ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣ ದರವೂ ಹೆಚ್ಚಳ: ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಗರಿಷ್ಠ ₹9 ಹೆಚ್ಚಳ; ಬಿಎಂಟಿಸಿ ಕನಿಷ್ಠ ದರ ₹6ರಿಂದ ₹10ಕ್ಕೆ ಏರಿಕೆ; ಬೆಂಗಳೂರಿನಿಂದ ಮೈಸೂರಿಗೆ ವೇಗದೂತ ಪ್ರಯಾಣಕ್ಕೆ ಇನ್ಮುಂದೆ ₹197
ಬೆಂಗಳೂರು: ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಿದೆ. ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೊಸ ದರಗಳನ್ನು ಪ್ರಕಟಿಸಿದ್ದಾರೆ. ಹಾಲಿನ

ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರವನ್ನು ಗರಿಷ್ಠ ₹9ರಷ್ಟು ಹೆಚ್ಚಿಸಲಾಗಿದೆ. ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು ₹6ರಿಂದ ₹10ಕ್ಕೆ ಏರಿಸಲಾಗಿದೆ. ವಾಯುವಜ್ರ ಹವಾನಿಯಂತ್ರಿತ ಬಸ್‌ಗಳ ಗರಿಷ್ಠ ದರ ₹75ರಿಂದ ₹90ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೊಸ ದರ

ಸಾಮಾನ್ಯ ಬಸ್‌ಗಳು

ಮಾರ್ಗ ಹಳೆಯ ದರ ಹೊಸ ದರ
ನೆಲಮಂಗಲ ₹35 ₹44
ಹೊಸಕೋಟೆ ₹35 ₹44
ದೊಡ್ಡಬಳ್ಳಾಪುರ ₹38 ₹47
ಆನೇಕಲ್ ₹38 ₹47
ಮಾಗಡಿ ₹46 ₹57
ಮಾಲೂರು ₹46 ₹57

ವೇಗದೂತ ಬಸ್‌ಗಳು

ಮಾರ್ಗ ಹಳೆಯ ದರ ಹೊಸ ದರ
ಕೋಲಾರ ₹81 ₹100
ತುಮಕೂರು ₹81 ₹100
ಮಂಡ್ಯ ₹110 ₹136
ಮೈಸೂರು ₹160 ₹197
ಹಾಸನ ₹219 ₹270
ಚಿಕ್ಕಮಗಳೂರು ₹295 ₹363

ಬಿಎಂಟಿಸಿ ಪ್ರಯಾಣ ದರದಲ್ಲೂ ಹೆಚ್ಚಳ

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ದರವನ್ನೂ ಪರಿಷ್ಕರಿಸಲಾಗಿದೆ. ಪ್ರಮುಖ ಮಾರ್ಗಗಳ ಹೊಸ ದರಗಳು ಹೀಗಿವೆ: ಹಾಲಿನ

ಮಾರ್ಗ ಹಳೆಯ ದರ ಹೊಸ ದರ
ಮೆಜೆಸ್ಟಿಕ್–ಶಿವಾಜಿನಗರ ₹12 ₹18
ಮೆಜೆಸ್ಟಿಕ್–ಯಶವಂತಪುರ ₹18 ₹25
ಮೆಜೆಸ್ಟಿಕ್–ಬನಶಂಕರಿ ₹23 ₹35
ಮೆಜೆಸ್ಟಿಕ್–ಅತ್ತಿಬೆಲೆ ₹30 ₹42
ಮೆಜೆಸ್ಟಿಕ್–ವಿಜಯನಗರ ₹18 ₹25
ಮೆಜೆಸ್ಟಿಕ್–ಕಾಡುಗೋಡಿ ₹30 ₹40
ಕೆ.ಆರ್. ಮಾರುಕಟ್ಟೆ–ನೆಲಮಂಗಲ ₹30 ₹40
ಕೆ.ಆರ್. ಮಾರುಕಟ್ಟೆ–ಹೊಸಕೋಟೆ ₹30 ₹40

ಪ್ರತಿ ಎರಡು ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ₹4ರಷ್ಟು ಮತ್ತು ಎರಡು ಕಿ.ಮೀ.ನಿಂದ ನಾಲ್ಕು ಕಿ.ಮೀ.ವರೆಗಿನ ಪ್ರಯಾಣಕ್ಕೆ ₹6ರಷ್ಟು ಹೆಚ್ಚಳ ಮಾಡಲಾಗಿದೆ.

ವಜ್ರ ಬಸ್‌ಗಳ ದರದಲ್ಲೂ ಏರಿಕೆ

ಬಿಎಂಟಿಸಿಯ ಹವಾನಿಯಂತ್ರಿತ ವಜ್ರ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ.

ಮಾರ್ಗ ಹಳೆಯ ದರ ಹೊಸ ದರ
ಸೆಂಟ್ರಲ್ ಸಿಲ್ಕ್ ಬೋರ್ಡ್–ಹೆಬ್ಬಾಳ ₹55 ₹65
ಬನಶಂಕರಿ–ಐಟಿಪಿಎಲ್ ₹50 ₹60
ಕೆ.ಆರ್. ಪುರಂ–ಸೆಂಟ್ರಲ್ ಸಿಲ್ಕ್ ಬೋರ್ಡ್ ₹40 ₹55
ಸೆಂಟ್ರಲ್ ಸಿಲ್ಕ್ ಬೋರ್ಡ್–ಕಾಡುಗೋಡಿ ₹50 ₹60
ಮೆಜೆಸ್ಟಿಕ್–ಅತ್ತಿಬೆಲೆ ₹60 ₹70

 

ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ 74.04 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ನಾಲ್ಕು ನಿಗಮಗಳಿಗೆ ಹಣ ನೀಡುತ್ತಿದೆ. ಹೀಗಾಗಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ: ಡಿ.ಕೆ. ಶಿವಕುಮಾರ್

ಸಾರಿಗೆ ನಿಗಮಗಳ ನಷ್ಟದ ನೆಪ

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಪ್ರತಿವರ್ಷ ಸುಮಾರು ₹2,000 ಕೋಟಿ ನಷ್ಟ ಅನುಭವಿಸುತ್ತಿವೆ. ಡೀಸೆಲ್ ಬೆಲೆ, ಬಿಡಿಭಾಗಗಳ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳದಿಂದ ನಿಗಮಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 1,03,600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 1.24 ಕೋಟಿಗೂ ಹೆಚ್ಚು ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ನಷ್ಟವಾಗಿಲ್ಲ. ಮಹಿಳೆಯರ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರವೇ ನಿಗಮಗಳಿಗೆ ಮರುಪಾವತಿಸುತ್ತಿದೆ. ಪ್ರತಿದಿನ ಸುಮಾರು 74.04 ಲಕ್ಷ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಸಾರಿಗೆ ಬಸ್‌ಗಳ ಪ್ರಯಾಣ ದರವನ್ನು ಒಮ್ಮೆ ಮಾತ್ರ ಹೆಚ್ಚಿಸಲಾಗಿದೆ. ಡೀಸೆಲ್ ದರ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಹಾಲು ಮತ್ತು ಮೊಸರಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರವೂ ಹೆಚ್ಚಳವಾಗಿರುವುದರಿಂದ ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾಮಾನ್ಯ ಪ್ರಯಾಣಿಕರ ಮಾಸಿಕ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.

ಇದನ್ನೂ ನೋಡಿ : ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media

Donate Janashakthi Media

Leave a Reply

Your email address will not be published. Required fields are marked *