ ಆಹಾರ ವ್ಯವಸ್ಥೆ ಗಳ ಮೇಲೆ ಕಾರ್ಪೊರೇಟ್ ಪ್ರಾಬಲ್ಯವನ್ನು ಬೆಂಬಲಿಸುತ್ತದೆ.
ಹೀಗೆ ರೈತರ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ, ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಆಹಾರ ವಿತರಣೆ ಯನ್ನು ನಾಶ ಮಾಡುವುದಲ್ಲದೇ ದೇಶದ ಆಹಾರ ಭದ್ರತೆಗೆ ಗಂಭೀರ ಧಕ್ಕೆ ಉಂಟು ಮಾಡುತ್ತದೆ. ಈ ಎರಡೂ ನೀತಿಗಳು ಒಕ್ಕೂಟ ವ್ಯವಸ್ಥೆ ಮೇಲಿನ ಆಕ್ರಮಣವಾಗಿದ್ದು , ಕೃಷಿ ಕಾರ್ಪೋರೇಟೀಕರಣ ಸಾಧಿಸಲು ಅಗತ್ಯವಾದ ಹೆಚ್ಚಿನ ಅಧಿಕಾರವು ತನ್ನ ಮುಷ್ಟಿಯಲ್ಲಿ ಇರುವಂತೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಹುನ್ನಾರವಾಗಿರುವುದರಿಂದ NPFAM ಹಾಗೂ NCA ಯನ್ನು ರದ್ದುಪಡಿಸಬೇಕು.3.ರೈತರ ಎಲ್ಲಾ ಬೆಳೆಗಳಿಗೂ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇಕಡಾ ಐವತ್ತು ರಷ್ಟು ಸೇರಿಸಿ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಸರ್ಕಾರ ಖಾತರಿಪಡಿಸಬೇಕು.
ಸಮಗ್ರ ಸಾಲ ಮನ್ನಾ ನೀತಿ ಜಾರಿ ಮಾಡಬೇಕು ,ಮೈಕ್ರೋ ಪೈನಾನ್ಸ್ ಕಂಪನಿಗಳ ಕಿರುಕುಳ ತಡೆಗಟ್ಟಬೇಕು.ಮೈಕ್ರೋ ಫೈನಾನ್ಸ್ ಸಂಸ್ಥೆಗಳ (MFI s) ಪ್ರತಿನಿಧಿಗಳು ಈ ಹಿಂದಿನ ಬಡ್ಡಿ ಸಾಹುಕಾರರ ರೀತಿ ವರ್ತಿಸುತ್ತಿದ್ದಾರೆ. ಈ ಸಂಸ್ಥೆಗಳು ಸಾಲ ನೀಡುತ್ತಿರುವುದು ಆರ್ ಬಿ ಐ ಹಣವನ್ನು. ಇವುಗಳ ಕಿರುಕುಳಕ್ಕೆ ಹಾಗೂ ಕ್ರಿಮಿನಲ್ ಕೃತ್ಯದ ವಸೂಲಾತಿ ಏಜೆಂಟರುಗಳ ಕಾಟಕ್ಕೆ ಹೆದರಿ ಬಹಳಷ್ಟು ಭೂ ಹೀನ ಬಡವರು, ದಲಿತರು, ಆದಿವಾಸಿಗಳು ಹಾಗೂ ಇತರೆ ಬಡಜನರು ತಮ್ಮ ಮನೆಯನ್ನು ತೊರೆದು ಹೋಗಿದ್ದಾರೆ.
ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೂ ಬೆದರಿಕೆ -ಕಿರುಕುಳ ನೀಡುತ್ತಿರುವುದು ಮಾತ್ರವಲ್ಲ ಅಪಹರಣ ಕೂಡ ಮಾಡಿದ್ದಾರೆ. ದೇಶದ ಅನ್ನದಾತರ ಸ್ವಾಭಿಮಾನ ಮತ್ತು ಘನತೆಯನ್ನು ಪುನರ್ ಸ್ಥಾಪಿಸಲು ರೈತರ ಸಹಕಾರ ಸಂಸ್ಥೆಗಳ ಮೂಲಕ ಎಲ್ಲಾ ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಬಡ್ಡಿ ರಹಿತ ಸಾಲಗಳನ್ನು ಒದಗಿಸುವ ಕಾನೂನು ಜಾರಿಗೆ ತರಬೇಕು ಹಾಗೂ ವಾರ್ಷಿಕ ಶೇಕಡಾ 4 ಬಡ್ಡಿ ಗಿಂತ ಹೆಚ್ಚು ಇಲ್ಲದ ರೀತಿಯಲ್ಲಿ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಬೇಕು.
ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಬಾರದು. ಕೃಷಿ ಪಂಪ್ ಸೆಟ್ ಗಳಿಗೆ ಗುಣಮಟ್ಟದ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಬೇಕು. ಸ್ವಯಂ ವೆಚ್ಚ ಯೋಜನೆ ಕೈ ಬಿಡಬೇಕು
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪದ್ದತಿ ಸಂಪೂರ್ಣ ನಿಲ್ಲಬೇಕು. ಭೂ ಸ್ವಾಧೀನ ಕಾಯ್ದೆ 2013 ರ ಪ್ರಕಾರವೇ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕು.ರಿಯಲ್ ಎಸ್ಟೇಟ್ ಪ್ರೇರಿತ ನಗರಕೀಕರಣಕ್ಕೆ ಒತ್ತು ನೀಡುವ ಭೂ ಸ್ವಾಧೀನವನ್ನು ಸಂಪೂರ್ಣ ಕೈ ಬಿಡಬೇಕು.
ಜೀವನ ವೆಚ್ಚ ವಿಪರೀತ ಏರಿಕೆ ಹಿನ್ನೆಲೆಯಲ್ಲಿ.ವಿಧವಾ,ವೃದ್ದಪ್ಯಾ ,ಅಂಗವಿಕಲ ಮುಂತಾದ ಎಲ್ಲಾ ಪಿಂಚಣಿಯನ್ನು ತಿಂಗಳಿಗೆ ಹತ್ತು ಸಾವಿರ ರೂ ಗಳಿಗೆ ಏರಿಕೆ ಮಾಡಬೇಕು. 60 ವರ್ಷ ಆದ ಪ್ರತಿಯೊಬ್ಬ ರೈತ-ಕೃಷಿ ಕೂಲಿಕಾರ ಹಾಗೂ ಕಾರ್ಮಿಕರಿಗೆ ಪಿಂಚಣಿ ಒದಗಿಸಬೇಕು.
ಅರಣ್ಯ ಹಕ್ಕು ಕಾಯ್ದೆ 2006 ಅನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಎಲ್ಲಾ ಬಗರ್ ಹುಕಂ ಸಾಗುವಳಿ ರೈತರಿಗೆ ಹಕ್ಕು ಪತ್ರ ಒದಗಿಸಬೇಕು. ಅರಣ್ಯ ಇಂಡೀಕರಣದ ನೆಪದಲ್ಲಿ ಬಗರ್ ಹುಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದು ಸಂಪೂರ್ಣ ನಿಲ್ಲಬೇಕು. ಅರ್ಹ ಎಲ್ಲರಿಗೂ ಮನೆ-ನಿವೇಶನ ಒದಗಿಸಬೇಕು.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವನ್ನು ಬಲಪಡಿಸಬೇಕು. ವಿಲೀನ ಮುಂತಾದ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದು ನಿಲ್ಲಬೇಕು.
ಕೋಮುವಾದಿ ಹಾಗೂ ವಿಚ್ಚದ್ರಕಾರಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಶಾಂತಿ-,ಸೌಹಾರ್ಧತೆ ಬಲಗೊಳಿಸಲು ಅಗತ್ಯ ಕ್ರಮ ಕೈ ಗೊಳ್ಳಬೇಕು.
ಇದನ್ನೂ ನೋಡಿ : ಉತ್ತರಾಖಂಡದಲ್ಲಿ ಮೇಘಸ್ಫೋಟ : ಕೊಚ್ಚಿಹೋದ ಮನೆಗಳು Janashakthi Media
