ಹಾಸನ: ರಾಷ್ಟಿಯ ಹೆನ್ಣುಮಗುವಿನ ದಿನದಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಎರಡೂ ಮಹಾಪರಾಧಾ ಮಾತ್ರವಲ್ಲ ಸಂವಿಧಾನ ವಿರೋಧಿ. ಹಾಗೂ ದೇಶದ್ರೋಹ ಎಂದು ಬಿಜಿವಿಎಸ್ ಹಾಸನ ಜಿಲ್ಲಾಧ್ಯಕ್ಷೆ ರಾಧಾ ಹೇಳಿದರು.
ಅವರು ಇತ್ತೀಚೆಗೆ ನಗರದ ಬಿಜಿಎಸ್ ಶಾಲೆಯಲ್ಲಿ “ಸಂವಿಧಾನ ತಿಳಿಯೋಣ-ಜನತಂತ್ರ ಬಲಪಡಿಸೋಣ” ಆಂದೋಲನಕ್ಕೆ ಸಂವಿಧಾನ ಪ್ರಸ್ತಾವನೆಯ ಪ್ರತಿಯನ್ನು ಮುಖ್ಯೋಪಾಧ್ಯಾಯರಿಗೆ ನೀಡಿ, ಪ್ರಸ್ತಾವನೆಯ ವಿಧಿಯನ್ನು ಪ್ರತಿಯೊಬ್ಬರೂ ಸ್ವೀಕರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಮಹಿಳಾ ಸಮಾನತೆ, ಮಹಿಳಾ ಗೌರವಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬೇಕು ಎಂದಿದೆ ಆದರೂ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಬಗೆಬಗೆಯ ಅತ್ಯಾಚಾರ ಎಸೆಗಲಾಗುತ್ತಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿದೆಸೆಯಲ್ಲೇ ಮಹಿಳಾ ಸಮಾನತೆ ಏಕೆ ಎಂದು ಸಂವಿಧಾನ ಹೇಳಿದೆ ಎನ್ನುವುದನ್ನು ಮನನ ಮಾಡಿಸುವ ದೃಷ್ಠಿಯಿಂದ ಬಿಜಿವಿಎಸ್ ಹಾಸನ ಜಿಲ್ಲೆಯಾದ್ಯಂತ ಸಂವಿಧಾನ ತಿಳಿಯೋಣ-ಜನತಂತ್ರ ಬಲಪಡಿಸೋಣ ಆಂದೋಲನ ಹಮ್ಮಿಕೊಂಡಿದೆ ಎಂದರು.
ಎಂ.ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ||ಶ್ರೀನಿವಾಸ್ ಮಾತನಾಡಿ, ಸಂವಿಧಾನ ಎಂದರೆ ನಾವು ಈ ದೇಶದಲ್ಲಿ ಹೇಗೆ ಬದುಕಬೇಕು, ಹೇಗೆ ದೇಶವನ್ನು ಕಟ್ಟಬೇಕು ಎನ್ನುದನ್ನು ಮಾರ್ಗದರ್ಶನ ಮಾಡುವ ಮಾರ್ಗದರ್ಶಕ ಅದು ಮಾತನಾಡುವ, ಗೌರವಯುತವಾಗಿ ಬದುಕುವ, ತಮಗಿಷ್ಟ ಬಂದಂತಹ ಧರ್ಮವನ್ನು ಪಾಲಿಸುವ, ಆರೋಗ್ಯ ಹಾಗೂ ಶಿಕ್ಷಣ ಪಡೆಯುವ, ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ಹಕ್ಕುಗಳನ್ನು ನೀಡಿದೆ ಹಾಗಾಗಿ ತಾವು ತಮ್ಮ ಹಕ್ಕುಗಳನ್ನು ತಿಳಿಸದುಕೊಳ್ಳಬೇಕು ಎಂದು ಹೇಳಿ ಅದೇ ಸಂಸದರ್ಬದಲ್ಲಿ ಈ ನೆಲದ ಪ್ರಜೆಯಾದ ನಾವು ಭಾರತವನ್ನು ಬಲಪಡಿಸಲು ಕೆಲವು ಕರ್ತವ್ಯಗಳನ್ನೂ ಕೂಡ ನಿರ್ವಹಿಸಬೇಕು ಅವುಗಳೆಂದರೆ ಭಾರತ ಸ್ವಾತಂತ್ರದ ಪರಂಪರೆ ಗೌರವಿಸುವ,ತಿಳಿದುಕೊಳ್ಳುವ, ಸ್ವಾತಂತ್ರ ಹೋರಾಟಗಾರರನ್ನು ಗೌರವಿಸುವ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ, ಮಹಿಳೆಯರಿಗೆ ಅವಕಾಶ ಹಾಗೂ ಗೌರವ ನೀಡುವ, ಧರ್ಮಸಾಮರಸ್ಯ ಕಾಪಾಡುವ, ನೆಲ-ಜಲ ಪರಿಸರ ಸಂರಕ್ಷಣೆ ಮಾಡುವ, ಜಾತಿಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದರು.
ಭಾರತ ಪ್ರಸ್ತಾವನೆ ಅರ್ಥ-ಅರಿವು ಸಂಪನ್ಮೂಲ ವ್ಯಕ್ತಿಯಾಗಿ ಪಿ.ಪಿ.ಟಿ. ಪ್ರದರ್ಶನದ ಮೂಲಕ ಸಂವಿಧಾನದ ರಚನೆ ಹೇಗಾಯಿತು, ನಮಗೆ ನೀಡಿರುವಂತಹ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಹಾಗೂ ಸಂವಿಧಾನ ಪ್ರಸ್ತಾವನೆಯ ಮಕ್ಕಳೊಂದಿಗೆ ಸಂವಾದವನ್ನು ಡಾ. ಶ್ರೀನಿವಾಸ್ ನಡೆಸಿದರು.
ಬಿಜಿವಿಎಸ್ ಜಿಲ್ಲಾ ಸಮಿತಿ ಸದಸ್ಯೆ ಜಾನಕಿ ಮಾತನಡಿ, ಬಿ.ಜಿ.ವಿ.ಎಸ್ ನ ಧ್ಯೇಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿ, ವಿಜ್ಞಾನ ನನ್ನು ಹೇಗೆ ಬಳಸಬೇಕು ಎಂಬುದನ್ನು ಧ್ಯೇಯವಾಕ್ಯವನ್ನು ಉದಾಹರಣೆಯಾಗಿ ತೆಗೆದುಕೊಂಡು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿ ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನದ ವ್ಯತ್ಯಾಸವನ್ನು ತಿಳಿಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯ ದರ್ಶನ್ ಕಾರ್ಯಕ್ರಮದ ವಿಶೇಷತೆಯನ್ನು ತಿಳಿಸಿ ಸಂವಿಧಾನ ಬದ್ಧ ಬದುಕೇ ಎಲ್ಲರ ಬಾಳಲ್ಲಿ ಶಾಂತಿ ನೆಮ್ಮದಿ ತರಲು ಸಾಧ್ಯ ಎಂದರು. ಬಿಜಿವಿಎಸ್ ಜಯನಗರ ಘಟಕ ಉಪಾದ್ಯಕ್ಷೆ ಭಾನುಮತಿ ಕಾರ್ಯಕ್ರಮ ನಿರೂಪಿಸಿ ಶಾಲೆ ಹಾಗೂ ಪ್ರತಿ ಮನೆಗಳಲ್ಲೂ ಸಂವಿಧಾನ ಪ್ರತಿಯನ್ನು ಫ್ರೇಮ್ ಹಾಕಿ ನೇತುಹಾಕಲು ಮನವಿ ಮಾಡಿದರು, ಮೊದಲಿಗೆ ಶಾಲೆಯ ಶಿಕ್ಷಕ ಯತೀಶ್ ಸ್ವಾಗತಿಸಿ ಕಡೆಯಲ್ಲಿ ಶಿಕ್ಷಕ ಗಣೇಶ್ ರವರು ವಂದನಾರ್ಪಣೆ ಮಾಡಿದರು.