ಚಿಲಿಯಲ್ಲಿ ಅಲೆಂದೆ ಮತ್ತೆ ನಗೆ ಬೀರಿದ್ದಾರೆ

ಸಂವಿಧಾನ ಸಭೆ, ಪ್ರಾದೇಶಿಕ ಚುನಾವಣೆಗಳಲ್ಲಿ ಎಡ-ಪ್ರಗತಿಪರ ಶಕ್ತಿಗಳಿಗೆ ಅದ್ಬುತ ಗೆಲುವು

ನಾಗರಾಜ ನಂಜುಂಡಯ್ಯ

“ಚಿಲಿಯಲ್ಲಿ ಅಲೆಂದೆ ಮತ್ತೆ ನಗೆ ಬೀರಿದ್ದಾರೆ” ಒಂದು ಪತ್ರಿಕೆ ಚಿಲಿಯ ಸಂವಿಧಾನ ಸಭೆ ಮತ್ತು ಪ್ರಾದೇಶಿಕ ಚುನಾವಣೆಗಳಲ್ಲಿ ಎಡ – ಪ್ರಗತಿಪರ ಪಕ್ಷ/ಶಕ್ತಿ/ವ್ಯಕ್ತಿಗಳು ಸಾಧಿಸಿದ ಅದ್ಬುತ ವಿಜಯವನ್ನು ಈ ರೀತಿ ಬಣ್ಣಿಸಿದ್ದಾರೆ. 1970ರಲ್ಲಿ ಚಿಲಿಯ ಸೋಶಲಿಸ್ಟ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದ ಅಲೆಂದೆ ಅವರ ಸರಕಾರವನ್ನು, 1973ರಲ್ಲಿ ಜನರಲ್ ಅಗಸ್ಟೊ ಪಿನೋಶೇ ಸಿಐಎ ಬೆಂಬಲಿತ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಉರುಳಿಸಿ ಅವರ ಹತ್ಯೆಯನ್ನು ಮಾಡಲಾಗಿತ್ತು. ಆನಂತರ ಪಿನೋಶೆ ಸ್ಥಾಪಿಸಿದ ಸರ್ವಾಧಿಕಾರಿ ಸಂವಿಧಾನ ಮಿಲಿಟರಿ ನರಮೇಧ ಮತ್ತು ಅದನ್ನು ನಡೆಸಿದವರಿಗೆ ಸಾಮೂಹಿಕ ವಿನಾಯಿತಿ ಕೊಟ್ಟದ್ದಲ್ಲದೆ, ಚಿಲಿಯ ಜನಪರ-ಪ್ರಗತಿಪರ ನೀತಿಗಳಿಗೆ ಮಾರಕವಾಗುವ ಮೂಲಕ ಶಾಶ್ವತವಾಗಿ ಉರುಳಾಗಿತ್ತು. ಪಿನೋಶೆ ಸಂವಿಧಾನ ಬದಲಾಯಿಸುವುದು ಎಡ-ಪ್ರಗತಿಪರ ಚಳುವಳಿಗಳ ನಿತ್ಯಮಂತ್ರವಾಗಿತ್ತು. ಅಲೆಂದೆ ಈ ಚಳುವಳಿಯ ಪ್ರತೀಕವಾಗಿದ್ದರು.

ಚಿಲಿ ದೇಶದ `ಹೊಸ ಸಂವಿಧಾನ’ ವನ್ನು ಬರೆಯುವ ಜವಾಬ್ದಾರಿಯನ್ನು ಹೊಂದಿರುವ ‘ಸಾಂವಿಧಾನಿಕ ಸಭೆ’ಗೆ ಮೇ 15 ಮತ್ತು 16 ರಂದು ಚುನಾವಣೆ ನಡೆಯಿತು. 155 ಸದಸ್ಯರನ್ನು ಆಯ್ಕೆ ಮಾಡಲು 60 ಲಕ್ಷಕ್ಕೂ ಹೆಚ್ಚು ಚಿಲಿಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚಿಲಿಯ ‘ಚುನಾವಣಾ ಸೇವೆ (ಸರ್ವೆಲ್) ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸಿತು. ಅದರ ಪ್ರಕಾರ, ಸ್ವತಂತ್ರ ಮತ್ತು ಎಡಪಂಥೀಯ ಪಡೆಗಳು ಅದ್ಭುತ ವಿಜಯವನ್ನು ಗಳಿಸಿ, ‘ಸಾಂವಿಧಾನಿಕ ಸಮಾವೇಶ’ ದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ. ಸಂವಿಧಾನ ಬರವಣಿಗೆಯ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ `ಸಾಮಾಜಿಕ ಸುಧಾರಣೆ’ ಗಳನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದ ಮತ್ತು ಹೊಸ ಸಂವಿಧಾನಕ್ಕೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದ ಬಲಪಂಥೀಯ ಶಕ್ತಿಗಳು ದೊಡ್ಡ ಸೋಲನ್ನು ಅನುಭವಿಸಿವೆ.

ಇದನ್ನು ಓದಿ: ಕೇರಳ: ಒಂದು ಚಾರಿತ್ರಿಕ ಮಹತ್ವದ ವಿಜಯ

ಶೇ. 99.13% ಮತಗಳನ್ನು ಎಣಿಸಿದ ನಂತರ, 2019 ರ ಅಕ್ಟೋಬರ್‌ನಲ್ಲಿ, ಸಾಮಾಜಿಕ ದಂಗೆಯ ಸಂದರ್ಭದಲ್ಲಿ ಹೊರಹೊಮ್ಮಿದ ವಿವಿಧ ಸಾಮಾಜಿಕ ಚಳುವಳಿಗಳು, ಕಾರ್ಮಿಕ ಸಂಘಗಳು ಮತ್ತು ಇತರ ಜನಪ್ರಿಯ ಸಂಸ್ಥೆಗಳ ಸ್ವತಂತ್ರ ಅಭ್ಯರ್ಥಿಗಳು 48 ಸ್ಥಾನಗಳನ್ನು ಗೆದ್ದಿದ್ದಾರೆ. ಎಡಪಂಥೀಯ ರಾಜಕೀಯ ಪಕ್ಷ ಗಳಾದ `ಕಮ್ಯುನಿಸ್ಟ್ ಪಾರ್ಟಿ ಆಫ್ ಚಿಲಿ’ ಬ್ರಾಡ್ ಫ್ರಂಟ್, ಮತ್ತು ಇತರ ನವ-ಉದಾರವಾದಿ ವಿರೋಧಿ ಪಕ್ಷಗಳಿಂದ ಕೂಡಿದ  “ನಾನು ಸ್ವಾಭಿಮಾನವನ್ಜು ಗೌರವಿಸುತ್ತೇನೆ” ಎಂಬ ಪಟ್ಟಿಯು 28 ಸ್ಥಾನಗಳನ್ನು ಗೆದ್ದಿದೆ. ಕೇಂದ್ರ-ಎಡ, ಸಾಮಾಜಿಕ ಪ್ರಜಾಪ್ರಭುತ್ವ ಪಕ್ಷಗಳನ್ನು ಒಳಗೊಂಡಿರುವ “ಅನುಮೋದನೆ” ಪಟ್ಟಿಯು 25 ಸ್ಥಾನಗಳನ್ನು ಪಡೆದುಕೊಂಡಿದೆ.

ಆಳುವ ಕೂಟ ಸೇರಿದಂತೆ ಬಲಪಂಥೀಯ ಪಕ್ಷಗಳ ಒಕ್ಕೂಟವಾದ “ಚಿಲಿಗಾಗಿ ಹೋಗೋಣ” ಪಟ್ಟಿಯು 37 ಸ್ಥಾನಗಳನ್ನು ಪಡೆದುಕೊಂಡಿದೆ. `ಸಾಂವಿಧಾನಿಕ ಸಮಾವೇಶ’ದಲ್ಲಿ ಸ್ಥಳೀಯ ಸಮುದಾಯಗಳಿಗೆ ಮೀಸಲಾಗಿರುವ 17 ಸ್ಥಾನಗಳ ಫಲಿತಾಂಶಗಳನ್ನು ಈ ವಾರದ ಕೊನೆಯಲ್ಲಿ ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುವುದು.

ಈ ಚುನಾವಣೆಗಳ ಜೊತೆಗೆ, 2021-2025ರ ಅವಧಿಗೆ 16 ಪ್ರಾದೇಶಿಕ ಗವರ್ನರ್ ಗಳು, 345 ಮೇಯರ್ ಗಳು ಮತ್ತು 2,240 ಪುರಸಭೆಯ ಕೌನ್ಸಿಲರ್ ಗಳನ್ನು ಆಯ್ಕೆ ಮಾಡಲು ಪ್ರಾದೇಶಿಕ ಮತ್ತು ಪುರಸಭೆ ಚುನಾವಣೆಗಳು ಕೂಡ ನಡೆದವು. ಈ ಚುನಾವಣೆಗಳ ಅಂತಿಮ ಫಲಿತಾಂಶಗಳು ವಾರದ ಅಂತ್ಯದಲ್ಲಿ ಪ್ರಕಟಗೊಳ್ಳುವುದು. ಆದಾಗ್ಯೂ ಲಭ್ಯವಿರುವ ಪ್ರಾಥಮಿಕ ವರದಿಗಳ ಅನುಸಾರದಂತೆ, ಫಲಿತಾಂಶಗಳು ಆಡಳಿತ ಒಕ್ಕೂಟ’ ಕ್ಕೆ ಇದೇ ರೀತಿಯ ಹೊಡೆತವನ್ನು ಸೂಚಿಸುತ್ತಿವೆ ಎನ್ನಲಾಗಿದೆ. ಇದರಲ್ಲಿ ಪ್ರಮುಖ ಮೇಯರ್ ಗಳು ಅಧಿಕಾರವನ್ನು ಮತ್ತು ಪ್ರಾದೇಶಿಕ ಸರ್ಕಾರಗಳನ್ನು ಕಳೆದುಕೊಳ್ಳುವುದು ಸ್ಪಷ್ಟಗೊಂಡಿದೆ. ಏತನ್ಮಧ್ಯೆ, ಎಡಪಂಥೀಯ ಪಕ್ಷಗಳು ತಮ್ಮ ಪುರಸಭೆಗಳನ್ನು ಉಳಿಸಿಕೊಳ್ಳುವ ಜೊತೆಗೆ, ರಾಜಧಾನಿ ಸ್ಯಾಂಟಿಯಾಗೊ ಸೇರಿದಂತೆ ದೇಶಾದ್ಯಂತ ಹಲವಾರು ಹೊಸ ಪ್ರದೇಶಗಳಲ್ಲಿ ವಿಜಯವನ್ನು ತಮ್ಮದಾಗಿಸಿಕೊಂಡಿವೆ.

ಇದನ್ನು ಓದಿ: ಶೈಲಜಾ ಟೀಚರನ್ನು ಅವರಷ್ಟಕ್ಕೇ ಬಿಟ್ಟು ಬಿಡಿ..! ಗೌರಿಯಮ್ಮ ಜೊತೆ ಶೈಲಜಾ ಟೀಚರ್ ಹೋಲಿಕೆಯೇ ತಪ್ಪು!

ಲಭ್ಯವಿರುವ ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ಪ್ರಮುಖ ಸಾಮಾಜಿಕ ಮುಖಂಡ ಮತ್ತು ಮಾನವ ಹಕ್ಕುಗಳ ರಕ್ಷಕ ರೊಡ್ರಿಗೋ ಮುಂಡಾಕಾ ದೇಶದ ಎರಡನೇ ಪ್ರಮುಖ ಪ್ರದೇಶವಾದ `ವಾಲ್ಪಾರಾಸೊ’ ಪ್ರದೇಶದ ಗವರ್ನರ್ ಆಗಿ, ಬ್ರಾಡ್ ಫ್ರಂಟ್ ನ ಜಾರ್ಜ್ ಶಾರ್ಪ್’ ವಾಲ್ಪಾರಾಸೊ’ ದ ಮೇಯರ್ ಆಗಿ, ಬ್ರಾಡ್ ಫ್ರಂಟ್ ನ ಮಕರೆನಾ ರಿಪಮೊಂಟಿ ಸಾಂಪ್ರದಾಯಿಕವಾಗಿ ಬಲಪಂಥೀಯರಿಂದ ಪ್ರಾಬಲ್ಯ ಹೊಂದಿರುವ ‘ವಿಯಾ ಡೆಲ್ ಮಾರ್ ‘ನ ಮೇಯರ್ ಆಗಿ ಮತ್ತು ಡೇನಿಯಲ್ ಜಾಡು ಕಮ್ಯುನಿಸ್ಟ್ ಪಕ್ಷದ ರೆಕೊಲೆಟಾದ ಮೇಯರ್ ಆಗಿದ್ದಾರೆ.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ’ ಅವರು ಫಲಿತಾಂಶಗಳನ್ನು ಉಲ್ಲೇಖಿಸಿ ರಾಷ್ಟವನ್ನು ಉದ್ದೇಶಿಸಿ ಮಾತನಾಡುತ್ತಾ, “ಚುನಾವಣೆಯಲ್ಲಿ ಆಡಳಿತ ಪಕ್ಷ ಮತ್ತು ಸಾಂಪ್ರದಾಯಿಕ ಪಕ್ಷಗಳ ಅಗಾಧ ಸೋಲು ಮತ್ತು ಅವರ ಬಗ್ಗೆ ಜನತೆಯ ಭಾರಿ ಅಸಮಾಧಾನವನ್ನು ಗಂಭೀರವಾಗಿ ಗುರುತಿಸಿದ್ದಾರೆ.” ನಾಗರಿಕರು ಸರ್ಕಾರಕ್ಕೆ ಮತ್ತು ಎಲ್ಲಾ ಸಾಂಪ್ರದಾಯಿಕ ರಾಜಕೀಯ ಪಡೆಗಳಿಗೆ ಸ್ಪಷ್ಟ ಮತ್ತು ಬಲವಾದ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.  ನಾವು ನಾಗರಿಕರ ಬೇಡಿಕೆಗಳು ಮತ್ತು ಆಕಾಂಕ್ಷೆಗಳನ್ನು ಸಮರ್ಪಕವಾಗಿ ಗುರುತಿಸಿ ಸ್ಪಂದಿಸುವಲ್ಲಿ ವಿಫಲವಾಗಿರುವುದನ್ನು ಚುನಾವಣೆಯ ಫಲಿತಾಂಶಗಳು ಸ್ಪಷ್ಟಗೊಳಿಸಿವೆ. ಹೊಸ ಅಭಿವ್ಯಕ್ತಿಗಳು ಮತ್ತು ನಾಯಕತ್ವದಿಂದ ನಮಗೆ ಸವಾಲು ಎದುರಾಗಿದೆ. ಜನರ ಸಂದೇಶವನ್ನು ನಮ್ರತೆ ಮತ್ತು ಗಮನದಿಂದ ಕೇಳುವುದು ನಮ್ಮ ಕರ್ತವ್ಯ” ಎಂದು ತಿಳಿಸಿದ್ದಾರೆ.

ಬಹುಪಾಲು ಘಟಕಗಳು ಸ್ಪಷ್ಟವಾಗಿ ರಚನಾತ್ಮಕ ಬದಲಾವಣೆಗಳ ಪರವಾಗಿವೆ. ಪ್ರಮುಖವಾಗಿ ಕಳೆದ ಐದು ದಶಕಗಳಿಂದ ಜಾರಿಯಲ್ಲಿರುವ ಆರ್ಥಿಕ ಮತ್ತು ರಾಜಕೀಯ ಮಾದರಿಗೆ ವಿರುದ್ಧವಾಗಿವೆ. 1980 ರಲ್ಲಿ ಜನರಲ್ ಅಗಸ್ಟೊ ಪಿನೋಶೆ, (1973-1990) ರ ಮಿಲಿಟರಿ ಸರ್ವಾಧಿಕಾರದ ಅಡಿಯಲ್ಲಿ ಸಂವಿಧಾನವನ್ನು ರೂಪಿಸಿ ಹೇರಲಾಗಿತ್ತು. ಅದರ ಬದಲಾಣೆಗೆ ಸ್ಪಷ್ಟವಾದ ಬಲವಾದ ಒತ್ತಾಯದ ಅಭಿವ್ಯಕ್ತಿ ಈ ಫಲಿತಾಂಶವಾಗಿದೆ.

ಚಿಲಿಯ ಸಮಾಜವು, ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಕಿತ್ತೊಗೆದು, ಪ್ರಗತಿಪರ ಬದಲಾವಣೆಗಳನ್ನು ಸಾಧಿಸಲು ಮತ್ತು ಪ್ರಸ್ತುತ ಜಾರಿಯಲ್ಲಿರುವ ಪಿನೋಶೆ ಸರ್ವಾಧಿಕಾರಿ ಪ್ರಭುತ್ವದ ಸಂವಿಧಾನದಿಂದ ವಿಮೋಚನೆಗೊಳ್ಳಲು ಒಂದು ಹೆಜ್ಜೆ ಮುನ್ನಡೆಗೆ ಈ ಫಲಿತಾಂಶ ನಾಂದಿಯಾಗಿದೆ.

ಚಿಲಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ದಂಗೆಯು ಪ್ರೌಡ ಶಾಲಾ ವಿದ್ಯಾರ್ಥಿಗಳು `ಮೆಟ್ರೋ ಸಾರಿಗೆ ಶುಲ್ಕ ಹೆಚ್ಚಳ’ವನ್ನು ತಿರಸ್ಕರಿಸುವುದರೊಂದಿಗೆ ಪ್ರಾರಂಭಿಸಿದರು. ಈ ಹೋರಾಟಕ್ಕೆ ವಿವಿಧ ಚಳುವಳಿಗಳಲ್ಲಿನ ಪ್ರಗತಿಪರರು ಮತ್ತು  ಹೆಚ್ಚಿನ ಜನಸಂಖ್ಯೆಯನ್ನು ಪಾಲ್ಗೊಳಿಸುವಲ್ಲಿ ವಿದ್ಯಾರ್ಥಿಗಳು ಆರಂಭಿಸಿದ ಅಂದಿನ ಚಳುವಳಿ ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಲ್ಪಟ್ಟಿತು. ಅದು ಈ ಮಟ್ಟಕ್ಕೆ ಯಶಸ್ವಿಯಾಯಿತು.

ಅದರ ಮೊದಲ ಚುನಾವಣಾ ಅಭಿವ್ಯಕ್ತಿಯಾಗಿ, ಬದಲಾವಣೆ ಮತ್ತು ಜನರ ಹಕ್ಕುಗಳ ವಿಸ್ತರಣೆಯನ್ನು ನಾವೆಲ್ಲಾ ಈ ಚುನಾವಣೆಗಳ ಫಲಿತಾಂಶಗಳಲ್ಲಿ ಕಾಣುತ್ತಿದ್ದೇವೆ. ಹೊಸ ಸಂವಿಧಾನ ಬರೆಯುವಲ್ಲಿ ಕಮ್ಯೂನಿಸ್ಟ್ ರು ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತಿರುವುದು ಆಶಾದಯಕ ಬೆಳವಣಿಗೆಯಾಗಿದೆ. ಇದು ಚಿಲಿಯ ಜನರ ಸದೃಡ-ವಿಶ್ವಾಸಪೂರ್ವ ಹೋರಾಟಕ್ಕೆ ಸಂದ ಅದ್ಭುತ ಗೆಲುವಾಗಿದೆ.

Donate Janashakthi Media

Leave a Reply

Your email address will not be published. Required fields are marked *