ಬಿಹಾರ | ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ತಪ್ಪಾದರೆ ದೇಶದಾದ್ಯಂತ ನೀವೆ ಮಾಡಿ – ಅಮಿತ್ ಶಾಗೆ ತೇಜಸ್ವಿ ಯಾದವ್ ಪ್ರತಿಕ್ರಿಯೆ

ಪಾಟ್ನಾ: ಬಿಹಾರ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ತಪ್ಪಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. “ಬಿಹಾರ ಸರ್ಕಾರ ನಡೆಸಿದ ಜಾತಿ ಆಧಾರಿತ ಸಮೀಕ್ಷೆ ತಪ್ಪು ಎಂದು ಅಮಿತ್ ಶಾ ನಂಬುವುದಾದರೆ, ಅವರು ದೇಶದಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸಲಿ, ಅದನ್ನು ಮಾಡಬೇಡಿ ಎಂದು ಯಾರೂ ತಡೆಯುತ್ತಿಲ್ಲ” ಎಂದು ಹೇಳಿದ್ದಾರೆ.

“ನಾನು ಅವರ ಭಾಷಣವನ್ನು ಆಲಿಸಿದ್ದೇನೆ ಮತ್ತು ಅವರು ಅಸಭ್ಯವಾಗಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ನಾನು ಅಮಿತ್ ಶಾ ಅವರನ್ನು ಕೇಳಲು ಬಯಸುತ್ತೇನೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಎಷ್ಟು ಇಬಿಸಿ (ಆರ್ಥಿಕವಾಗಿ ಹಿಂದುಳಿದ ವರ್ಗಗಳು) ಅಥವಾ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮುಖ್ಯಮಂತ್ರಿಗಳು ಇದ್ದಾರೆ” ಎಂದು ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ. ಜಾತಿ ಸಮೀಕ್ಷೆ

ಇದನ್ನೂ ಓದಿ: KPSC Exam| ಮಹಿಳಾ ಅಭ್ಯರ್ಥಿಗಳ ಕೊರಳಲ್ಲಿನ ತಾಳಿ, ಕಾಲುಂಗುರ ತೆಗೆಸಿದ ಸಿಬ್ಬಂದಿ; ಅಭ್ಯರ್ಥಿಗಳು ಆಕ್ರೋಶ

“ಅವರು ಜನರಿಗೆ ಸುಳ್ಳು ಮತ್ತು ಕೀಳು ಮಟ್ಟದ ವಿಷಯಗಳನ್ನು ಹೇಳಲು ಇಲ್ಲಿಗೆ ಬರುತ್ತಿದ್ದರು. ನಾವು ಉದ್ಯೋಗ ನೀಡುತ್ತಿದ್ದೇವೆ ಆದರೆ ಅವರು ಅದರ ಬಗ್ಗೆ ಮಾತನಾಡಿಲ್ಲ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಭಾನುವಾರ ಮುಜಾಫರ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಶಾ, “ಜಾತಿ ಸಮೀಕ್ಷೆಯು ಮೋಸಗೊಳಿಸುವಂತೆ ಇದೆ. ಅದು ಮುಸ್ಲಿಂ-ಯಾದವ್ ಸಮುದಾಯದ ಹೆಚ್ಚಿದ ಜನಸಂಖ್ಯೆಯನ್ನು ತೋರಿಸಲು ಮಾಡಲಾಗಿದೆ…” ಎಂದು ಪ್ರತಿಪಾದಿಸಿದ್ದರು.

2025 ರ ರಾಜ್ಯ ಅಸೆಂಬ್ಲಿ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಬಿಸಿ ವರ್ಗದ ವ್ಯಕ್ತಿಯನ್ನು ಘೋಷಿಸುವಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಅಮಿತ್ ಶಾ ಸವಾಲೆಸೆದಿದ್ದಾರೆ.

“ಜಾತಿ ಆಧಾರಿತ ಸಮೀಕ್ಷೆಯ ಮೂಲಕ, ಅವರು ತಮ್ಮನ್ನು ಇಬಿಸಿಯ ಹಿತೈಷಿಗಳೆಂದು ಬಿಂಬಿಸಿದ್ದಾರೆ. ಆದರೆ ವಾಸ್ತವವಾಗಿ, ಅವರು ಅವರನ್ನು ವಂಚಿಸುತ್ತಿದ್ದಾರೆ ಮತ್ತು ದಾರಿ ತಪ್ಪಿಸಿದ್ದಾರೆ. ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಲಾಯಿತು… ಮುಸ್ಲಿಮರು ಮತ್ತು ಯಾದವರ ಅಂಕಿಅಂಶಗಳು ಹೆಚ್ಚುತ್ತಿದ್ದು, ಇಬಿಸಿ ಜನಸಂಖ್ಯೆ ಕ್ಷೀಣಿಸುತ್ತಿದೆ, ಇದು ಇಬಿಸಿಗೆ ಮಾಡಿದ ಅನ್ಯಾಯವಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.

ವಿಡಿಯೊ ನೋಡಿ: ಶಿಕ್ಷಣ ಇಲಾಖೆಯ ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ! Janashakthi Media

Donate Janashakthi Media

Leave a Reply

Your email address will not be published. Required fields are marked *