ಬೆಂಗಳೂರು: ನೈಸ್ ಸಂಸ್ಥೆ, ಕಾನೂನು ಉಲ್ಲಂಘಿಸಿ ರೈತರಿಂದ ಪಡೆದಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಯನ್ನಾಗಿಸಿ ಮಾರಾಟ ಮಾಡುತ್ತಿದೆ. ನೈಸ್ ಕಂಪನಿಗೆ ಸ್ವಾಧೀನಕ್ಕೆ…
ಸಂಪಾದಕರ ಆಯ್ಕೆ ೨
- No categories
‘ಹೇಯ್ ಜೋ ಬೈಡನ್, ಮೋದಿಯನ್ನು ಪ್ರಶ್ನಿಸಿ…!’: ಅಮೆರಿಕಾದಲ್ಲಿ ಪ್ರಧಾನಿ ವಿರುದ್ಧ ಪ್ರತಿಭಟನೆ
‘ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ’ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಭಿತ್ತಿ ಫಲಕಗಳನ್ನು ಬಳಸಿ ಮೋದಿ ವಿರದ್ದ ಆಕ್ರೋಶ ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ…
ಹತ್ತಿ ಬೆಳೆಗಾರರ ಸಮಾವೇಶ : ಕ್ವಿಂಟಾಲ್ ಹತ್ತಿಗೆ ಕನಿಷ್ಠ 12000ರೂ ಬೆಂಬಲ ಬೆಲೆಗೆ ಆಗ್ರಹ
ಯಶಸ್ವಿ ಹತ್ತಿ ಬೆಳೆಗಾರರ ರಾಜ್ಯ ಸಮಾವೇಶ ಸಾರ್ವಜನಿಕ ಕ್ಷೇತ್ರ ಹತ್ತಿ ಸಂಶೋಧನೆಗೆ ಹೆಚ್ಚಿನ ಅನುದಾನಕ್ಕೆ ಆಗ್ರಹ ನಕಲಿ ಹತ್ತಿ ಬೀಜ,ಕ್ರಿಮಿನಾಶಕ, ರಸಗೊಬ್ಬರ…
ಬಿಜೆಪಿ ಸರಕಾರ ಎಂಎಸ್ಪಿ ಯಲ್ಲಿ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು : ಎಐಕೆಎಸ್
ನವದೆಹಲಿ: ಕೇಂದ್ರ ಸರಕಾರ 2023-24ರ ಸಾಲಿನ ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ)ಗಳನ್ನು ಪ್ರಕಟಿಸಿದೆ. ಇದು ಹಿಂದಿನ ವರ್ಷಗಳಿಗಿಂತ ಅತಿ ಹೆಚ್ಚಿನ…
ಪ್ರಜಾಪ್ರಭುತ್ವದ ಭವನದಲ್ಲಿ ‘ರಾಜದಂಡ’!
ವೇದರಾಜ್ ಎನ್.ಕೆ ಕಳೆದ ಸುಮಾರು ಒಂದು ತಿಂಗಳ ಬೆಳವಣಿಗೆಗಳು ಕಾರ್ಟೂನಿಸ್ಟರನ್ನೇ ಹುಡುಕಿಕೊಂಡು ಬರುವಂತಿದ್ದವು. ಮೊದಲು ಕರ್ನಾಟಕದ ಚುನಾವಣೆಗಳಲ್ಲಿ ‘ಜೈಭಜರಂಗಬಲಿ’ ಅಥವ…
ಡ್ರಾಪ್ ಕೊಡುವ ನೆಪದಲ್ಲಿ ಬಾಲಕನಿಗೆ ಕಿರುಕುಳ ನೀಡಿದ ಬಿಜೆಪಿ ಕಾರ್ಯಕರ್ತ
ಚೆನ್ನೈ: ಬೈಕ್ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಕಿರುಕುಳ ನೀಡಿದ ಘಟನೆ ತಮಿಳುನಾಡಿನ ವಿಲ್ಲಿವಕ್ಕಂ ಜಿಲ್ಲೆಯಲ್ಲಿ ನಡೆದಿರುವುದು…
ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ
ಭುವನೇಶ್ವರ್ : ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 233 ಮಂದಿ ಮೃತಪಟ್ಟು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.…
ಮೌಂಟ್ ಎವರೆಸ್ಟ್ ಏರಲು ತೆರಳಿದ್ದ ಭಾರತೀಯ ಮಹಿಳಾ ಪರ್ವತಾರೋಹಿ ಸಾವು
ಕಠ್ಮಂಡು: ಪೇಸ್ಮೇಕರ್ ಅಳವಡಿಸಿಕೊಂಡು ಮೌಂಟ್ ಎವರೆಸ್ಟ್ ಅನ್ನು ಏರಿದ ಏಷ್ಯಾದ ಮೊದಲ ಮಹಿಳೆ ಎಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಗುರಿಯನ್ನು…
ರೈತರ ಹಕ್ಕುಗಳನ್ನು ಬೆಂಬಲಿಸಿದ ಸಂಶೋಧಕಿಯನ್ನು ತನಿಖೆಗೆ ಗುರಿಪಡಿಸಿದ ಇ.ಡಿ.: ವಿಶ್ವಾದ್ಯಂತ ತೀವ್ರ ಖಂಡನೆ-ಪ್ರತಿಭಟನೆ
ಸಂಶೋಧಕಿ, ಲೇಖಕಿ ಮತ್ತು ಸಕ್ರಿಯ ಕಾರ್ಯಕರ್ತೆ ಮತ್ತು ಪ್ರಧಾನ ಮಂತ್ರಿಗಳನ್ನು ಮಣಿಸಿದ ರೈತರ ಐತಿಹಾಸಿಕ ಹೋರಾಟವನ್ನು ಸಕ್ರಿಯವಾಗಿ ಬೆಂಬಲಿಸಿದ ಡಾ. ನವಶರಣ್ ಸಿಂಗ್ ಅವರನ್ನು ಮೇ 10ರಂದು ಏಳು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.) ಪಿಎಂಎಲ್ಎ(ಕಪ್ಪು ಹಣವನ್ನು ಬಿಳುಪು ಮಾಡುವುದನ್ನು ತಡೆಯುವ) ಕಾಯ್ದೆಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಿರುವುದಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಖಂಡನೆ ಮತ್ತು ಪ್ರತಿಭಟನೆಗಳು ವ್ಯಕ್ತವಾಗಿವೆ. ರೈತ ಹೋರಾಟಕ್ಕೆ ನೇತೃತ್ವ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಒಂದು ಹೇಳಿಕೆಯನ್ನು ನೀಡಿ, ಡಾ. ನವಶರಣ ಅವರು ದಿಲ್ಲಿ ಗಡಿಗಳಲ್ಲಿ ಐತಿಹಾಸಿಕ ರೈತ ಚಳವಳಿಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು, ರೈತರ ಹೋರಾಟದ ಸಂದೇಶವನ್ನು ಅಂತಾರಾಷ್ಟ್ರೀಯ ವೇಧಿಕೆಗಳಿಗೆ ಕೊಂಡೊಯ್ದರು. ಇದಕ್ಕಾಗಿಯೇ ಮೋದಿ ಸರ್ಕಾರ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತ ,ನ್ಯಾಯಕ್ಕಾಗಿ ಆಕೆಯ ಅನ್ವೇಷಣೆಯಲ್ಲಿ ಎಸ್ಕೆಎಂ ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದೆ. ಇದು ಡಾ.ನವಶರಣ್ ಸಿಂಗ್ ಅವರಿಗೆ ಕಿರುಕುಳ ನೀಡುವ ಮತ್ತು ಬೆದರಿಸುವ ಬಿಜೆಪಿ ಸರ್ಕಾರದ ದುಷ್ಟ ಪ್ರಯತ್ನ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತೀವ್ರವಾಗಿ ಖಂಡಿಸಿದೆ. ಪಿಎಂಎಲ್ಎ ಅಡಿಯಲ್ಲಿ ಅವರನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲದ ಕ್ರಮ ಭಿನ್ನಾಭಿಪ್ರಾಯದ ದನಿಗಳನ್ನು ಅಡಗಿಸುವ ಇನ್ನೊಂದು ಪ್ರಯತ್ನವಾಗಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದಕರಾಗಿ, ಸಾರ್ವಜನಿಕ ಚಿಂತಕರಾಗಿ ಮಹತ್ವದ ಪಾತ್ರ ವಹಿಸುತ್ತಿರುವ ಅವರು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ-ವಿರೋಧಿ ಮತ್ತು ಜನವಿರೋಧಿ ನೀತಿಗಳಿಗೆ ತಮ್ಮ ವಿರೋಧವನ್ನು ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿರುವವರು. ಖ್ಯಾತ ನಾಟಕಕಾರ ದಿವಂಗತ ಗುರುಶರಣ್ ಸಿಂಗ್ ಅವರ ಪುತ್ರಿಯಾಗಿರುವ ಅವರು ರೈತ ಚಳವಳಿಗಳ ಕಟ್ಟಾ ಬೆಂಬಲಿಗರಾಗಿ ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಎಐಕೆಎಸ್ ಕೂಡ ನೆನಪಿಸಿದೆ. ಖ್ಯಾತ ಹಕ್ಕು ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಟ್ರಸ್ಟ್ ‘ಅಮನ್ ಬಿರಾದಾರಿ’ ಮಂಡಳಿಯ ಸದಸ್ಯರಾಗಿರುವ ಅವರನ್ನು ಈ ಟ್ರಸ್ಟ್£ ಕೆಲವು ಹಣಕಾಸಿನ ವಹಿವಾಟುಗಳು ಮತ್ತು ಹರ್ಷಮಂದರ್ ಅವರೊಂದಿಗಿನ ಸಂಬAಧದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಜನರ ಹಕ್ಕುಗಳನ್ನು ಮತ್ತು ಕೋಮು ಸೌಹಾರ್ದವನ್ನು ಪ್ರತಿಪಾದಿಸುತ್ತ, ಈ ಹಕ್ಕುಗಳ ಮತ್ತು ಸೌಹಾರ್ದದ ಉಲ್ಲಂಘನೆಯ ವಿರುದ್ಧ ದೇಶವಿಡೀ ಸಂಚರಿಸುತ್ತಿರುವ ಮಾಜಿ ಉನ್ನತ ಸರಕಾರೀ ಅಧಿಕಾರಿ ಹರ್ಷ ಮಂದರ್ ಅವರ ದನಿಯನ್ನು ಅಡಗಿಸಲು ಆರಂಭಿಸಿರುವ ಈ ತನಿಖೆಯಲ್ಲಿ ಈಗ ನವಶರಣ್ ಸಿಂಗ್ರವರನ್ನು ಕೂಡ ಸೇರಿಸಿರುವುದು ದೇಶದಾದ್ಯಂತ ಬುದ್ಧಿಜೀವಿಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಮೋದಿ ಸರ್ಕಾರದ ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ಎಐಕೆಎಸ್ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ದನಿಗಳ ಮೇಲೆ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ದಾಳಿಗಳ ವಿರುದ್ಧ ದನಿ ಎತ್ತುವಂತೆ ಜನಾಂದೋಲನದ ಎಲ್ಲಾ ವಿಭಾಗಗಳಿಗೆ ಮನವಿ ಮಾಡಿದೆ. ಅಖಿಲ ಭಾರತ ಅರಣ್ಯ ದುಡಿಯುವ ಜನರ ಸಂಘ ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ಕೂಡ ಇದು ಭಿನ್ನಾಭಿಪ್ರಾಯದ ದನಿಗಳನ್ನು ತೊಡೆದುಹಾಕಲು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುವ ನಿಂದನೀಯ ಕೃತ್ಯ ಎಂದು ಖಂಡಿಸಿವೆ. ಡಾ.ನವಶರಣ್ ಸಿಂಗ್ ಕೆನಡಾದ ಕಾರ್ಲೆಟನ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಅಲ್ಲಿಯೂ ಬೌದ್ಧಿಕ ವಲಯದಲ್ಲಿ ಖ್ಯಾತರಾಗಿರುವ ಅವರನ್ನು ಬೆಂಬಲಿಸಿ ಕೆನಡಾದ 20 ಕ್ಕೂ ಹೆಚ್ಚು ಸಂಸ್ಥೆಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಇ.ಡಿ. ಯ ಈ ಕ್ರಮವನ್ನು ಪ್ರಗತಿಪರ ಧ್ವನಿಗಳನ್ನು ಗುರಿಯಾಗಿಸಿಕೊಂಡಿರುವ ಮೋದಿ ಸರ್ಕಾರದ ಬಂಧನಗಳೋAದಿಗೆ ತಳುಕು ಹಾಕುತ್ತ “ದಕ್ಷಿಣ ಏಷ್ಯಾದ ಒಬ್ಬ ಸಾಧಕಿ, ವಿದ್ವಾಂಸೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಡಾ. ಸಿಂಗ್ ಅವರು ತಳಮಟ್ಟದ ಕೆಲಸದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ದಿವಂಗತ ತಂದೆಯಿAದ ಪಡೆದ ಪರಂಪರೆಯನ್ನು ಮುಂದಕ್ಕೊಯ್ಯುತ್ತಿದ್ದಾರೆ ಗ್ರಾಮೀಣ ಪಂಜಾಬ್ ಮತ್ತು ಇತರೆಡೆಗಳಲ್ಲಿ ಬಡವರು ಮತ್ತು ವಂಚಿತರನ್ನು ತಲುಪುವ ಮೂಲಕ, ಅವರ ಬೆಂಬಲ ಮತ್ತು ವಕಾಲತ್ತು ಅವರಿಗೆ ಜನಸಾಮಾನ್ಯರ ಪ್ರೀತಿ ಮತ್ತು ಗೌರವವನ್ನು ಗಳಿಸಿ ಕೊಟ್ಟಿದೆ. ಇದು ಅವರು ಮೋದಿಯ ಕಠೋರ ಕಾನೂನುಗಳ ವಿರುದ್ಧ ಭಾರತೀಯ ರೈತರ ಹೋರಾಟವನ್ನು ಧೈರ್ಯದಿಂದ ಬೆಂಬಲಿಸಿದಾಗ ಸ್ಪಷ್ಟವಾಗಿದೆ. …ಡಾ. ನವಶರಣ್ ಸಿಂಗ್ ಮತ್ತು ಅವರ ತಳಮಟ್ಟದ ಮತ್ತು ಶೈಕ್ಷಣಿಕ ಕೆಲಸಗಳ ಬಗ್ಗೆ ತಿಳಿದಿರುವ ಅಥವಾ ಪರಿಚಿತರಾಗಿರುವ ನಮಗೆ, ಆಡಳಿತದ ತನಿಖಾ ಸಂಸ್ಥೆಗಳಿAದ ಆಕೆಯ ಕಿರುಕುಳವು ಆಕ್ರೋಶ ಉಂಟು ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ , ಅದನ್ನು ದೃಢವಾಗಿ ವಿರೋಧಿಸಬೇಕು” ಎಂದಿವೆ.
ಸಚಿವನನ್ನೇ ಸೋಲಿಸಿದ ಕೈ ಶಾಸಕನ ಹತ್ಯೆಗೆ ಸ್ಕೆಚ್ : ಶಾಸಕ ಜಸ್ಟ್ ಮಿಸ್!, ಇಬ್ಬರ ಬಂಧನ
ಬಳ್ಳಾರಿ: ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೂಪಿಸಿದ್ದ ವಿಚಾರ ಈಗ…
ಕರ್ನಾಟಕದ ಜನತೆಯಿಂದ ಬಿಜೆಪಿ ಸರಕಾರಕ್ಕೆ ಗೇಟ್ ಪಾಸ್ – ಭಾಗ 01
ವಸಂತರಾಜ ಎನ್.ಕೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಗೇಟ್ ಪಾಸ್ ನೀಡಿದ್ದಾರೆ. ಈ ಕುರಿತಾಗಿ ವಿವರವಾದ ಮಾಹಿತಿಯುಳ್ಳ ಲೇಖನವನ್ನು…
ಕಾಂಗ್ರೆಸ್ಗೆ ʼಅಧಿಕಾರ ಗದ್ದುಗೆʼ ಎನ್ನುತ್ತಿವೆ ಎಕ್ಸಿಟ್ ಪೋಲ್
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ಶುರುವಾಗಿದೆ. ರಾಷ್ಟ್ರೀಯ, ಸ್ಥಳೀಯ ಏಜೆನ್ಸಿಗಳಿಂದ…
ಗುಜರಾತ್: ಐದು ವರ್ಷದಲ್ಲಿ 41 ಸಾವಿರಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ!
ಅಹಮದಾಬಾದ್: ಗುಜರಾತ್ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 41 ಸಾವಿರಕ್ಕೂ ಅಧಿಕ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಅಂಕಿ…
ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಜಗದೀಶ್ ಶೆಟ್ಟರ್ ಫೋಟೋ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ vs ಜಗದೀಶ್ ಶೆಟ್ಟರ್ ಅಂತ ಪೈಪೋಟಿ ಏರ್ಪಟ್ಟಿದೆ. ಇನ್ನು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿಯ…
ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ : ಮೋದಿ ವಿರುದ್ಧ ಕಿಡಿ
ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವಾರು ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ…
ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಡಬ್ಲ್ಯುಎಫ್ಐ ಅಧ್ಯಕ್ಷರ ಲೈಂಗಿಕ ಕಿರುಕುಳದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ವಿದ್ಯಾರ್ಥಿ-ಯುವಜನ, ರೈತರು, ಕಾರ್ಮಿಕರು ಮತ್ತು ಕೃಷಿಕೂಲಿಕಾರರ ಸಂಘಟನೆಗಳ ಬೆಂಬಲ ಅಂತಾರಾಷ್ಟ್ರೀಯ…
ಯುವಂ 2023: ಕೇರಳದ ಯುವಜನರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರಧಾನಿ
ಕೇರಳ : ಕೊಚ್ಚಿ ಜಲ ಮೆಟ್ರೊ ಮತ್ತು ವಂದೇಭಾರತ್ ರೈಲು ಉದ್ಘಾಟನೆಗೆ ಸೇರಿದಂತೆ ಕೇರಳಕ್ಕೆ ಎರಡು ದಿನಗಳ ಪ್ರಧಾನಿ ಭೇಟಿಯ ಕಾಲದಲ್ಲಿ…
ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಘೋಷಿಸಿ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ
ಬೆಂಗಳೂರು : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್…
ಎನ್.ಸಿ.ಇ.ಆರ್.ಟಿ ಪಠ್ಯಗಳು: ಮೊಗಲರಷ್ಟೇ ಅಲ್ಲ, ಡಾರ್ವಿನ್ ಮತ್ತು ಪೈಥಾಗೊರಸ್ಗೂ ಖೊಕ್!
ವೇದರಾಜ್ ಎನ್.ಕೆ ಎನ್.ಸಿ.ಇ.ಆರ್.ಟಿ ಶಾಲಾ ಪಠ್ಯಪುಸ್ತಕಗಳಲ್ಲಿ ಕೊವಿಡ್ ಮಹಾಸೋಂಕಿನಿಂದಾಗಿ ಉಂಟಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಭಾರವನ್ನು ಇಳಿಸುವ ನೆಪದಲ್ಲಿ ಇತಿಹಾಸ,…