ಗಡಿ ವಿವಾದ: ಅಸ್ಸಾಂ ಸಿಎಂ ಮತ್ತು ಇತರ 6 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಗುವಾಹಟಿ: ವೈರೆಂಗ್‌ತೆ ಗಡಿ ಪ್ರದೇಶದಲ್ಲಿ ಸೋಮವಾರದಂದು ಮಿಜೋರಾಂ ಮತ್ತು ಅಸ್ಸಾಂ ಪೊಲೀಸ್ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ವೈರೆಂಗ್‌ತೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಕೊಂಡಿದೆ. ಈ ಸಂಬಂಧಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 7 ಮಂದಿ ವಿರುದ್ಧ ಮಿಜೋರಾಂ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಾಗೂ ಡಿಐಜಿ ಅನುರಾಗ್ ಅಗರ್ವಾಲ್, ಉಪ ಐಜಿಪಿ ದೇವ್ ಜ್ಯೋತಿ ಮುಖರ್ಜಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಕೀರ್ತಿ ಜಲ್ಲಿ, ಎಸ್’ಪಿ ವೈಭವ್ ಚಂದ್ರಶೇಖರ್ ನಿಂಬಾಳ್ಕರ್, ವಿಭಾಗೀಯ ಅರಣ್ಯ ಅಧಿಕಾರಿ ಸನ್ನಿಡಿಯೋ ಚೌಧರಿ ಮತ್ತು ಧೋಲೈ ಪೊಲೀಸ್ ಠಾಣಾಧಿಕಾರಿ ಸಾಹಬ್ ಉದ್ದೀನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನಲಾಗುತ್ತಿದೆ.

ಇದನ್ನು ಓದಿ: ಗಡಿ ವಿವಾದ: ಅಸ್ಸಾಂ-ಮಿಜೋರಾಮ್‌ ನಡುವೆ ಸಂಘರ್ಷದಲ್ಲಿ ಎಂಟು ಬಲಿ-ಹಲವರಿಗೆ ಗಾಯ

ಮಿಜೋರಾಂನ ಕೋಲಾಸಿಬ್ ಜಿಲ್ಲೆಯ ವೈರೆಂಗ್‌ತೆ ಹೊರವಲಯದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಏಳು ಮಂದಿ ವಿರುದ್ಧ ಕೊಲೆ, ಅಪರಾಧ ಸಂಚು ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿ ಕೇಸು ದಾಖಲಿಸಲಾಗಿದೆ ಎಂದು ಮಿಜೋರಾಂ ಐಜಿಪಿ ಜಾನ್ ನೀಹ್ಲಾಯ ತಿಳಿಸಿದ್ದಾರೆ.

ಭಾನುವಾರದಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, 200 ಮಂದಿ ಅಸ್ಸಾಂ ಪೊಲೀಸ್ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಮತ್ತು ಮಿಜೋರಂ ರಾಜ್ಯಗಳ ನಡುವಿನ ಗಡಿ ವಿವಾದ ವಿಕೋಪಕ್ಕೆ ತಿರುಗಿದೆ. ಕಳೆದ ಒಂದು ವಾರದಿಂದ ಗಡಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಜುಲೈ 26 ರಂದು ಉಭಯ ರಾಜ್ಯಗಳ ಗಡಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 6 ಮಂದಿ ಪೊಲೀಸರು ಹಾಗೂ ಓರ್ವ ನಾಗರೀಕ ಸಾವನ್ನಪ್ಪಿದ್ದರು.

ಮಿಜೋರಾಂ ದುಷ್ಕರ್ಮಿಗಳು ಧಾಳಿ ನಡೆಸಿದ್ದಾರೆ ಎಂದು ಆರೋಪಿಸುತ್ತಿರುವ ಅಸ್ಸಾಂ ಪೊಲೀಸರು ಅಲ್ಲಿಂದ ಬಂದ ದುಷ್ಕರ್ಮಿಗಳು ಕಲ್ಲುತೂರಾಟದಲ್ಲಿ ಭಾಗಿ ಆಗಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಅಸ್ಸಾಂ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಆರೋಪಿಸುತ್ತಿದ್ದಾರೆ.

ಆದರೆ, ಅಸ್ಸಾಂ ಸರ್ಕಾರವು, ಪೊಲೀಸ್‌ ಪಡೆಯನ್ನು ಬಳಸಿ ಗಡಿ ಭಾಗದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಮಿಜೋರಾಂ ಆರೋಪಿಸಿದೆ.

Donate Janashakthi Media

Leave a Reply

Your email address will not be published. Required fields are marked *