ಬೆಂಗಳೂರು: ನಿಂತಿದ್ದ ಕಾರಿಗೆ ಬೆಂಕಿ ಹೊತ್ತಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ಮೆಟ್ರೊ ನಿಲ್ದಾಣ ಬಳಿ ನಡೆದಿದೆ.
ಇಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿದೆ. ನೋಡು ನೋಡುತ್ತಿದ್ದಂತೆ ಕಾರಿಗೆ ದಟ್ಟವಾದ ಬೆಂಕಿ ಹಬ್ಬಿಕೊಂಡಿದೆ.
ಬೆಂಕಿ ಜಾಸ್ತಿ ಆಗಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೇ ವೇಳೆ ಕಾರಿನ ಹಿಂದೆ ನಿಲ್ಲಿಸಿದ್ದ ಬೈಕ್ ಗೂ ಬೆಂಕಿ ಹಬ್ಬಿದ್ದು, ಬೈಕ್ ಕೂಡ ಸುಟ್ಟು ಹೋಗಿದೆ.
ಅದೃಷ್ಟವಶಾತ್ ಕಾರಿನಲ್ಲಿ ಯಾರು ಇರಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಯಾವ ಕಾರಣಕ್ಕಾಗಿ ಕಾರಿಗೆ ಬೆಂಕಿ ಆಗಿದೆ ಅನ್ನೋದು ತನಿಖೆ ನಡೆಲಾಗಿದೆ.
ಸದ್ಯ ಬಸವನಗುಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆದಿದೆ.