ಗುಜರಾತ್‌ ಕೋಮು ಹತ್ಯಾಕಾಂಡ ಮುಚ್ಚಿಹಾಕುವ ಯತ್ನ: ಸುಪ್ರೀಂ ತೀರ್ಪಿಗೆ ಎಸ್‌ಯುಸಿಐ(ಸಿ) ಆಕ್ರೋಶ

ಬೆಂಗಳೂರು: ಭಾರತದ ಸರ್ವೋಚ್ಚ ನ್ಯಾಯಾಲಯವು 2022ರ ಆಗಸ್ಟ್ 30ರಂದು ನೀಡಿದ ತೀರ್ಪಿನಲ್ಲಿ,  2002ರ ಗುಜರಾತ್ ಕೋಮು ಹತ್ಯೆಗಳ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಗಳನ್ನು…

ದಿಲ್ಲಿಯಲ್ಲಿ “ಮಜ್ದೂರ್-ಕಿಸಾನ್ ಅಧಿಕಾರ್ ಮಹಾಧಿವೇಶನ”

2023ರ ಬಜೆಟ್‍ ಅಧಿವೇಶನದ ವೇಳೆಯಲ್ಲಿ “ಮಜ್ದೂರ್ ಸಂಘರ್ಷ ರ‍್ಯಾಲಿ 2.0”ಗೆ ಕರೆ ಸೆಪ್ಟೆಂಬರ್ 5, ರಾಷ್ಟ್ರ ರಾಜಧಾನಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ರೈತರು,…

ಅನ್ಯಾಯದ ವಿರುದ್ಧ ನ್ಯಾಯದ ಪರ ರಾಜ್ಯವ್ಯಾಪಿ ಮೊಳಗಿದ ಪ್ರತಿಭಟನೆ

ಬೆಂಗಳೂರು: ದೇಶದಲ್ಲಿ ಮಹಿಳೆಯ ಘನತೆಗೆ ಎದುರಾಗುತ್ತಿರುವ ದಾಳಿಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಒಂದೆಡೆ ಅತ್ಯಾಚಾರಿ ಖೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ…

ಮಠಗಳನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕು: ರಂಗಕರ್ಮಿ ಎಚ್‌.ಜನಾರ್ಧನ್‌

ಮೈಸೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಬಂಧಿತ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ವಿವಿಧ…

“ಕೊರಗರು ಕುಡಿತ – ದುಶ್ಚಟದಿಂದ ಖಾಯಿಲೆಗೆ ತುತ್ತಾಗಿ ಸಾಯುತ್ತಿದ್ದಾರೆ” ಸರಕಾರದ ಆದೇಶದಲ್ಲಿ ಉಲೇಖಕ್ಕೆ ಖಂಡನೆ

ಉಡುಪಿ : ಕೊರಗರು ಕುಡಿತ ದುಶ್ಚಟದಿಂದ ಸಾಯುತ್ತಿದ್ದಾರೆ ಎಂದು ಅವೈಜ್ಞಾನಿಕವಾಗಿ ಯಾವುದೇ ರೀತಿಯ ಅಧ್ಯಯನ, ದಾಖಲೆ ಇಲ್ಲದೆ ಆದೇಶದಲ್ಲಿ ಉಲೇಖ ಮಾಡಲಾಗಿದೆ…

ಸರ್ಕಾರಗಳು ಜಾರಿಗೊಳಿಸುತ್ತಿರುವ ಜನ ವಿರೋಧಿ ಕಾಯ್ದೆಗಳ ವಾಪಸ್ಸಿಗೆ ಆಗ್ರಹಿಸಿ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಪ್ರತಿಭಟನೆ

ಬೆಂಗಳೂರು: ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು, ಸಮಸ್ತ ಜನತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳು ಬೆಂಗಳೂರಿನ…

ಭಜರಂಗದಳ ಸಹಚರರ ಗಡಿಪಾರಿಗೆ ಒತ್ತಾಯಿಸಿ ಸಕಲೇಶಪುರದಲ್ಲಿ ಪ್ರತಿಭಟನೆ

ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಆಗ್ರಹ ದಲಿತ ಹಾಗೂ ಜನಪರ ಸಂಘಟನೆಗಳ ಬೃಹತ್ ಪ್ರತಿಭಟನೆ ರಾರಾಜಿಸಿದ ನೀಲಿ ಭಾವುಟ, ಮೊಳಗಿದ ಜೈ ಭೀಮ…

ದೇಶೀಯ ಭಾಷೆ-ಸಂಸ್ಕೃತಿ ಉಳಿವಿಗಾಗಿ ಪರ್ಯಾಯ ಮಾಧ್ಯಮ ಅಗತ್ಯ: ಪುರುಷೋತ್ತಮ ಬಿಳಿಮಲೆ

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಅಂಗವಾಗಿ ದಕ್ಷಿಣ ಕನ್ನಡದಲ್ಲಿ ‘ಜನಶಕ್ತಿ ಉತ್ಸವ’ದಲ್ಲಿ ಆಶಯ ನುಡಿಗಳನ್ನು ಆಡಿದ ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ…

ಹುಲಿಹೈದರ ಗ್ರಾಮದ ಕೊಲೆ-ಹಿಂಸಾಚಾರ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ: ಸಿಪಿಐ(ಎಂ) ಪ್ರತಿಭಟನೆ

ಗಂಗಾವತಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಂಭೀರವಾದ ಘರ್ಷಣೆ ನಡೆದು ಸಾವುಗಳು ಸಂಭವಿಸಿವೆ. ಘಟನೆ…

ನೂತನ ರಾಜ್ಯ ಜಲನೀತಿಯು ಅಭಿವೃದ್ಧಿಗೆ ಮಾರಕ-ನೀರಿನ ಖಾಸಗೀಕರಣಕ್ಕೆ ಪೂರಕ: ಸಿಪಿಐ(ಎಂ)

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ಮಂತ್ರಿಮಂಡಲ ಅಂಗೀಕರಿಸಿರುವ “ರಾಜ್ಯ ಜಲ ನೀತಿ-2022” ಕುಡಿಯುವ ನೀರು ಮತ್ತು ನೀರಾವರಿ ಹಾಗೂ ಸಣ್ಣ ಹಾಗೂ…

ಅಂಬೇಡ್ಕರ್‌ ಭವನ ಪೂರ್ಣಗೊಳಿಸಲು ಸಾಮೂಹಿಕ ಪತ್ರ ಚಳುವಳಿ

ತೋರಣಗಲ್ಲು: ಗ್ರಾಮದ ಪ್ರದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಪ್ರಾರಂಭಿಸಿ, ಅದು ಅರ್ಧಕ್ಕೆ ನಿಂತಿದೆ. ತೋರಣಗಲ್ಲು…

ಅಂಬೇಡ್ಕರ್ ಭವನ-ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ: ಜಾತಿವಾದಿಗಳ ವಿರುದ್ಧ ಪ್ರತಿಭಟನೆ

ಬೇಲೂರು: ತಾಲ್ಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಮುಂಭಾಗದಲ್ಲಿ ಖಾಲಿ ಇದ್ದ ರೆವಿನ್ಯೂ ಜಾಗದಲ್ಲಿ ಹಲವು ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಫಲಕವನ್ನು ಹಾಕಿ ಆ…

ಮತದಾರ ಗುರುತಿನ ಚೀಟಿ ಮತ್ತು ಆಧಾರ್ ‍ಜೋಡಣೆಯ  ಪ್ರಕ್ರಿಯೆಯನ್ನು ಲೋಪ-ದೋಷಗಳ ತನಿಖಾ ವರದಿ ತಯಾರಿಯ ವರೆಗೆ ತಡೆಹಿಡಿಯಬೇಕು

ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ ಚುನಾವಣಾ ಆಯೋಗ ಈ ಹಿಂದೆ 2015ರಲ್ಲಿ ನಡೆಸಿದ್ದ ಮತದಾರ ಗುರುತಿನ ಚೀಟಿ…

ಬಾಕಿ ವೇತನ ಪಾವತಿಗೆ ಒತ್ತಾಯ

ಕಲಬುರ್ಗಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ 8-9 ತಿಂಗಳ ಬಾಕಿ ವೇತನ ಪಾವತಿಸಲು ಮತ್ತು…

ಪಿಎಂಎಲ್‍ಎ ಕಾಯ್ದೆಗೆ ತಿದ್ದುಪಡಿಗಳನ್ನು ಎತ್ತಿ ಹಿಡಿದಿರುವ ತೀರ್ಪು ಅಪಾಯಕಾರಿ-ಪ್ರತಿಪಕ್ಷಗಳ ಜಂಟಿ ಹೇಳಿಕೆ

ಪಿಎಂಎಲ್‍ಎ, 2002 (Prevention of Money Laundering Act-ಹಣವನ್ನು ಮಡಿಗೊಳಿಸುವುದನ್ನು ತಡೆಯುವ ಕಾಯ್ದೆ)ಗೆ ತಂದಿರುವ ತಿದ್ದುಪಡಿಗಳನ್ನು ಸಂಪೂರ್ಣವಾಗಿ ಎತ್ತಿ ಹಿಡಿದಿರುವ  ಸುಪ್ರಿಂ…

ಬಿಎಸ್‌ಎನ್‌ಎಲ್ ಗೆ ಬೃಹತ್ ‘ಪುನರುಜ್ಜೀವನ ಪ್ಯಾಕೇಜ್‌’: ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ

ಬಿಎಸ್‌ಎನ್‌ಎಲ್ ಗೆ 1.64 ಲಕ್ಷ ಕೋಟಿ ರೂ.ಗಳ ಒಂದು ಬೃಹತ್ ‘ಪುನರುಜ್ಜೀವನ’ ಪ್ಯಾಕೇಜ್‌ನ್ನು ಕೇಂದ್ರ ಸಂಪುಟ ಮಂಜೂರು ಮಾಡಿರುವುದಾಗಿ ದೂರಸಂಪರ್ಕ ಮಂತ್ರಿಗಳು ಹೇಳಿದ್ದಾರೆ. 2019ರಲ್ಲಿ ಕೂಡ ಕೇಂದ್ರ ಸಂಪುಟ ರೂ.70,000 ಕೋಟಿ ಪ್ಯಾಕೇಜನ್ನು ಮಂಜೂರು ಮಾಡಿತ್ತು. ಅದರಿಂದಾಗಿ ಅದು ಚೇತರಿಸಿಕೊಂಡು ಒಂದು ಸ್ಥಿರತೆ ಹೊಂದಿರುವ ಕಂಪನಿಯಾಗಿದೆ ಎಂಬ ವಿಶ್ವಾಸ ಮೂಡಿದೆ. ಈ ಎರಡನೇ ಪ್ಯಾಕೇಜಿನಿಂದ ಅದು ಸಮರ್ಥ ಕಂಪನಿಯಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ನಿಜವೇ? ಅಥವ ಸತ್ಯೋತ್ತರ ಕಾಲದ ಇನ್ನೊಂದು ಜುಮ್ಲಾವೇ? ಕೇಂದ್ರ ಸರಕಾರ ನಿಜವಾಗಿಯೂ ಬಿಎಸ್‌ಎನ್‌ಎಲ್ ಒಂದು ಸಮರ್ಥ ಕಂಪನಿಯಾಗ ಬಯಸುತ್ತಿದೆಯೇ? ಈ ಸಂದೇಹ ಮೂಡಲು ಒಂದು ಪ್ರಮುಖ ಕಾರಣ ಏರ್‌ಟೆಲ್, ರಿಲಯಂಸ್ ಜಿಯೊ, ವೊಡಾಫೋನ್ ಇಂಡಿಯ ಮುಂತಾದ ಖಾಸಗಿ ಕಂಪನಿಗಳು 5ಜಿ ಬಗ್ಗೆ ಮಾತಾಡುತ್ತಿರುವವಾಗ ಈ ‘ಎರಡನೇ ಪುನರುಜ್ಜೀವನ’ ಪ್ಯಾಕೇಜ್ ಕೂಡ 2019ರ ಮೊದಲ ಪ್ಯಾಕೇಜಿನಲ್ಲಿಯೂ ಹೇಳಿದ್ದ 4ಜಿಯ ಬಗ್ಗೆಯೇ ಮಾತಾಡುತ್ತಿದೆ. 5ಜಿಯ ಪ್ರಸ್ತಾಪವೂ ಇಲ್ಲ. ವಾಸ್ತವವಾಗಿ ಸರಕಾರ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ (ಬಿಎಸ್‌ಎನ್‌ಎಲ್‌ಯು) ಜುಲೈ 28ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಸರಕಾರ ಇಂತಹ ತಪ್ಪು ಸಂದೇಶವನ್ನು ಏಕೆ ಕೊಡುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದೂ ಅದು ಹೇಳಿದೆ. ಅರ ಪ್ರಕಾರ ನಿಜ ಸಂಗತಿಯೆಂದರೆ ಈ 1.64 ಲಕ್ಷ ಕೋಟಿ ರೂ.ಗಳಲ್ಲಿ 4ಜಿಗೆ  ಸರಕಾರ ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ, ಉಳಿದ ಮೊತ್ತದಲ್ಲಿಯೂ ಒಂದು ಪೈಸೆಯೂ ಸರಕಾರೀ ಖಜಾನೆಯಿಂದ ಬರುವುದಿಲ್ಲ. 4ಜಿ ಒದಗಿಸಲು 1.13ಲಕ್ಷ ಕೋಟಿ ರೂ. ಎಷ್ಟು ನಿಜ? 23 ಅಕ್ಟೋಬರ್‌ನ ಮೊದಲ ಪ್ಯಾಕೇಜಿನಲ್ಲಿ ಬಿಎಸ್‌ಎನ್‌ಎಲ್‌ಗೆ…

ಕಾಳಿಸ್ವಾಮಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಲು ಆಗ್ರಹ

ತುಮಕೂರು : ಇನ್ನೂ ೦೯ ಮುಸ್ಲಿಂರ ತಲೆಗಳು ಬೇಕು ಎಂದು ಹೇಳುವುದಲ್ಲದೇ, ಘನತೆವೆತ್ತ ಮುಖ್ಯಮಂತ್ರಿಗಳನ್ನು ಎತ್ತಲಿ ಅವರಿಗೆ ತಾಕತ್ತಿದ್ರೆ, ಗೃಹ ಸಚಿವರನ್ನು…

ಪ್ರವೀಣ್‌ ನೆಟ್ಟಾರ್‌ ಕೊಲೆ ಹಿಂದಿನ ರಹಸ್ಯ ಬಹಿರಂಗವಾಗಲಿ: ಮುನೀರ್‌ ಕಾಟಿಪಳ್ಳ

ಮಂಗಳೂರು: ಪ್ರವೀಣ್ ನೆಟ್ಟಾರ್ ಕೊಲೆ ಖಂಡಿತಾ ದೊಡ್ಡ ಪಿತೂರಿ. ಇದು ಬೈಕಿನಲ್ಲಿ ಬಂದ ಮೂರು ಜ‌ನ ಹಂತಕರಿಂದಷ್ಟೇ ನಡೆದ ಕೊಲೆಯಲ್ಲ. ಇದರ…

24 ಸಂಸದರ ಅಮಾನತು: ಸಂಸತ್ತಿನ ಕತ್ತು ಹಿಸುಕುವ ಕ್ರಮ-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ: ಕಳೆದ ಎರಡು ದಿನಗಳಲ್ಲಿ ಲೋಕಸಭೆಯ 4 ಪ್ರತಿಪಕ್ಷ ಸಂಸದರು ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ 20 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಇಬ್ಬರು…

ಆಹಾರ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಲು ಸಿಪಿಎಂ ಒತ್ತಾಯ

ಹಾಸನ: ಆಹಾರ ಪದಾರ್ಥಗಳ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ…