ಬೆಂಗಳೂರು: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಿಎಂಟಿಸಿ ಹೊಸ ಮಾರ್ಗ ಸೌಲಭ್ಯ ಕಲ್ಪಿಸಲು ಸಿದ್ದವಾಗಿದೆ. ಚಿಕ್ಕಬಾಣವಾರದಿಂದ ಲಗ್ಗೆರೆಗೆ ನೂತನ ಮಾರ್ಗ ಸಂಖ್ಯೆ ಎಂಎಫ್ 32 ಇಂದಿನಿಂದ ಸಂಚಾರ ನಡೆಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಜನ ಬಿಎಂಟಿಸಿ ಸಂಚಾರವನ್ನು ಅವಲಂಭಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯ ಒದಗಿಸುತ್ತಿದೆ. ಈಗ ಹೊಸ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ.
ಇದನ್ನು ಓದಿ : ಕನ್ನಡ ನಾಡಿನ ಶ್ರಮಿಕರ-ದುಡಿಯುವ ವರ್ಗಗಳ ಬೇಡಿಕೆಗೆ ಸಿಎಂ ಸ್ಪಂದನೆ
ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ
ಸಾರ್ವಜನಿಕರ, ಪ್ರಯಾಣಿಕರ ಅನುಕೂಲಕ್ಕಾಗಿ ಚಿಕ್ಕಬಾಣವಾರದಿಂದ ಮೇಡರಹಳ್ಳಿ ರೈಲ್ವೆ ಗೇಟ್, ಶೆಟ್ಟಿಹಳ್ಳಿ, ಬಸವೇಶ್ವರ ಬಸ್ ನಿಲ್ದಾಣ, ಜಾಲಹಳ್ಳಿ ಕ್ರಾಸ್,ರಾಜಗೋಪಾಲನಗರ ಪೊಲೀಸ್ ಠಾಣೆ ಮಾರ್ಗವಾಗಿ ಲಗ್ಗೆರೆಗೆ ನೂತನ ಮಾರ್ಗ ಸಂಖ್ಯೆ ಎಂಎಫ್ 32 ಇಂದಿನಿಂದ ಬಸ್ ಸಂಚಾರ ನಡೆಸಲಿದೆ.
ಇದನ್ನು ನೋಡಿ : ಭಾರತದಲ್ಲಿ ಬಡವರ ಸಂಖ್ಯೆ ಕೇವಲ 2.7 ಕೋಟಿ ಎಂದು ಬೂಸಿ ಬಿಟ್ಟ ನಿತಿ ಆಯೋಗ, ನಿಜಾಂಶವೇನು? Janashakthi Media