ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ವಿಳಂಬಕ್ಕೆ ದಂಡ ಕಟ್ಟಿದ ಕುಟುಂಬಗಳ ಬಿಪಿಲ್ ಕಾರ್ಡ್ ರದ್ದು ತಡೆ: ಸಿಪಿಐಎಂ ಒತ್ತಾಯ

ಬೆಂಗಳೂರು: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ವಿಳಂಬಕ್ಕೆ ದಂಡ ಕಟ್ಟಿದ ಕುಟುಂಬಗಳ ಬಿಪಿಲ್ ಕಾರ್ಡ್ ರದ್ದು ಮಾಡಿರುವ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ಖಂಡಿಸಿದೆ.

ಕೇಂದ್ರ ಸರ್ಕಾರ, ಈ ಹಿಂದೆ ಬಿಪಿಎಲ್ ಕಾರ್ಡ ಪರಿಶೀಲನೆಗೆ, ಪ್ಯಾನ್ ನಂಬರ್ ಗೆ ಆಧಾರ್ ಲಿಂಕ್ ಮಾಡ ಬೇಕೆಂದು ಆದೇಶ ನೀಡಿತ್ತು. ಜನರಿಗೆ ಇದರ ಕುರಿತು ಸರಿಯಾದ ಮಾಹಿತಿ ಇಲ್ಲದ್ದರಿಂದ ನಿಗದಿತ ಗಡುವಿನೊಳಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ದಂಡನೆಗೊಳಪಡಿಸಲು ಕೇಂದ್ರ ಸರಕಾರ ನಿರ್ಧರಿಸಿ ದಂಡ ವಿಧಿಸಿತು.

ತಡವಾಗಿ ಲಿಂಕ್ ಮಾಡಿದವರು ಆದಾಯ ತೆರಿಗೆ ಇಲಾಖೆಗೆ ಒಂದು ಸಾವಿರ ರೂ ದಂಡ ಪಾವತಿಸಿದ್ದರು ಮತ್ತು ಇದನ್ನು ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆ ದಂಡವನ್ನೇ ಆದಾಯವೆಂದು ಪರಿಗಣಿಸಿತು. ಇದು ಬಡವರನ್ನು ಸೌಲಭ್ಯದಿಂದ ಹೊರದೂಡಲು ನೆರವಾಯಿತು. ಕೇಂದ್ರ ಸರಕಾರದ ಈ ನಡೆ ಸ್ಪಷ್ಟವಾಗಿ ಜನ ವಿರೋದಿಯಾಗಿದೆ. ಬಡವರನ್ನು ಸೌಲಭ್ಯದಿಂದ ಹೊರಗಿಡುವ ತಂತ್ರದ ಭಾಗವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ರತನ್‌ ಟಾಟಾ ನಿಧನ

ಆದರೆ, ಈಚೆಗೆ, ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು ಬಿಪಿಎಲ್ ಕಾರ್ಡಗಳ ಆರ್ಹತೆ ಪರಿಶೀಲನೆಗೆ ಕ್ರಮವಹಿಸಿ, ಪ್ಯಾನ್ ನಂಬರ್ ಗೆ ಆಧಾರ್ ನಂಬರ್ ಲಿಂಕ್ ವಿಳಂಬಕ್ಕೆ ಆದಾಯ ತೆರಿಗೆ ಇಲಾಖೆಗೆ ದಂಡ ಪಾವತಿಸಿದ್ದ ರಾಜ್ಯದ ಬಿಪಿಎಲ್ ಕಾರ್ಡ್ ಕುಟುಂಬಗಳನ್ನು ಈ ಇಲಾಖೆಯು ಸರಿಯಾಗಿ ಗಮನಿಸದೆ, ಆದಾಯ ತೆರಿಗೆ ಪಾವತಿದಾರರ ಪಟ್ಟಿಗೆ ಸೇರಿಸಿತಲ್ಲದೆ, ರಾಜ್ಯದ ಸುಮಾರು ಒಂದು ಲಕ್ಷ ಕ್ಕೂ ಅಧಿಕ ಕಾರ್ಡಗಳನ್ನು ಅವಸರದಲ್ಲಿ ಕಡಿತ ಮಾಡಿತು. ಇದು ಮತ್ತೊಂದು ದೊಡ್ಡ ತಪ್ಪಾದ ನಡೆಯಾಗಿದೆ.

ಇದರಿಂದ, ರಾಜ್ಯದ ಅಪಾರ ಸಂಖ್ಯೆಯ ನೈಜ ಬಿಪಿಎಲ್ ಕಾರ್ಡದಾರರು ತೊಂದರೆಗೊಳಗಾಗಿದ್ದಾರೆ. ಸರಕಾರದ ಯಾವುದೇ ಸಹಾಯ/ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ತೋರುವುದು ಮಾನದಂಡವಾಗಿರುವುದರಿಂದ ಈ ದುರುದ್ದೇಶ ಪೂರಿತ ಅವಸರದ ತಪ್ಪಾದ ನಡೆಯು ಅವರನ್ನು ಅನೇಕ ಸೌಲಭ್ಯಗಳಿಂದ ವಂಚಿತರನ್ನಾಗಿಸಿದೆ.

ಹಾಗಾಗಿ ಇದನ್ನು ಪುನರ್ ಪರಿಶೀಲಿಸಿ, ನೈಜ ಫಲಾನುಭವಿಗಳು ಸೌಲಭ್ಯ ವಂಚಿತರಾಗದಂತೆ ತಡೆಯಲು ತಕ್ಷಣವೇ ಬಿಪಿಎಲ್ ಕಾರ್ಡ ಕಡಿತದ ಕ್ರಮವನ್ನು ವಾಪಸ್ಸು ಪಡೆಯಬೇಕೆಂದು ಸಿಪಿಐಎಂ ಆಗ್ರಹಿಸುತ್ತದೆ ಮತ್ತು ಅಲ್ಲಿಯವರೆಗೆ ಫಲಾನುಭವಿಗಳಾಗಿ ಸೌಲಭ್ಯ ಪಡೆಯಲು ಅನುವಾಗುವಂತೆ ಅಗತ್ಯ ಕ್ರಮವಹಿಸಲು ಒತ್ತಾಯಿಸುತ್ತದೆ.

ಇದನ್ನೂ ನೋಡಿ: ಹೇಗೆ ಬರೆಯಲಿ ನಾ ಕವಿತೆ…? ಕೆ.ಮಹಾಂತೇಶ್Janashakthi Media

Donate Janashakthi Media

Leave a Reply

Your email address will not be published. Required fields are marked *