ಚಳಿ ಕಾಯಿಸುತ್ತಿದ್ದ ಗುಂಪೊಂದರ ಮೇಲೆ ಹರಿದ ಬಿಜೆಪಿ ನಾಯಕನ ಕಾರು; ಇಬ್ಬರು ಸಾವು

ಧ್ಯಪ್ರದೇಶ: ರಾಜ್ಯದ ಮೋರೆನಾ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕನೊಬ್ಬ ಚಲಾಯಿಸುತ್ತಿದ್ದ ಕಾರೊಂದು ರಸ್ತೆ ಬದಿ ಚಳಿ ಕಾಯಿಸುತ್ತಿದ್ದ ಗುಂಪಿನ ಮೇಲೆ ಹರಿದು ಹತ್ತು ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಘಟನೆ  ಡಿಸೆಂಬರ್.27ರ ಮುಂಜಾನೆ ನಡೆದಿದೆ. ಮೃತರನ್ನು ರಾಮ್ ದತ್ ರಾಥೋಡ್ (65) ಹಾಗೂ ಅರ್ನವ್ ಲಕ್ಷಕರ್ (10) ಎಂದು ಗುರುತಿಸಲಾಗಿದೆ.

ಪೋರಸಾ-ಜೋತಾಯಿ ಬೈಪಾಸ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು ಕಾರು ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಬದಿಯಲ್ಲಿ ಕುಳಿತಿದ್ದವರು ಕೆಲವು ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದರು. ಘಟನೆಯ ವೇಳೆ ಆರೋಪಿ ದೀಪೇಂದ್ರ ಭದೌರಿ ಅತೀ ವೇಗವಾಗಿ ಮತ್ತು ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಅಲ್ಲದೆ ದೀಪೇಂದ್ರ ಭದೌರಿ ಪೋರಸಾ ಗ್ರಾಮಾಂತರ ಘಟಕದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎಂದು ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ | 25 ವರ್ಷದ ಬಳಿಕ ಸಿಐಎಸ್ಎಫ್ ಅಧಿಕಾರಿ ವಿರುಧ್ದ ಮಾಡಿದ ಆರೋಪ ಸುಳ್ಳು : ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಅಪಘಾತದ ಬೆನ್ನಲ್ಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಪೊಲೀಸರ ವಶದಲ್ಲಿದ್ದ ಆರೋಪಿ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಪೊಲೀಸರೇ ಆರೋಪಿಯನ್ನು ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಉದ್ರಿಕ್ತರ ಗುಂಪು ರಸ್ತೆಯಲ್ಲೇ ಕುಳಿತು ಆರೋಪಿಯನ್ನು ಬಂಧಿಸುವವರೆಗೆ ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ ಅಲ್ಲದೆ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಆರೋಪಿಯನ್ನು ಬಂಧಿಸದ ಹೊರತು ತಾನು ಚಿಕಿತ್ಸೆ ಪಡೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾನೆ. ಬಳಿಕ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿ ರವಿ ಭದೌರಿಯಾ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ. ಆರೋಪಿಯನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು.

ಇದನ್ನೂ ನೋಡಿ: ಚಿತ್ರದುರ್ಗ | ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ Janashakthi Media

Donate Janashakthi Media

Leave a Reply

Your email address will not be published. Required fields are marked *