ಮಾಹಿತಿ ಹಾರಿಸುವ ಕುದುರೆಯಿಂದ “ಮಾಹಿತಿ ಇಲ್ಲಾ” ವರೆಗೆ “ಅರೆ ಸತ್ಯ/ ಅಸತ್ಯ/ 56 ಅಂಗುಲ ಸತ್ಯ”

ವೇದರಾಜ ಎನ್‌ ಕೆ

ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಮೊದಲು  ಪ್ರಧಾನ ಮಂತ್ರಿಗಳು ತೀಕ್ಷ್ಣವಾದ, ಕಠಿಣವಾದ ಪ್ರಶ್ನೆಗಳನ್ನು ಕೇಳಿ ಅಂದರು.

(ಶೀರ್ಷಿಕೆಯ ಚಿತ್ರ: “ತೀಕ್ಷ್ಣ ಪ್ರಶ್ನೆಗಳನ್ನು ಕೇಳಿ-ನಾವು ಉತ್ತರಗಳೊಂದಿಗೆ ಸಿದ್ಧವಾಗಿರುತ್ತೇವೆ”
ಅರೆ ಸತ್ಯ/ ಅಸತ್ಯ/56 ಅಂಗುಲ ಸತ್ಯ
ಮಂಜುಲ್, ಫಸ್ಟ್ ಪೋಸ್ಟ್)

ಪ್ರಧಾನ ಮಂತ್ರಿಗಳ ಆಹ್ವಾನದ  ಬೆನ್ನಹಿಂದೆಯೆ ಎರಡು ಪ್ರಮುಖ ಪ್ರಶ್ನೆಗಳು ಎದ್ದವು- ಮೊದಲು ಪೆಗಸಸ್ ಗೂಢಚಾರಿಕೆ ತಂತ್ರಾಂಶ ಮತ್ತು ನಂತರ ಆಕ್ಸಿಜನ್ ಕೊರತೆಯಿಂದ ಸಾವುಗಳ ಪ್ರಶ್ನೆ.

***

ಅಧಿವೇಶನದ ಮೊದಲ ದಿನವೇ ಇಸ್ರೇಲಿ ಮೂಲದ ಗೂಢಚಾರಿಕೆಯ ತಂತ್ರಾಂಶ ಭಾರತದಲ್ಲೂ ಹಾವಳಿ ನಡೆಸಿದ ವರದಿಗಳು ಪ್ರಕಟವಾದವು. ಇದನ್ನು ತಯಾರಿಸಿದ ಕಂಪನಿ ಎನ್‍.ಎಸ್‍.ಒ. ಗ್ರುಪ್ ಈ ಮೊದಲೇ ತಾನು “ಪರೀಕ್ಷಿಸಲ್ಪಟ್ಟ” ಸರಕಾರಗಳೊಂದಿಗೆ ಮಾತ್ರ ವ್ಯವಹರಿಸುವುದು ಎಂದು ಘೋಷಿಸಿದ್ದರಿಂದ  ಸಹಜವಾದ ಪ್ರಶ್ನೆ ಭಾರತದಲ್ಲಿ ನೂರಾರು ಪತ್ರಕರ್ತರು, ಪ್ರಧಾನಿಗಳಿಂದ ‘ಆಂದೋಲನ ಜೀವಿ’ಗಳು ಎಂದು ಕರೆಸಿಕೊಂಡವರು, ಪ್ರತಿಪಕ್ಷಗಳ ರಾಜಕಾರಣಿಗಳು, ಸರಕಾರೀ ಅಧಿಕಾರಿಗಳು ಮುಂತಾದವರ ಫೋನ್ ನಂಬರುಗಳು ಪೆಗಸಿಸ್ ಪಟ್ಟಿಯಲ್ಲಿ ಹೇಗೆ ಬಂದವು ಎಂಬುದನ್ನು ಭಾರತದ ಸರಕಾರವೇ ಸ್ಪಷ್ಟಪಡಿಸಬೇಕಲ್ಲವೇ ಎಂಬುದು.

“ಭಾರತ ಸರಕಾರ ಪೆಗಸಿಸ್ ತಂತ್ರಾಂಶವನ್ನು ಬಳಸಿದೆಯೇ?”

ಅದಕ್ಕೆ ಮೋದಿ  ಸರಕಾರದ ಮಂತ್ರಿಗಳ ಉತ್ತರ…

“ * ನೋಡಿ, ನಾವು ಬಳಸಿದ್ದೇವೆ ಎಂದು ನೀವು ಸಾಬೀತು ಮಾಡಲಾರಿರಿ
* ಏನೇ ಆದರೂ, ನಮ್ಮ ಕಣ್ಗಾವಲು ಎಲ್ಲವೂ ಕಾನೂನುಬದ್ಧವೇ..
* ಅಲ್ಲದೆ ನಾವು ಏನನ್ನೂ ಒಪ್ಪಿಕೊಂಡಿಲ್ಲ…
* ಮತ್ತು ತಾನೇನೂ ತಪ್ಪು ಮಾಡಿಲ್ಲ ಎಂದು ಎನ್‍.ಎಸ್‍.ಒ. ಹೇಳಿದೆ”

“* ಮತ್ತು ಹಲವು ದೇಶಗಳು ಪೆಗಸಿಸ್‍ ಬಳಸುತ್ತಿವೆ…
* ಮತ್ತು ಕಾಂಗ್ರೆಸ್‍ ಕೂಡ ಜನಗಳ ಮೇಲೆ ಗೂ಼ಢಚಾರಿಕೆ ನಡೆಸಿದೆ..
* ಆದ್ದರಿಂದ….ಏನೆಂದರೆ….ಯಾಕೆಂದರೆ..”
(ಪೆನ್‍ ಪೆನ್ಸಿಲ್‍ ಡ್ರಾ / ಫೇಸ್‍ ಬುಕ್)

ಸರಕಾರದ ಪರವಾಗಿ ಸಮಜಾಯಿಷಿ ಕೊಡಲೇಬೇಕಾದ ಮಂತ್ರಿಗಳ ಪೀಕಲಾಟ…..

ಗೃಹಮಂತ್ರಿಗಳ ‘ಕ್ರೊನೋಲಜಿ’ಯಲ್ಲೂ ಉತ್ತರ ಸಿಕ್ಕಿಲ್ಲ-ಪ್ರಶ್ನೆ ಗಾಢವಾಗಿದೆಯಷ್ಟೇ.

***

ಎನ್‍.ಎಸ್‍.ಒ. ತನ್ನ ಈ ತಂತ್ರಾಂಶಕ್ಕೆ ‘ಪೆಗಸಸ್’(ಗ್ರೀಕ್‍ ಪುರಾಣಗಳಲ್ಲಿನ ಹಾರುವ ಕುದುರೆ) ಎಂದು ಹೆಸರಿಟ್ಟದ್ದು ಅದು ‘ಗಾಳಿ’ಯಲ್ಲಿ ಹಾರಿಕೊಂಡು ಹೋಗಿ ಫೋನ್‍, ಲ್ಯಾಪ್‍ ಟಾಪ್‍ ಇತ್ಯಾದಿಗಳನ್ನು ತೂರಿಕೊಂಡು ಶತ್ರು ಪಾಳಯವನ್ನು ಬೇಧಿಸಬೇಕು  ಎಂಬುದಕ್ಕಾಗಿಯೇ ಎಂದು ಈ ಕಂಪನಿಯ ಸ್ಥಾಪಕರು ಹೇಳಿದ್ದಾರಂತೆ…ಆದರೆ ಈಗ ಬಯಲಾಗಿರುವ ಪಟ್ಟಿಯಲ್ಲಿ ಇರುವುದು ಭಾರತೀಯರ ನಂಬರುಗಳೇ ಹೊರತು ನಮ್ಮ ಶತ್ರುರಾಷ್ಟ್ರಗಳವರದ್ದು ಅಲ್ಲ!

(ಪಿ.ಮಹಮ್ಮದ್, ಆಂದೋಲನ)

***

“ಪ್ರಾಜೆಕ್ಟ್ ಪೆಗಸಸ್” ವರದಿ ಬೇರೆ  ಹಲವು ಪ್ರಶ್ನೆಗಳಿಗೆ ಉತ್ತರ ಸೂಚಿಸಿದೆ ಎಂದು ವ್ಯಂಗ್ಯಚಿತ್ರಕಾರರು ನಂಬಿರುವಂತೆ ಕಾಣುತ್ತದೆ ! ಉದಾ: ಈ ಏಳುವರ್ಷಗಳಲ್ಲಿ ಪ್ರಧಾನಿಗಳು ಒಂದೂ ಪತ್ರಿಕಾ ಗೋಷ್ಠಿ ಏಕೆ ನಡೆಸಿಲ್ಲ  ಎಂಬ  ಪ್ರಶ್ನೆ…

“ಅವರಿಗೆ ನಿಮ್ಮ ಮನದ ಮಾತುಗಳು ಗೊತ್ತಿರುವುದರಿಂದಲೇ

ಅವರು  ಪತ್ರಿಕಾಗೋಷ್ಠಿ ನಡೆಸುವುದಿಲ್ಲ!”

(ಮಂಜುಲ್, ಫಸ್ಟ್ ಪೋಸ್ಟ್)

ಭಾರತ ಮಾತ್ರವಲ್ಲ, ಬೇರೆ ದೇಶಗಳು ಕೂಡ ಇದನ್ನು ಬಳಸುತ್ತಿವೆ ಎಂಬುದು ಸರಕಾರದ ‘ಸಮಜಾಯಿಷಿಯ ಒಂದು ಅಂಶ. ನಿಜ, ಆದರೆ ಕೆಲವು ದೇಶಗಳು ಈ ಬಗ್ಗೆ ತನಿಖೆಯನ್ನೂ ಆರಂಭಿಸಿವೆಯಲ್ಲಾ? ನಮ್ಮಲ್ಲೇಕೆ ಇಲ್ಲ ಎಂಬುದು ಮುಂದಿನ ಪ್ರಶ್ನೆ.

“ಸತ್ಯಮೇವ ಜಯತೇ” !

ಫ್ರಾನ್ಸ್ ಪೆಗಸಸ್ ಮೇಲೆ ತನಿಖೆ ನಡೆಸಲಿದೆಯಂತೆ

(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್‌ಪ್ರೆಸ್)

***

ಯಾರ‍್ಯಾರದೋ ಗೂಢಚರ್ಯೆಯಲ್ಲಿ ಸಮಯ ಕಳೆಯುವ ಬದಲು…..

“ಅವರು ನನ್ನ ಫೋನನ್ನು ಹ್ಯಾಕ್‍ ಮಾಡಿದ್ದರೆ…)

(ಅಲೋಕ್ ನಿರಂತರ್, ಫೇಸ್‌ಬುಕ್)

ಅರ್ಥವ್ಯವಸ್ಥೆ ಕುಸಿಯುತ್ತಿದೆ ಎಂಬುದು ಸರಕಾರದ ಗಮನಕ್ಕೆ ಬರುತ್ತಿತ್ತೇನೋ…

***

ಇಲ್ಲ, ಅಂತರ‍್ರಾಷ್ಟ್ರೀಯ ಪಿತೂರಿ ಕಾಣುತ್ತಿತ್ತೇನೋ…..

…ಉದ್ಯೋಗ………. ಬಡತನ……ಲಸಿಕೆ…….

….ಹಣಕಾಸು…….  ಪೆಟ್ರೋಲ್……ಭದ್ರತೆ……..

“…..ಸರ್, ಇದೊಂದು ಅಂತರ‍್ರಾಷ್ಟ್ರೀಯ ಪಿತೂರಿಯ ಹಾಗೆ ಕಾಣುತ್ತದೆ”

(ಸಂದೀಪ್ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ)

ಆಸ್ಪತ್ರೆಗಳಲ್ಲಿ, ಆಸ್ಪತ್ರೆಗಳ ಗೇಟುಗಳಲ್ಲಿ ಆಕ್ಸಿಜನ್‍ ಗಾಗಿ ತಡಕಾಡುತ್ತಿದ್ದವರ ಫೋನ್‍ಗಳನ್ನು ಕದ್ದಾಲಿಸಿದ್ದರೆ ಅವರ ಪ್ರಾಣಗಳಾದರೂ ಉಳಿಯುತ್ತಿದ್ದವೇನೋ……

“ಆಕ್ಸಿಜನ್‍ ಬೇಕೆಂಬ ನಮ್ಮ ಹತಾಶ ಕೂಗನ್ನು ಸರಕಾರ ಗುಟ್ಟಾಗಿ ಕೇಳುತ್ತಿದ್ದರೆ …..”

“ಆಕ್ಸಿಜನ್‍ ಕೊರತೆಯಿಂದ ಸಾವುಗಳ ಮಾಹಿತಿ ಇಲ್ಲʼʼ

(ಸತೀಶ ಆಚಾರ್ಯ, ಫೇಸ್‌ಬುಕ್)

ಸಂಸತ್ತಿನಲ್ಲಿ ಹೀಗೆ ಹೇಳಬೇಕಾದ ಪ್ರಮೇಯವೇ ಬರುತ್ತಿರಲಿಲ್ಲವೇನೋ!

***

ಸತ್ಯವೇ ಏದುಸಿರು ಬಿಡುವಂತೆ ಆಗುತ್ತಿರಲಿಲ್ಲವೇನೋ….

“ಆಕ್ಸಿಜನ್  ಬೇಕು! ನನಗೆ ಉಸಿರುಗಟ್ಟುತ್ತಿದೆ!!”

(ಅಲೋಕ್‍ ನಿರಂತರ್, ಫೇಸ್‌ಬುಕ್)

***

ಆದರೂ ಉತ್ತರ ನಮ್ಮ ಬಳಿ ರೆಡಿಯಾಗಿದೆ ಎಂದು ಪ್ರಧಾನಿಗಳು ಹೇಳಿದ್ದು ಸುಮ್ಮನೇ ಅಲ್ಲ…ಅದು ಅರೆ ಸತ್ಯವೋ, ಅಸತ್ಯವೋ, 56 ಅಂಗುಲ ಸತ್ಯವೋ ……….ಬೇರೆ ಮಾತು

ಆಕ್ಸಿಜನ್‍ ಕೊರತೆಯಿಂದ ಸಾವುಗಳ ಮಾಹಿತಿ ಇಲ್ಲ ಎಂದಾಗಲೂ ಕೋಲಾಹಲವೆದ್ದಿದ್ದರೆ ಅದಕ್ಕೂ ಕಾರಣ……

“ಸತ್ತವರ ಶವಪರೀಕ್ಷೆಯಲ್ಲಿ ಸರಕಾರವನ್ನು ದೂಷಿಸುವ

ಅಂತರ‍್ರಾಷ್ಟ್ರೀಯ ಪಿತೂರಿಯ ಸುಳಿವು ಸಿಕ್ಕಿದೆ”

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

ಆಕ್ಸಿಜನ್‍ ಕೊರತೆಯಿಂದ ಸತ್ತವರ ಮಾಹಿತಿ ಇಲ್ಲ ಎನ್ನುವುದಕ್ಕೂ ಪೆಗಸಸ್ ಪ್ರಕರಣದ ‘ಸಮಜಾಯಿಷಿ’ಗೂ  ಏನಾದರೂ ಸಂಬಂಧವಿದೆಯೇ?  ಇದು  ಪೆಗಸಸ್‍ ನ ಮಾಲಿಕರ ಸಲಹೆಯೂ ಆಗಿರಬಹುದೇ….

“ಯಾವುದೇ ತನಿಖೆಯಲ್ಲಿ “ಮಾಹಿತಿ ಲಭ್ಯವಿಲ್ಲ” ಎಂದು ಅವರಿಗೆ ಹೇಳಿ.

ಅದರಿಂದ ಖಂಡಿತವಾಗಿಯೂ ಕೆಲಸ ಆಗುತ್ತದೆ, ನಂಬಿ!”

(ಸಜಿತ್‍ ಕುಮಾರ್, ಡೆಕ್ಕನ್ ಹೆರಾಲ್ಡ್)

***

ಆದರೆ, ಇದಂತೂ ಖಂಡಿತಾ ಸ್ವಂತ ಉತ್ತರ-‘ಉಚಿತ ಲಸಿಕೆ’ಯ ಅನುಭವದಿಂದ…..

“ಥ್ಯಾಂಕ್ಯೂ ಮೋದೀಜೀ-ನಮ್ಮ ಮೇಲೆ ಉಚಿತ ಕಣ್ಗಾವಲಿಗಾಗಿ”

“ಪ್ರತಿಪಕ್ಷಗಳ ಪ್ರಚಾರವನ್ನು ಎದುರಿಸಲು , ಇಂತಹ ಪ್ರಚಾರ ಫಲಕಗಳನ್ನು

ಎಲ್ಲಾ ಸ್ಥಳಗಳಲ್ಲಿ ಹಾಕಿ”

(ರಾಜೇಂದ್ರ ಧೋಡಪ್ಕರ್, ಫೇಸ್‌ಬುಕ್)

Donate Janashakthi Media

Leave a Reply

Your email address will not be published. Required fields are marked *