ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದೂ, ಎಸ್‌ಐಟಿಯು ಮುನಿರತ್ನ ವಿರುದ್ಧ ಕೇಳಿ ಬಂದಿದ್ದ ಅತ್ಯಾಚಾರ ಆರೋಪ ತನಿಖೆಯಲ್ಲಿ ರುಜುವಾತಾಗಿದೆ ಎಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಬಿಜೆಪಿ
ಇನ್ನು ತಮ್ಮ ವಿರೋಧಿಗಳನ್ನು ಎಚ್‌ಐವಿ ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕರು ದುಷ್ಕೃತ್ಯ ಎಸಗಿದ್ದರು ಎಂಬ ಗಂಭೀರ ಸ್ವರೂಪದ ಆರೋಪ ಕೂಡ ಸಾಬೀತಾಗಿದೆ ಎಂದು ಎಸ್‌ಐಟಿ ಹೇಳಿದೆ.
ಈ ಆರೋಪವನ್ನು ಐಪಿಸಿ 270ರ ಅಡಿ (ಅಪಾಯಕಾರಿ ರೋಗ ಹರಡುವಿಕೆ) ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಶಾಸಕರ ಕೃತ್ಯಕ್ಕೆ ನೆರವು ನೀಡಿದ ಆರೋಪ ಹೊತ್ತಿದ್ದ ಅವರ ಸಹಚರರಾದ ಆರ್.ಸುಧಾಕರ್, ಪಿ.ಶ್ರೀನಿವಾಸ್ ಹಾಗೂ ಇನ್ಸ್‌ಪೆಕ್ಟರ್ ಬಿ.ಐಯ್ಯಣ್ಣರೆಡ್ಡಿ ವಿರುದ್ಧ ದಾಖಲಾದ ಆಪಾದನೆ ಕೂಡ ತನಿಖೆಯಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: ಟಿ. ವಾಸುದೇವನ್ ನಾಯರ್: ಭಾರತದ ಸಮಕಾಲೀನ ಸಾಹಿತಿಗಳಲ್ಲಿ ಅಗ್ರಗಣ್ಯರು
ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವಂತ ಎಸ್‌ಐಟಿ ಅಧಿಕಾರಿಗಳು, ಅದರಲ್ಲಿ ಐಪಿಸಿ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಇನ್ನೂ ಐಪಿಸಿ 354ಎ ಲೈಂಕಿಕ ಕಿರುಕುಳ, 354ಸಿ ಅನುಮತಿ ಇಲ್ಲದೇ ಮಹಿಳೆಯ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣ, 376(2) ಎನ್ ನಿರಂತರ ಅತ್ಯಾಚಾರ, 308 ಸಂತ್ರಸ್ತೆಯ ಕೊಲ್ಲುವ ಉದ್ದೇಶ, 120ಬಿ ಅಪರಾಧಿಕ ಸಂಚು, 504 ಉದ್ದೇಶ ಪೂರ್ವಕ ಅವಮಾನ, 506 ಜೀವ ಬೆದರಿಕೆ, 270 ಅಪಾಯಕಾರಿ ರೋಗ ಹರಡುವಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಅಂದಹಾಗೇ ಸೆಪ್ಟೆಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ತನ್ನ ಮೇಲೆ ಶಾಸಕ ಮುನಿರತ್ನ, ಸಹಚರರು ಅತ್ಯಾಚಾರ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಕೋಲಾರದ ಬಳಿ ಬಂಧಿಸಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿತ್ತು.
ಇದನ್ನೂ ನೋಡಿ: ‘ಪುರುಷರ ಸಾವಿನ ಸುತ್ತ’ – 498A ಏನು – ಎತ್ತ? Janashakthi Media