ಫೆಬ್ರವರಿ 24 ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪ್ರತಿಭಟಿನೆ: ರೈತ ಕೂಲಿಕಾರರ ನಿರ್ಧಾರ

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ…

ಬಡವರಿಂದ ಮತ ಪಡೆದ ಸರ್ಕಾರಗಳು ಶ್ರೀಮಂತರ ಪರ ನೀತಿಗಳನ್ನು ಜಾರಿ ಮಾಡುತ್ತಿವೆ – ವಿಜೂ ಕೃಷ್ಣನ್‌

ಬೆಂಗಳೂರು: ನಾವು ಚುನಾಯಿಸದ ಸರ್ಕಾರಗಳು ನಮ್ಮನ್ನು ನಿರ್ಲ್ಯಕ್ಷಿಸಿ, ಶ್ರೀಮಂತರಪರ ನಿಲುವು ಜಾರಿ ಮಾಡುತ್ತಿವೆ ಎಂದು ಅಖಿಲ ಭಾರತ ಕಿಸಾನ್‌ ಸಭಾದ ಅಖಿಲ…

ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆ.10 ರಿಂದ ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ ಸೌಧ ಚಲೋ-ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು: ರೈತ-ಕೃಷಿಕೂಲಿಕಾರರ ಭೂಮಿ ಹಕ್ಕಿಗಾಗಿ, ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆಬ್ರವರಿ 10, 2025 ರಿಂದ ಸಹಸ್ರಾರು ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ…

ಕರಡು ಕೃಷಿ ಮಾರುಕಟ್ಟೆ ನೀತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ:ಎಸ್‌ಕೆಎಂ

ಫೆ. 8- 9 ರಂದು ಎಂಪಿಗಳ ಮನೆಗಳ ಮುಂದೆ ಪ್ರತಿಭಟನೆ; ಮಾರ್ಚ್ 5ರಿಂದ ಸತತ ಪ್ರತಿಭಟನೆ ದಿಲ್ಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ಜನವರಿ 24ರಂದು ನಡೆದ ಸಭೆಯ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಮಾರುಕಟ್ಟೆ, ಕನಿಷ್ಠ ಬೆಂಬಲ ಬೆಲೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟನ್ನು (ಎನ್‌ಪಿಎಫ್‌ಎಎಂ) ರದ್ದುಗೊಳಿಸಬೇಕು ಮತ್ತು ಒಂದು ಬಾರಿಯ ಸಾಲ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತತ ಚಳುವಳಿಗಳನ್ನು ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ 12 ರಾಜ್ಯಗಳ 73 ರೈತ ಸಂಘಟನೆಗಳ 165 ಪ್ರತಿನಿಧಿಗಳು ಭಾಗವಹಿಸಿದ್ದರು. ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಹಾನ್, ರಾಕೇಶ್ ಟಿಕಾಯತ್, ರೇವುಲಾ ವೆಂಕಯ್ಯ, ಸತ್ಯವಾನ್ ಮತ್ತು ಡಾ. ಸುನೀಲಮ್‌ರವರಿದ್ದ ಅಧ್ಯಕ್ಷ ಮಂಡಳಿಯು ಸಭೆಯನ್ನು ನಿರ್ವಹಿಸಿತು. ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಹೊಸ ಚೌಕಟ್ಟು ಕೃಷಿ ಮಾರುಕಟ್ಟೆಗಳ ಮೇಲೆ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಶಾಸನಸಭೆಗಳ ಅಧಿಕಾರವನ್ನು ಮೀರಿ ಹೋಗುತ್ತದೆ ಎಂಬ ತಮ್ಮ ಟೀಕೆಯನ್ನು ಪುನರುಚ್ಛರಿಸಿದರು. ಹೊಸ ಕರಡು ಚೌಕಟ್ಟು ರದ್ದಾದ ಮೂರು ಕೃಷಿ ಕಾನೂನುಗಳನ್ನು ಮಾರುವೇಷದಲ್ಲಿ ಮರಳಿ ತರುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ರೈತ ಸಂಘಗಳು ಫೆಬ್ರವರಿ 8 ಮತ್ತು 9 ರಂದು ಸಂಸತ್ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿ ಹೊಸ ಚೌಕಟ್ಟಿನ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಕೇಳುವ ಜ್ಞಾಪಕ ಪತ್ರವನ್ನು ಸಲ್ಲಿಸಲಿವೆ ಎಂದು ಹೇಳಿದರು. “ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಮಾರ್ಚ್ 5 ರಿಂದ ರಾಜ್ಯ ರಾಜಧಾನಿಗಳು, ಜಿಲ್ಲೆಗಳು ಮತ್ತು ಉಪವಿಭಾಗಗಳ ಮಟ್ಟದಲ್ಲಿ ಶಾಶ್ವತ ಆಂದೋಲನಗಳನ್ನು ಸ್ಥಾಪಿಸುತ್ತೇವೆ ಮತ್ತು ರಾಜ್ಯ ವಿಧಾನಸಭೆಗಳು ಚೌಕಟ್ಟಿನ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಬೇಕೆAದು ಮತ್ತು ಅದನ್ನು ಜಾರಿಗೆ ತರದಂತೆ ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು. ಎಂಎಸ್‌ಪಿ, ಘೋಷಣೆ, ಸರ್ಕಾರಿ ಖರೀದಿ, ಆಹಾರ ದಾಸ್ತಾನಿನ ಪ್ರಸ್ತಾಪವೇ ಇಲ್ಲ ಈ ನೀತಿಯನ್ನು ಸರ್ಕಾರಿ ಮಂಡಿಗಳ ಮೇಲಿನ ಒಂದು ದಾಳಿ ಎಂದು ರೈತ ಮುಖಂಡರು ೊಕ್ಕೊರಲಿನಿಂದ ಖಂಡಿಸಿರುವುದಾಗಿ ಎಸ್‌ಕೆಎಂ ಹೇಳಿಕೆ ತಿಳಿಸಿದೆ. ಕೃಷಿ ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಸಂಸ್ಕರಣಾ ಕಾರ್ಪೊರೇಟ್ ಉದ್ಯಮದಲ್ಲಿ ಬಹುರಾಷ್ಟಿçÃಯ ಕಂಪನಿಗಳು ಮತ್ತು ಕಾರ್ಪೊರೇಟ್ ಬೆಳವಣಿಗೆಗೆ ಸಹಾಯ ಮಾಡಲು ಅವುಗಳನ್ನು ಖಾಸಗೀಕರಣಗೊಳಿಸಲು ಈ ದಾಳಿ ನಡೆಸಲಾಗುತ್ತಿದೆ. ಕೃಷಿಕ ಉತ್ಪನ್ನ ಸಂಘಟನೆ(ಎಫ್‌ಪಿಒ)ಗಳು ಮತ್ತು ಇಲೆಕ್ಟಾçನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ಗಳ ಮೂಲಕ ಸ್ಥಳೀಯ ಗ್ರಾಮೀಣ ಮಂಡಿಗಳಿಗೆ ಲಗ್ಗೆ ಹಾಕುತ್ತದೆ ಮತ್ತು ಎಫ್‌ಪಿಒಗಳು, ಸಹಕಾರಿಗಳು ಮತ್ತು ಸ್ವಸಹಾಯ ಗುಂಪು(ಎಸ್‌ಹೆಚ್‌ಜಿ)ಗಳ ಮೂಲಕ ಕಾಂಟ್ರಾಕ್ಟ್ ಕೃಷಿಯನ್ನು ಜಾರಿಗೊಳಿಸುತ್ತದೆ, ಈ ಮೂಲಕ ಆಹಾರ ಸಂಸ್ಕರಣಾ ಮೌಲ್ಯವರ್ಧಿತ ಸರಪಳಿಗಳಿಗೆ ಅಗ್ಗದ ಆಹಾರ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿಯನ್ನು ಫ್ಯೂಚರ್ ಟ್ರೇಡ್ ಮತ್ತು ಷೇರು ಮಾರುಕಟ್ಟೆಯೊಂದಿಗೆ ಜೋಡಿಸುತ್ತದೆ. ಇವೆಲ್ಲವನ್ನು ಡಬ್ಲ್ಯುಟಿಒ ಮತ್ತು ವಿಶ್ವಬ್ಯಾಂಕ್ ಹೇಳಿದ ಪ್ರಕಾರ ಮಾಡಲಾಗುತ್ತಿದೆ. ಈ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ, ಸರ್ಕಾರಿ ಸಂಗ್ರಹಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಗೆ ಆಹಾರ ದಾಸ್ತಾನು ಬಗ್ಗೆ ಕುರಿತೂ ಇದರಲ್ಲಿ ಏನೂ ಉಲ್ಲೇಖವಿಲ್ಲ ಎಂಬ ಸಂಗತಿಯತ್ತ ಎಸ್‌ಕೆಎಂ ಹೇಳಿಕೆ ಗಮನ ಸೆಳೆದಿದೆ. ಈ ಕರಡು ನೀತಿ ಚೌಕಟ್ಟು ಮುಖ್ಯವಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಸಾಲ ಸೌಲಭ್ಯಗಳನ್ನು ಸುಧಾರಿಸುವುದು ಮುಂತಾದ ರೈತರ ಪ್ರಮುಖ ಬೇಡಿಕೆಗಳನ್ನು ನಿರ್ಲಕ್ಷಿಸಿದೆ, ಬದಲಾಗಿ, ಇದು ರಾಜ್ಯ ಬೆಂಬಲಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಕಿತ್ತುಹಾಕುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ, ಇದರಿಂದಾಗಿ ಸಣ್ಣ ಮತ್ತು ಮಧ್ಯಮ ರೈತರನ್ನು ಖಾಸಗಿ ವ್ಯಾಪಾರೀ ದುಷ್ಟಕೂಟಗಳ ಶೋಷಣೆಗೆ ಗುರಿ ಮಾಡುತ್ತದೆ ಎಂಬ ಕಾರಣಗಳಿಗಾಗಿ ರೈತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸುಧಾರಣೆಗಳು ಎಂಬುದು ಕಾರ್ಪೊರೇಟ್-ಸ್ನೇಹೀ ಕ್ರಮಗಳು, ಇದರಿಂದ ಗಮನಾರ್ಹ ಪ್ರಯೋಜನವಾಗುವುದು ಈಗಾಗಲೇ ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆ ಮಾಡಿರುವ ರಿಲಯನ್ಸ್ ಮತ್ತು ಅದಾನಿಯಂತಹ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆಹಾರ ಭದ್ರತೆಗೆ ಅಪಾಯ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಲು ಕರಡಿನಲ್ಲಿ ನಿಯಂತ್ರಕ ಸುರಕ್ಷತಾ ಕ್ರಮಗಳ ಕೊರತೆಯಿದೆ ಇದರಿಂದಾಗಿ ಕಾರ್ಪೊರೇಟ್ ಶೋಷಣೆ ಹೆಚ್ಚುತ್ತದೆ ಮತ್ತು ರೈತರ ಸಾಲ ಮತ್ತು ಆತ್ಮಹತ್ಯೆಗಳ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. ಕೃಷಿಕ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒಗಳ) ಮೂಲಕ ಕಾರ್ಪೊರೇಟೀಕರಣ ಮತ್ತು ಷೇರು ಮಾರುಕಟ್ಟೆಗಳಿಗೆ ಲಗತ್ತಿಸುವುದಕ್ಕೆ ಒತ್ತು ನೀಡುವುದರಿಂದ ಕಾರ್ಪೊರೇಟ್ ನಿಯಂತ್ರಣ ಮತ್ತಷ್ಟು ಬಲಗೊಳ್ಳುತ್ತದೆ, ಇದು ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದೂ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು. ಇದಲ್ಲದೆ, ಏಕರೂಪದ ಸುಧಾರಣೆಗಳನ್ನು ಜಾರಿಗೆ ತರಲು “ಸಬಲೀಕೃತ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ”ಯ ಹೆಸರಿನಲ್ಲಿ ಈ ಕರಡು ಅಧಿಕಾರದ ಕೇಂದ್ರೀಕರಣ ಮಾಡುತ್ತದೆ, ಇದು ರಾಜ್ಯಗಳ ಸ್ವಾಯತ್ತತೆಯನ್ನು ಮತ್ತು ಸಹಕಾರಿ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.…

ವಿಮಾನ ನಿಲ್ದಾಣದ ಒತ್ತುವರಿ ಕಾರ್ಯಚರಣೆಗೆ ಗ್ರಾಮಸ್ಥರ ವಿರೋಧ

ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಕಾರ್ಯಚರಣೆ: ಗ್ರಾಮಸ್ಥರ ಪ್ರತಿಭಟನೆ ಹಾಸನ: ವಿಮಾನ ನಿಲ್ದಾಣ ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು…

ರೈತ ನಾಯಕ ಶ್ರೀ ಜಗಜಿತ್ ಸಿಂಗ್ ದಲ್ಲೆವಾಲ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ಬೆಂಗಳೂರು :  ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ…

ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ: ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ

ಮಂಡ್ಯ : ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ…

ಕರ್ನಾಟಕ ಕಬ್ಬು ಬೆಳೆಗಾರರ ಸಮ್ಮೇಳನ: ಹಲವು ನಿರ್ಣಯಗಳ ಅಂಗೀಕಾರ

ಕರ್ನಾಟಕ ಕಬ್ಬು 2013 ರ ಕಾಯ್ದೆ ರದ್ದು ಪಡಿಸಿ, ಎಸ್.ಎ.ಪಿ ಪುನರ್ ಸ್ಥಾಪಿಸಲು ಆಗ್ರಹ ಕಲಬುರಗಿ: ಕಲ್ಬುರ್ಗಿ ನಗರದ ಯಾತ್ರಿಕ ಹೊಟೇಲ್ ನಲ್ಲಿ…

ಬೆಂಗಳೂರು : ಬಿಎಂಐಸಿ ಯೋಜನೆಯ ನೈಸ್ ಕಂಪನಿ ಹಗರಣ,ಭ್ರಷ್ಟಾಚಾರ, ಅಕ್ರಮ ಕುರಿತು ಟಿ ಬಿ ಜಯಚಂದ್ರ ಆಧ್ಯಕ್ಷತೆಯ ಸದನ ಸಮಿತಿ ವರದಿ…

ರೈತರ ಘೇರಾವ್ ಗೆ ಮಣಿದ ಸಚಿವರು – ಸೆಪ್ಟೆಂಬರ್ 23 ರಂದು ಡೆಡ್‌ ಲೈನ್

ಬೆಂಗಳೂರು : ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂಸ್ವಾಧೀನದಿಂದ ಕೈ ಬಿಡುವಂತೆ ಒತ್ತಾಯಿಸಿ ಕಳೆದ 900 ದಿನಗಳಿಂದ ಧರಣಿ ಕುಳಿತಿರುವ ದೇವನಹಳ್ಳಿ…

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿಲ್ಲಿಸಲು ಕೆಪಿಆರ್‌ಎಸ್ ಆಗ್ರಹ

ಬೆಂಗಳೂರು: ಲೀಸ್ ಹಾಗೂ ಮಾರಾಟ ಒಪ್ಪಂದದ ನೆಪದಲ್ಲಿ ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲ ಪ್ರದೇಶದ 3667 ಎಕರೆ…

ರೈತರಿಗೆ ದ್ರೋಹ ಬಗೆದ ಕೇಂದ್ರ ಬಜೆಟ್ – ಪ್ರಾಂತ ರೈತ ಸಂಘ ತೀವ್ರ ಖಂಡನೆ

ಬೆಂಗಳೂರು : ರೈತಾಪಿ ಕೃಷಿ ಯನ್ನು ನಾಶ ಮಾಡಿ, ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳ ಮರ್ಜಿಗೆ ಕೃಷಿ ರಂಗವನ್ನು ಒಳಪಡಿಸುವ ಸ್ಪಷ್ಟ ಉದ್ದೇಶದ…

ಬಲವಂತದ ಭೂಸ್ವಾಧೀನ ವಿರೋಧಿಸಿ ಹೋರಾಟ : ಸಿಎಂ ಮನೆಗೆ ಹೊರಟಿದ್ದ ರೈತರ ಮೇಲೆ ಪೋಲಿಸ್ ದೌರ್ಜನ್ಯ

ದೇವನಹಳ್ಳಿ :ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿಸಿ ಇಂದು ರೈತರು, ಕಾರ್ಮಿಕರು ಇಂದು ಬೃಹತ್ ಸಮಾವೇಶ ನಡೆಸಿದರು. ಇಲ್ಲಿಂದ ನೇರವಾಗಿ…

ರೈತರ ರಕ್ತದಿಂದ ತೊಯ್ದ ಕೈಗಳಿಗೆ  ಕೃಷಿ ಮಂತ್ರಿಯ ಹುದ್ದೆ- ರೈತ ಸಂಘಟನೆಗಳ ಆಕ್ರೋಶ

ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಹೊಸ ಎನ್‍ಡಿಎ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನಾಗಿ…

ಚುನಾವಣಾ ಬಾಂಡ್ ಹಗರಣ : ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

ನವದೆಹಲಿ: ‘ಚುನಾವಣಾ ಬಾಂಡ್ ಹಗರಣ’ವನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಿವೃತ್ತ ಅಧಿಕಾರಿಗಳ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕೆಂದು ಸಂಯುಕ್ತ ಕಿಸಾನ್…

ಸಂವಿಧಾನದ ತಿರುಳು ತಿಳಿಯದವರು ಜನಪ್ರತಿನಿಧಿಗಳಾಗುತ್ತಿದ್ದಾರೆ – ಜಸ್ಟೀಸ್‌ ವಿ. ಗೋಪಾಲಗೌಡ

ಬೆಂಗಳೂರು : ಸಂವಿಧಾನದ ತಿರುಳು ತಿಳಿಯದವರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಸಂವಿಧಾನ ಬದ್ದ ,ಶಾಸನ ಬದ್ದ ಕರ್ತವ್ಯಗಳನ್ನು ಸರಿಯಾಗಿ ಸರ್ಕಾರಗಳು ನಿರ್ವಹಿಸುತ್ತಿಲ್ಲ. ಸರ್ಕಾರಗಳು ಗ್ರಾಮಗಳ…

ರೈತ ಸಮುದಾಯಕ್ಕೆ ದ್ರೋಹ ಎಸಗಿದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ – ರೈತ-ಕಾರ್ಮಿಕರ ಪಂಚಾಯತ್ ನಿರ್ಣಯ

ಚಿತ್ರದುರ್ಗ : ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹಾಗೂ ಜೆಸಿಟಿಯು ಜಂಟಿಯಾಗಿ ನವದೆಹಲಿಯಲ್ಲಿ ಮಾರ್ಚ್ 14,2024 ರಂದು ಸಂಘಟಿಸುತ್ತಿರುವ ಅಖಿಲ ಭಾರತ…

ರಾಜ್ಯ ಬಜೆಟ್‌ 2024 : ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಸ್ವಾಗತಾರ್ಹ,ಕೃಷಿ ಬಿಕ್ಕಟ್ಟಿಗೆ ಪರಿಹಾರ ಒದಗಿಸುವಲ್ಲಿ ವಿಫಲ – ಪ್ರಾಂತ ರೈತ ಸಂಘ

ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲದಲ್ಲಿ ನೆರವಿಗೆ ಬಂದ ಐದು ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಮುಂದುವರೆಸಿರುವುದು ಸ್ವಾಗತಾರ್ಹವಾಗಿರುವಾಗಲೇ ,ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ…

ರೈತರಿಗೆ, ಮಹಿಳೆಯರಿಗೆ ತೀವ್ರ ನಿರಾಸೆ ತಂದ ‘ಚುನಾವಣಾ ಬಜೆಟ್’

ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷರು ಮಾಡಿದ ಭಾಷಣದಲ್ಲಿ ರೈತರು, ನಾರೀ ಶಕ್ತಿ, ಬಡಜನರು ಮತ್ತು ಯುವಜನರು ಸರಕಾರದ ಆದ್ಯತೆಗಳು ಎಂದಿದ್ದರು. ಆದರೆ…

ಖಾದ್ಯ ತೈಲ ಅಮದು ನಿಯಂತ್ರಿಸಿ, ಕೊಬ್ಬರಿ ,ಶೇಂಗಾ ದರ ಕುಸಿತದಿಂದ ರಾಜ್ಯದ ರೈತರನ್ನು ರಕ್ಷಿಸಲು KPRS ಆಗ್ರಹ

ಬೆಂಗಳೂರು : ಕೇಂದ್ರ ಸರ್ಕಾರ ಕೂಡಲೇ ಖಾದ್ಯ ತೈಲ ಅಮದು ನಿಯಂತ್ರಿಸಿ, ರಾಜ್ಯದ ಶೇಂಗಾ, ಕೊಬ್ಬರಿ ಮುಂತಾದ ಎಣ್ಣೆ ಬೀಜಗಳ ರೈತರನ್ನು…