ಅಪೂರ್ಣ ಕಾಮಗಾರಿಗಳ ಉದ್ಘಾಟನೆ : ಮತ ಕೀಳುವ ಯತ್ನದತ್ತ ಬಿಜೆಪಿ

ಸೌಮ್ಯ ಹೆಗ್ಗಡಹಳ್ಳಿ 

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಹಲವಾರು ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಜನಮೆಚ್ಚುವಂತಹ ಕೆಲಸಗಳನ್ನು ಮಾಡದೆ  ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಹಾಗಾಗಿ ಚುನಾವಣೆಯಲ್ಲಿ ಗೆಲ್ಲಲು  ಉದ್ಘಾಟನಾ ಭಾಗ್ಯಗಳನ್ನೇ ಗುರಿಯಾಗಿಸಿಕೊಂಡು ಪೂರ್ಣಗೊಳ್ಳದ ಕಾಮಗಾರಿಗಳನ್ನು ಉದ್ಘಾಟಿಸುವ ಸರಣಿಯನ್ನೇ ಮುಂದುವರಿಸಿಕೊಂಡು ಮತ ಕೀಳಲು ಯತ್ನಿಸುತ್ತಿದೆ.

ಅಪೂರ್ಣಗೊಂಡ ಕಾಮಗಾರಿಗಳ ಸುತ್ತ ಸಮಸ್ಯೆಗಳು ನೂರಾರು ಇವೆ. ಅವುಗಳ ಮೇಲೆ ಬೆಳಕು ಚೆಲ್ಲಬಹುದಾದ ಅಂಶಗಳು ಈ ಕೆಳಗಿನಂತಿವೆ.

ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ಹೈವೇ : ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಉದ್ಘಾಟಿಸಿದರು. ಉದ್ಘಾಟನೆಗೊಂಡ ಮರುದಿನವೇ ರಸ್ತೆಯ ಕೆಲಭಾಗಗಳು ಕಿತ್ತುಬಂದಿತೆಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಪೋಟೋಗಳು ಹರಿದಾಡಿದವು, ಇದು ಇಷ್ಟಕ್ಕೆ ಮುಗಿಯದೆ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಯ ಟೋಲ್‌ ದರವನ್ನು ಹೆಚ್ಚಳಮಾಡಿ ಜನರ ಆಕ್ರೋಶಕ್ಕೆ ಕಾರಣವಾಯಿತು. ಎಕ್ಸ್‌ಪ್ರೆಸ್‌ ಹೈವೇ ದಾರಿಯಲ್ಲಿ ಅನಿರೀಕ್ಷಿತವಾಗಿ ಅಪಘಾತಗಳಾದಾಗ ತಕ್ಷಣಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ವ್ಯವಸ್ಥೆ, ಪೆಟ್ರೋಲ್‌ ಬಂಕ್‌ ಮುಂತಾದ ಕೆಲ ಸೌಲಭ್ಯಗಳನ್ನು ರೂಪಿಸದೆ ಹೆಚ್ಚಿ ದರದಲ್ಲಿ ಟೋಲ್‌ ಕಟ್ಟಲು ಹೇಗೆ ಸಾಧ್ಯ ಎಂದು ಜನರು ಕಿಡಿಕಾರಿದರೂ ಕೂಡ ಮೌನ ವಹಿಸಿದ ಹೆದ್ದಾರಿ ಪ್ರಾಧಿಕಾರಕ್ಕೆ ಸಾಥ್‌ ನೀಡುವಂತೆ ಕೆಎಸ್‌ಆರ್‌ಟಿಸಿಯೂ ಕೂಡ ಬಸ್‌ ಪ್ರಯಾಣದವರನ್ನು ದುಪ್ಪಟ್ಟು ಮಾಡಿತು.

ನಿಲ್ಲದ ಸರಣಿ ಅಪಘಾತ  : ಗುಣಮಟ್ಟವಿಲ್ಲದ ರಸ್ತೆ ನಿರ್ಮಿಸಿದ್ದಾರೆ ಎಂಬ ಆರೋಪ ಒಂದೆಡೆಯಾದರೆ ವೆಗದ ಕಾರಣದಿಂದಾಗಿ ಒಂದಷು ಅಪಘಾತಗಳು ಸಂಭವಿಸಿ, ಆಸ್ಪತ್ರೆಯು ದೂರವಿರುವುದರಿಂದ ಪರದಾಡುವತಾಯಿತು.
ದರೋಡೆ : ಬೆಂಗಳೂರಿನವರೇ ಎನ್ನಲಾದ ಕುಟುಂಬವೊಂದು ಕಾರಿನ್ಲಿ ಬರುತ್ತಿದ್ದ ವೇಳೆ, ರಸ್ತೆ ತಡೆದ ದರೋಡೆಕೋರರು ಸುಮಾರು ಒಂದು ಲಕ್ಷ ರೂಗಳನ್ನು ದಂಪತಿಗಳಿಂದ ಕಸಿದುಕೊಂಡು ಘಟನೆಯೂ ಕೂಡ ಹೈವೇ ಉದ್ಘಾಟನೆಗೊಂಡ ಮಾರನೇ ದಿನ ನಡೆದಿತ್ತು.

ಮಳೆಯಿಂದಾಗಿ ಕೆರೆಯಾದ ರಸ್ತೆ : ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಿದರು. ಇದರಿಂದ ಮಳೆ ನೀರಿಗೆ ಸಿಲುಕಿ ಕೆಲ ವಾಹನಗಳು ಕೆಟ್ಟು ನಿಂತವು. ಈ ಯೋಜನೆಗೆ ಬರೋಬರಿ 9.500 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಸಮಸಮ್ಯೆಗಳ ಅಗರವೇ ಮಾತಾಡುವಂತಾಗಿದೆ. ಪರಿಪೂರ್ಣವಾಗಿ ಮುಗಿಯದ ಕಾಮಗಾರಿ ಇದಾಗಿದ್ದು ಅವೈಜ್ಞಾನಿಕತೆ ಹಾಗೂ ಗುಣಮಟ್ಟ ಇಲ್ಲದಿರುವುದು ಈಗ ಸಾಬೀತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.


ಚುನಾವಣಾ ಪ್ರಚಾರದ ಉದ್ದೇಶದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ  ಆತುರವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಉದ್ಘಾಟನೆ ಮಾಡಿದ್ದಾರೆ ಎಂದು ಸಿಐಟಿಯು ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ತಿಳಿಸಿದ್ದಾರೆ. ಸರ್ವಿಸ್‌ ರಸ್ತೆಯನ್ನು ಪೂರ್ಣಗೊಳಿಸಿಲ್ಲ, ಹೈವೇ ರಸ್ತೆಯೂ ಕೂಡ ಗುಣಮಟ್ಟದಿಂದ ಕೂಡಿಲ್ಲ ಇದಕ್ಕೆ ಹೆಚ್ಚಿನ ಪಾಲು ಟೋಲ್‌ ಕಟ್ಟಿಸಿಕೊಳ್ಳುತ್ತಿರುವುದು ಶುಲ್ಕ ವಸೂಲಿಗಾಗಿ ಹಗಲು ದರೋಡೆಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಎಕ್ಸ್‌ಪ್ರೆಸ್‌ ಹೈವೆ ಗಳನ್ನು ಮಾಡುವುದು ಸಾಮಾನ್ಯ ಜನರಿಗೆವಿರುದ್ದವಾಗಿದೆ ಆದರೆ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಅಭಿವೃದ್ಧಿಯ ವೇಗವನ್ನು ಹೆಚ್ಚು ಮಾಡುತ್ತಾ ಅನುಕೂಲವನ್ನು ಮಾಡಿಕೊಟ್ಟಿದೆ. ಬಹುಮುಖ್ಯವಾಗಿ ಇಲ್ಲಿ ಗುಣಾತ್ಮಕ ರಸ್ತೆಗಳ ದುರಸ್ಥಿಯಾಗಬೇಕಾಗಿದೆ. ಇದು ಲೂಟಿಯ ರಾಜಕಾರಣವಾಗಿದೆ. ಹೈವೇ ಹೆಸರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹಾಗೂ ಸಂಸದೆ ಸುಮಲತಾ ಲೂಟಿಗೆ ಇಳಿದಿರುವುದು ಬಿಜೆಪಿ ಸರ್ಕಾರ ಲೂಟಿಯ ಸರ್ಕಾರ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 




ಉಡುತಡಿಯ ವಚನಕಾರ್ತಿ ಅಕ್ಕಮಹಾದೇವಿ ಪುತ್ಥಳಿ :
ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಯ ಪುತ್ಥಳಿಯನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಉದ್ಘಾಟಿಸಿದರು. ಆದರೆ ಸ್ಥಳೀಯರು  ಹೇಳುವ ಪ್ರಕಾರ ಸುಮಾರು ಒಂದುವರೆ ವರ್ಷ ಆಗುವಷ್ಟು ಕಾಮಗಾರಿ ಇಲ್ಲಿ ಬಾಕಿ ಉಳಿದಿದೆ. ಉದ್ಯಾನವನವು ಕೂಡ ಸಿದ್ಧವಾಗಿಲ್ಲ ಎನ್ನುತ್ತಾರೆ. ಕೇಂದ್ರದಿಂದ ಬಿಜೆಪಿ ನಾಯಕರುಗಳು  ಉದ್ಘಾಟನೆಗೆ ಆಗಮಿಸುತ್ತಿದ್ದು ಉದ್ಘಾಟನೆಗೊಲಿಸಿದ ಬಹಳಷ್ಟು ಕಟ್ಟಡಗಳು ಅರೆಬರೆ ಮುಗಿದಿವೆ. ಒಂದೂ ಪೂರ್ಣವಾಗಿಲ್ಲ. ಚುನಾವಣೆ ಘೋಷಣೆಗೂ ಮುನ್ನಾ ಫಲಕದಲ್ಲಿ ಹೆಸರು ಬರಬೇಕೆಂದು ಬೆಜೆಪಿಗರು ಈ ರೀತಿ ಮಾಡುತ್ತಿರುವುದು  ಹಾಸ್ಯಾಸ್ಪದವಾಗಿದೆ.


ಶಿವಮೊಗ್ಗದಲ್ಲಿ ಒಂದು ವಿಮಾನವು ಕೂಡ ಹಾರಾಟ ಮಾಡದ ನಿಲ್ದಾಣ : ಬಿಜೆಪಿ ಸರ್ಕಾರದ್ದೆಲ್ಲಾ ಅಪೂರ್ಣ ಕಾಮಗಾರಿಗಳೇ. ಫೆಬ್ರವರಿ 27ರಂದು ಬಿಎಸ್ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ಮಾಡಿ ಇನ್ನು ಒಂದು ವಿಮಾನವು ಕೂಡ ಹಾರಾಟ ಮಾಡಿಲ್ಲವೆನ್ನುತ್ತಾರೆ ಸ್ಥಳೀಯರು.ಉದ್ಘಾಟನೆ ಆದ ನಂತರ ಕಮಿಷನ್ ಕೈ ಸೇರಿದ ಮೇಲೆ ಆ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವಿಮಾನ ನಿಲ್ದಾಣದ ಬಗ್ಗೆ ಕಾಳಜಿಯೇ ಇಲ್ಲವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯರು ಅಧಿಕಾರಕ್ಕೆ ಬಂದಾಗಿನಿಂದ ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ ಈ ಕಾರಣಕ್ಕಾಗಿಯೇ ಅವರೀಗ ತರಾತುರಿಯಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳನ್ನು ಉದ್ಘಾಟಿಸುತ್ತಾ ಬರುತ್ತಿದ್ದಾರೆ. ಬಿಜೆಪಿಯವರ ಸದ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಅಭಿವೃದ್ಧಿಗಾಗಿ ಮತ ನೀಡಿ ಎನ್ನುವ ಬದಲಾಗಿ ಮೋದಿಯವರ ಮುಖ ನೋಡಿ ಮತ ನೀಡಿ ಎನ್ನುವಂತಾಗಿದೆ. ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಎಂದು ಅಕ್ಷರ ದಾಸೋಹ ನೌಕರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹನುಮವ್ವ ಆರೋಪಿಸಿದ್ದಾರೆ.

 

ಒಟ್ಟಾರೆಯಾಗಿ ನೋಡುವುದಾದರೆ ಬಿಜೆಪಿ ನಾಯಕರು ಸೋಲಿನ ಭೀತಿಯಲ್ಲಿ ತರತುರಿಯಲ್ಲಿ ಈ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ . ಇದೇ ರೀತಿ ಶಿಕಾರಿಪುರ ಪಟ್ಟಣದ ಕೆಎಚ್ ಬಿ ಕಾಲೋನಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಕೂಡ ಶೀಘ್ರದಲ್ಲೇ ಇರಲಿದ್ದು ಈ  ಕಟ್ಟಡ ಇನ್ನೂ ಶೇಕಡ 40ರಷ್ಟು ಬಾಕಿ ಉಳಿದುಕೊಂಡಿದೆ. ಆದರೆ ಕೇವಲ ಬಣ್ಣ ಬಳಿದು ಸಿಂಗಾರ ಮಾಡಿ ಆಸ್ಪತ್ರೆ ಉದ್ಘಾಟನೆಗೆ ಸಜ್ಜುಗೊಳಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ‌ ಎನ್ನುತ್ತಾರೆ ಅಲ್ಲಿಯ ಜನರು.

Donate Janashakthi Media

Leave a Reply

Your email address will not be published. Required fields are marked *