ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ : ನಾಳೆಯಿಂದ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಳ

ಬೆಂಗಳೂರು: ಟೋಲ್‌ ಸಂಗ್ರಹ ಆರಂಭವಾದ 17 ದಿನಗಳಲ್ಲೇ ಮತ್ತೆ ಟೋಲ್ ದರ ಹೆಚ್ಚಳವಾಗುವ ಮೂಲಕ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವಾಹನ ಸವಾರರಿಗೆ ಮತ್ತೆ ಬರೆ ಬಿದ್ದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ  ಸಂಚಾರ ಇದೀಗ ಮತ್ತಷ್ಟು ದುಬಾರಿಯಾಗಿದೆ.

ನಾಳೆಯಿಂದ(ಏ.01) ಶೇಕಡಾ 22ರಷ್ಟು ಟೋಲ್ ದರ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಲಾಗಿದೆ. ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿ ಪ್ರಾಧಿಕಾರ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

 ಪರಿಷ್ಕೃತ ದರ ಇಂತಿದೆ. 

ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂ(30ರೂ ಹೆಚ್ಚಳ). ದ್ವಿಮುಖ ಸಂಚಾರ – 250 ರೂ(45ರೂ ಹೆಚ್ಚಳ).

ಲಘು ವಾಹನಗಳು/ಮಿನಿ ಬಸ್: ಏಕಮುಖ ಸಂಚಾರ 270 ರೂ.(50ರೂ ಹೆಚ್ಚಳ) ದ್ವಿಮುಖ ಸಂಚಾರ -405 ರೂ.(75 ರೂ. ಹೆಚ್ಚಳ)

ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ: ಏಕಮುಖ ಸಂಚಾರ 565 ರೂ(165 ರೂ ಹೆಚ್ಚಳ), ದ್ವಿಮುಖ ಸಂಚಾರ – 850 ರೂ(160 ರೂ.ಹೆಚ್ಚಳ)

ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ 615 ರೂ.(115ರೂ ಹೆಚ್ಚಳ), ದ್ವಿ ಮುಖಸಂಚಾರ – 925 ರೂ.( 225 ರೂ.ಹೆಚ್ಚಳ)

ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು: ಏಕಮುಖ ಸಂಚಾರ 885 ರೂ.(165ರೂ ಹೆಚ್ಚಳ) ದ್ವಿಮುಖ ಸಂಚಾರ – 1,330 ರೂ. ಹೆಚ್ಚಳ(250ರೂ ಹೆಚ್ಚಳ)

7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: ಏಕಮುಖ ಸಂಚಾರ 1,080 ರೂ.(200ರೂ ಹೆಚ್ಚಳ) ದ್ವಿಮುಖ ಸಂಚಾರ – 1,620 ರೂ.( 305 ರೂ.ಹೆಚ್ಚಳ)

ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು

ಟೋಲ್ ದರ ಹೆಚ್ಚಿಸೋದು ಸಾಮಾನ್ಯ:
ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿಂತೆ ಮೈಸೂರು-ಕೊಡಗು ಬಿಜೆಪಿ ಸಂಸದ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷ ಟೋಲ್ ದರ ಹೆಚ್ಚಿಸುವುದು ಸಾಮಾನ್ಯ. ದೇಶದ ಎಲ್ಲ ಟೋಲ್ ದರಗಳಲ್ಲೂ ಹೆಚ್ಚಳ ಆಗಿದೆ. ಆದರೆ ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಚ್ 14 ರಂದು ಪ್ರಾರಂಭ ಆಗಿದೆ. ನಾನು ಈಗಾಗಲೇ ಹೈವೇ ಅಥಾರಿಟಿಯ ಹಿರಿಯ ಅಧಿಕಾರಿಗಳ ಜತೆ ಮಾತಾಡಿದ್ದೇನೆ. ಹೀಗಾಗಿ ಈ ಹೆದ್ದಾರಿಗೆ ಟೋಲ್ ದರ ಹೆಚ್ಚಳ ನಿರ್ಧಾರ ಪರಾಮರ್ಶೆ ಮಾಡಬೇಕೆಂದು ವಿನಂತಿಸಿಕೊಂಡಿದ್ದೇನೆ. ಟೋಲ್ ದರ ಯಥಾಸ್ಥಿತಿ ಮುಂದುವರೆಸುವಂತೆ ಮನವಿ ಮಾಡಿದ್ದೇನೆ. ಇವತ್ತು ಸಂಜೆಯೊಳಗೆ ಹೈವೇ ಅಥಾರಿಟಿಯವರು ತಮ್ಮ ನಿರ್ಣಯವನ್ನ ತಿಳಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *