ಸರಕಾರೀ ಪಿಂಚಣಿದಾರರಲ್ಲಿ ತಾರತಮ್ಯಕ್ಕೆ ಅನುವು ಮಾಡಿ ಕೊಡುವ ಮಸೂದೆಗೆ ಅಂಗೀಕಾರ

ಮೋದಿ ಸರಕಾರದ ಮತ್ತೊಂದು ವಂಚಕ ನಡೆ: ಸಿಐಟಿಯು ಖಂಡನೆ

ನವದೆಹಲಿ: ವೇತನ ಆಯೋಗದ ಶಿಫಾರಸುಗಳಿಗೆ ಸಂಬಂಧಪಟ್ಟಂತೆ ನಿವೃತ್ತಿದಾರರಲ್ಲಿ ತಾರತಮ್ಯ ಮಾಡಲು ಸರಕಾರಕ್ಕೆ ಅನುವು ಮಾಡಿಕೊಡುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಪ್ರಾರಂಭದಿಂದಲೂ ಅನುಸರಿಸಿಕೊಂಡು ಬಂದಿರುವ ದೀರ್ಘಕಾಲೀನ ಆಚರಣೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಸರ್ಕಾರಿ ಸೇವೆಗಳ ನಿವೃತ್ತಿದಾರರನ್ನು ವಂಚಿಸುವ ಸರ್ಕಾರದ ಹತಾಶ ಮತ್ತು ಲಂಗುಲಗಾಮಿಲ್ಲದ ಕ್ರಮವಾಗಿದೆ ಎಂದು ಸಿಐಟಿಯು ಖಂಡಿಸಿದೆ. ಪಿಂಚಣಿ

2025 ರ ಮಾರ್ಚ್ 25 ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ 2025 ರ ಭಾಗವಾಗಿ ಅಂಗೀಕರಿಸಲಾದ “ಭಾರತದ ಕ್ರೋಢೀಕೃತ ನಿಧಿಯಿಂದ ಪೆನ್ಶನ್ ಬಾಧ್ಯತೆಗಳ ಮೇಲಿನ ವೆಚ್ಚಕ್ಕಾಗಿ ಸಿಸಿಎಸ್ (ಪೆನ್ಶನ್) ನಿಯಮಗಳು ಮತ್ತು ತತ್ವಗಳ ದೃಢೀಕರಣ” ಕುರಿತಾದ ವಿಧೇಯಕ ನವ ಉದಾರವಾದಿ ಶಕ್ತಿಗಳು ಹೇರುವ  ತಥಾಕಥಿತ “ಮಿತವ್ಯಯ ಕ್ರಮ”ಗಳ ಭಾಗವಾಗಿರುವ ಸರ್ಕಾರದ ವಂಚಕ, ತಾರತಮ್ಯದ ಮತ್ತು ಅನ್ಯಾಯದ ಕಸರತ್ತು ಎಂದು ಸಿಐಟಿಯು ವರ್ಣಿಸಿದೆ. ಪಿಂಚಣಿ

ನಿವೃತ್ತಿ ದಿನಾಂಕದ ಆಧಾರದ ಮೇಲೆ ವೇತನ ಆಯೋಗಗಳ ಶಿಫಾರಸುಗಳ ಅನ್ವಯಕ್ಕೆ ಸಂಬಂಧಿಸಿದಂತೆ ನಿವೃತ್ತಿದಾರರಲ್ಲಿ ಭಿನ್ನತೆಯ ನೆಪದಲ್ಲಿ ತಾರತಮ್ಯ ಮಾಡಲು ಈ ಶಾಸನವು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಇದನ್ನೂ ಓದಿ: ಕೋಲಾರ| 10 ಸಾವಿರ ಎಕರೆ ಅರಣ್ಯ ಪ್ರದೇಶ ಒತ್ತುವರಿ

ಅಲ್ಲದೆ ಈ ಶಾಸನವು ಜೂನ್ 1, 1972 ರಿಂದಲೇ ಪೂರ್ವಾನ್ವಯವಾಗುತ್ತದೆ. ಆದ್ದರಿಂದ ಶಾಸನವು ಖಾತರಿಪಡಿಸಿದ ಹಳೆಯ ನಿವೃತ್ತಿ ಯೋಜನೆ(ಒಪಿಎಸ್) , ಹೊಸ ನಿವೃತ್ತಿ ಯೋಜನೆ(ಎನ್‍ಪಿಎಸ್‍) ಮತ್ತು ಸರ್ಕಾರವು ಮಾಧ್ಯಮಗಳಲ್ಲಿ ಬಹಳಷ್ಟು ಪ್ರಚಾರ ಮಾಡಿದ ಇತ್ತೀಚಿನ ಏಕೀಕೃತ ನಿವೃತ್ತಿ ಯೋಜನೆ(ಯುಪಿಎಸ್‍)ಯ ಅಡಿಯಲ್ಲಿ ಎಲ್ಲ ನಿವೃತ್ತಿದಾರರನ್ನೂ ಮೋಸದಿಂದ ಸುಲಿಗೆ ಮಾಡಿದೆ ಎಂದಿರುವ ಸಿಐಟಿಯು ಈ ಶಾಸನ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರು ಮತ್ತು ನೌಕರರ ವಿರುದ್ಧ ಎಸಗಿರುವ ಅನ್ಯಾಯಗಳಿಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಹೇಳಿದೆ.

ನೌಕರರು ಮತ್ತು ನಿವೃತ್ತಿದಾದಾರರು ಪೆನ್ಶನ್‍ಗಳನ್ನು ಮೊಟಕುಗೊಳಿಸುವ ಎಲ್ಲ ನೀತಿಗಳನ್ನು ಸಂಪೂರ್ಣವಾಗಿ ವಿರೋಧಿಸಿಕೊಂಡು ಬಂದಿದ್ದಾರೆ ಮತ್ತು ದೇಣಿಗೆ-ರಹಿತ ಮತ್ತು ಖಾತರಿಪಡಿಸಿದ ನಿವೃತ್ತಿ ವೇತನ ಯೋಜನೆ, ಅಂದರೆ  ಒಪಿಎಸ್‍ ಬಿಟ್ಟು ಬೇರೇನನ್ನೂ ಒಪ್ಪಲು ಸಾಧ್ಯವೇ ಇಲ್ಲ ದು ಆಗ್ರಹ ಪಡಿಸುತ್ತ ಬಂದಿದ್ದಾರೆ.

ಇದಕ್ಕಾಗಿ ನಿರಂತರ ಚಳುವಳಿಯನ್ನು ನಡೆಸಿದ್ದಾರೆ ಮತ್ತು ಇನ್ನೂ ಈ ಗಲೂ ನಡೆಸುತ್ತಿದ್ದಾರೆ. ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಲಾದ  ಕುರಿತ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಸಿಐಟಿಯು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಈ ವಿಧೇಯಕವನ್ನು  ವಿರೋಧಿಸುವಲ್ಲಿ ಮತ್ತು ಧಿಕ್ಕರಿಸುವಲ್ಲಿ ಮತ್ತು ಶಾಸನಬದ್ಧ ಖಾತರಿ – ದೇಣಿಗೆ ರಹಿತ ಪೆನ್ಶನ್ ಯೋಜನೆಯಾದ ಹಳೆಯ ಪೆನ್ಶನ್ ಯೋಜನೆ(ಒಪಿಎಸ್‍) ಬೇಕೆಂದು  ಆಗ್ರಹಿಸುವಲ್ಲಿ  ನೌಕರರು ಮತ್ತು ಪಿಂಚಣಿದಾರರ ಅವರ ಜೊತೆ ನಿಲ್ಲುವುದಾಗಿಯೂ  ಘೋಷಿಸಿರುವ  ಸಿಐಟಿಯು,ವೇತನ ಆಯೋಗಗಳ ಶಿಫಾರಸುಗಳ ಅನ್ವಯದಲ್ಲಿ ಯಾವುದೇ ತಾರತಮ್ಯದ ನಡೆ ಅಥವ ಕಸರತ್ತನ್ನು  ವಿರೋಧಿಸುವುದಾಗಿ ಹೇಳಿದೆ.

 ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *