ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ʼಬೈಬೈ ಬಿಜೆಪಿʼ

ಬೆಂಗಳೂರು :  ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ. ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಬೈ ಬೈ ಬಿಜೆಪಿ ಎಂದು ಹಲವರು ಪೋಸ್ಟ್‌ ಮಾಡುತ್ತಿದ್ದಾರೆ. #ByeByeBJP ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ ಆಗಿದೆ. ಈಗಾಗಲೇ 26 ಸಾವಿರ ಜನರು ಈ ಹ್ಯಾಶ್‌ಟ್ಯಾಗ್‌ ಬಳಸಿದ್ದು  ಟ್ರೆಂಡಿಂಗ್‌ನಲ್ಲಿ 6 ನೇ ಸ್ಥಾನದಲ್ಲಿದೆ.

ಬಿಜೆಪಿ ಸರಕಾರದ 40% ಕಮೀಷನ್‌ ವಿರುದ್ಧ ಸಿಡಿದೆದ್ದಿರುವ ಮತದಾರರು, ರಾಜ್ಯ ಬಿಜೆಪಿ ನಾಯಕರ ಭ್ರಷ್ಟಚಾರ, ಹಗರಣ, ದೊಂಬಿ ನಡೆಸಿದ ಚಿತ್ರಗಳನ್ನು ಶೇರ್‌ ಮಾಡುತ್ತಿದ್ದಾರೆ. ನಂದಿನಿ ವಿವಾದ, ಕೋಮುಗಲಭೆ, ನೇಮಕಾತಿ ಹಗರಣ, ಬೀಟ್‌ ಕಾಯಿನ್‌ ಹಗರಣ, ಆಪರೇಷನ್‌ ಕಮಲ, ರಸ್ತೆಗುಂಡಿ, ಕೋವಿಡ್‌ ಸಾವುಗಳು ಹೀಗೆ ನಾನಾ ವಿಷಯಗಳ ಕುರಿತು ಶೇರ್‌ ಮಾಡುತ್ತಿದ್ದಾರೆ.

ರಾಜ್ಯದ ಜನರಷ್ಟೆ ಅಲ್ಲದೆ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶದ ಟ್ವೀಟರ್‌ ಬಳಿಕೆದಾರರೂ ಕೊಡ #ByeByeBJP ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ಆ ಕುರಿತ ಕೆಲ ಪೋಸ್ಟ್‌ಗಳನ್ನು ಈ ಕೆಳಗಿನಂತೆ ನೋಡಬಹುದು.

 

 

”ಸುಳ್ಳು ಭಾಷಣ ಸಾಕು ಪೊಳ್ಳು ಭರವಸೆಯೂ ಸಾಕು ಅಭಿವೃದ್ಧಿಯ ಆಡಳಿತಕ್ಕೆ ಮತ ನೀಡೋಣ! 40% ಸರ್ಕಾರಕ್ಕೆ #ByeByeBJP ಹೇಳೋಣ!” ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದ ತುಂಬೆಲ್ಲ ಓಡಾಡುತ್ತಿವೆ.

Donate Janashakthi Media

Leave a Reply

Your email address will not be published. Required fields are marked *