ಜಾಗತಿಕ ಶ್ರೇಷ್ಠ ಫುಟ್ಬಾಲ್‌ ಆಟಗಾರ ಪೀಲೆ ನಿಧನ

ರೆಸಿಲಿಯಾ: ಫುಟ್ಬಾಲ್ ದಂತಕತೆ, ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ ದೇಶದ ಫುಟ್ಬಾಲ್‌ ಆಟಗಾರ ಪೀಲೆ(82) ನಿಧನರಾಗಿದ್ದಾರೆ. ಕ್ಯಾನ್ಸರ್ ಕಾಯಿಲೆ, ಮೂತ್ರಪಿಂಡ(ಕಿಡ್ನಿ) ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಪೀಲೆ ನವೆಂಬರ್‌ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗೆ ಅವರಿಗೆ ಕೋವಿಡ್ ಸೋಂಕು ತಗಲಿತ್ತು.

ಮೂರು ಬಾರಿ ಫೀಫಾ ವಿಶ್ವಕಪ್ ವಿಜೇತ ಪೀಲೆ ಅವರು, ತನ್ನ 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದರು. 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ಫೀಫಾ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಅವರ ಅದ್ಭುತವಾದ ಸಾಧನೆಗಾಗಿ ಅವರನ್ನು ದೇಶದ ಫುಟ್ಬಾಲ್‌ ನ ಸುವರ್ಣ ಯುಗದ ಸಾಧಕನೆಂದು ಬಣ್ಣಿಸಲಾಗಿದೆ. ಫೀಫಾ ವಿಶ್ವಕಪ್‌ನಲ್ಲಿ ಯಶಸ್ಸಿನ ಸಾಧನೆ ಮಾಡಿರುವ ಪೀಲೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದ್ದರು.

ಪೀಲೆ ಅವರ ಪೂರ್ಣ ಹೆಸರು ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಅವರು, 23 ಅಕ್ಟೋಬರ್ 1940ರಲ್ಲಿ  ಜನಿಸಿದರು. 1956ರಲ್ಲಿ 15 ವರ್ಷ ವಯಸ್ಸಿನವನಾಗಿದ್ದಾಗ ಸ್ಯಾಂಟೋಸ್‌ ಗಾಗಿ ತನ್ನ ಮೊದಲ ಪಂದ್ಯ ಆಡಿದ್ದರು. ನಂತರ ಒಂದೇ ವರ್ಷದಲ್ಲಿ ರಾಷ್ಟ್ರೀಯ ತಂಡ ಪ್ರವೇಶಿಸಿದ ಅವರು, ಅರ್ಜೆಂಟೀನಾ ವಿರುದ್ಧ ಮೊದಲ ಗೋಲ್ ಗಳಿಸಿದ್ದರು. 1958ರಲ್ಲಿ ಅವರು ಸ್ವೀಡನ್‌ನಲ್ಲಿ ನಡೆದ ಫುಟ್ಬಾಲ್‌ ವಿಶ್ವಕಪ್‌ಗೆ ಮೊದಲ ಬಾರಿಗೆ ಆಯ್ಕೆಯಾದರು.

ಇದನ್ನು ಓದಿ: ವಿಶ್ವ ಗೆದ್ದ ಮೆಸ್ಸಿ ಬಳಗ, ಹೃದಯ ಕದ್ದ ಎಂಬಾಪೆ ಬಳಗ

ಅವರು 1977ರಲ್ಲಿ ನಿವೃತ್ತರಾಗುವ ಹೊತ್ತಿಗೆ 1,000ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ 95 ಪಂದ್ಯಗಳಲ್ಲಿ ಆಡಿದ ಪೀಲೆ 77 ಗೋಲುಗಳನ್ನು ಗಳಿಸುವ ಮೂಲಕ ಸಾರ್ವತ್ರಿಕ ದಾಖಲೆ ಮಾಡಿದ್ದಾರೆ. ಸದ್ಯ ಅವರ ಈ ಸಾಧನೆಗೆ ಆಟಗಾರ ನೇಮರ್‌ 124 ಪಂದ್ಯಗಳಲ್ಲಿ 77 ಗೋಲುಗಳನ್ನು ಬಾರಿಸುವ ಮೂಲಕ ಸಮಬಲ ಸಾಧಿಸಿದ್ದಾರೆ. ಅವರು 1959ರಲ್ಲಿ 127 ಗೋಲ್​ಗಳನ್ನು ಬಾರಿಸಿದ್ದರೆ, 1961ರಲ್ಲಿ 110 ಗೋಲ್​ಗಳನ್ನು ಬಾರಿಸಿದ್ದಾರೆ. ವರ್ಷದ ಸಾಧನೆಯ ದಾಖಲೆಯನ್ನು ಇದುವರೆಗೂ ಯಾರೂ ಮುರಿದಿಲ್ಲ.

1958ರ ಜರುಗಿದ ವಿಶ್ವಕಪ್‌ನಲ್ಲಿ ಪೀಲೆ ಅಮೋಘ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯ ಉದ್ದಕ್ಕೂ ಆರು ಗೋಲು ಗಳಿಸಿದ ಅವರು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು.

2021ರ ಸೆಪ್ಟಂಬರ್‌ ತಿಂಗಳಿನಲ್ಲಿ ಪೀಲೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ಹೊರ ತೆಗೆಯಲಾಯಿತು. ನಂತರ ಅವರಿಗೆ ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಮತ್ತೆ ಕ್ಯಾನ್ಸರ್ ಸಮಸ್ಯೆ ಮರುಕಳಿಸಿತ್ತು.

ಅವರ ಅದ್ಭುತವಾದ ಸಾಧನೆ ಎಷ್ಟರ ಮಟ್ಟಿಗೆ ಮರುಕಳಿಸುತ್ತಿ ಎಂದರೆ, ಫುಟ್ಬಾಲ್ ವ್ಯಾಪ್ತಿಯನ್ನು ಮೀರಿ ಅವರ ವರ್ಚಸ್ಸು ಬೆಳೆಯಿತು. ಉದ್ಯಮದಲ್ಲೂ ಅವರ ಹೆಸರು ಅತ್ಯಂತ ಚಲಾವಣೆ ವಿಷಯವಾಯಿತು.  ಕ್ರೀಡಾ ಉಡುಪುಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಕೈಗಡಿಯಾರಗಳಲ್ಲಿ ಅವರ ಚಿತ್ರಗಳು ಕಾಣಿಸಿಕೊಂಡವು.

ಮೂರು ಬಾರಿ ಮದುವೆಯಾಗಿರುವ ಪೀಲೆ ಅವರಿಗೆ 7 ಮಕ್ಕಳಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *