ಬೆಂಗಳೂರು: ಬಿಬಿಎಂಪಿಯ ವಾರ್ಡ್ ವಿಂಗಡಣೆ ಅಂತಿಮ ಪಟ್ಟಿಯನ್ನ ರಾಜ್ಯ ಸರ್ಕಾರ ಅಧಿಕೃತಗೊಳಿಸಿ ಸರ್ಕಾರ ಪ್ರಕಟಗೊಳಿಸಿದ್ದು, ಸಾರ್ವಜನಿಕ ಅಕ್ಷೇಪಣ ಬಳಿಕ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿ ಮಾಡಿ ರಾಜ್ಯ ಸರ್ಕಾರ ಸೆ-25 ರಂದು ಆದೇಶ ಹೊರಡಿಸಿದೆ.ಪ್ರಕಟ
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 243 ವಾರ್ಡ್‌ಗಳನ್ನಾಗಿ ವಿಂಗಡನೆ ಮಾಡಿತ್ತು.ಇದೀಗ ಬಿಬಿಎಂಪಿಯ 225 ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸರ್ಕಾರ ಇದೀಗ ಅಂತಿಮ ವಾರ್ಡ್ ಗಳ ಪಟ್ಟಿಯನ್ನ ಅಂತಿಮಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಡಿಸೆಂಬರ್ 31ರೊಳಗೆ ಬಿಬಿಎಂಪಿ ಚುನಾವಣೆ ನಡೆಸಿ : ಹೈಕೋರ್ಟ್
ಈಗಾಗಲೇ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯ ಮುನ್ನವೇ ಬಿಬಿಎಂಪಿ ಚುನಾವಣೆಯನ್ನ ನಡೆಸಲು ಸರ್ಕಾರ ತಯಾರಿ ನಡೆಸಿದ್ದು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸರ್ಕಾರ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 17 ಬಿಬಿಎಲ್ 2020(ಇ) ದಿನಾಂಕ: 01-09-2003ರಲ್ಲಿ ಸರ್ಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆ / ಸಲಹಗಳನ್ನು ಪರಿಶೀಲಿಸಿ, ಸೂಕ್ತ ಶಿಫಾರಸ್ಸು ಮಾಡುವ ಸಲುವಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿರುತ್ತದೆ. ಅದರಂತೆ, ಸದರಿ ಪರಿಶೀಲನಾ ಸಮಿತಿಯು ಸರ್ಕಾರದಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ದಿನಾಂಕ 14-09- 2023ರಂದು ನಡೆದ ಪರಿಶೀಲನಾ ಸಮಿತಿಯ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ವಾರ್ಡುಗಳ ಪುನರ್ ವಿಂಗಡಣಾ ಕರಡು ಅಧಿಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸ್ಸುಗಳನ್ನು ಮಾಡಿರುತ್ತದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ, ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿರುತ್ತದೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದಶ್ರವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಈ ಕೆಳಕಂಡಂತೆ ಅಂತಿಮಗೊಳಿಸಿ ಅಧಿಸೂಚಿಸಲಾಗಿದೆ.ಪ್ರಕಟ
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ 225 (ಎರಡು ನೂರ ಇಪ್ಪತ್ತೈದು).
- ಪ್ರತಿ ವಾರ್ಡಿನ ಸಂಖ್ಯೆ ಮತ್ತು ವಾರ್ಡುಗಳ ಹೆಸರುಗಳನ್ನು ಅನುಬಂಧ-1 (ಕನ್ನಡ ಭಾಷೆಯಲ್ಲಿ) ಕಾಲಂ-2ರಲ್ಲಿ ಹಾಗೂ ಅನುಬಂಧ-2 (ಆಂಗ್ಲ ಭಾಷೆಯಲ್ಲಿ) ಕಾಲಂ-2 ರಲ್ಲಿ ಒದಗಿಸಲಾಗಿದೆ.
- ಪ್ರತಿ ವಾರ್ಡುಗಳ ವ್ಯಾಪ್ತಿಯ ಗಡಿಗಳ ಚೆಕ್ಕುಬಂದಿಯ ವಿವರಗಳನ್ನು ಅನುಬಂಧ-1 ಮತ್ತು ಅನುಬಂಧ-2 ರ ಕಾಲಂ-4ರಲ್ಲಿ ನಿಗಧಿಪಡಿಸಲಾಗಿದೆ.
ವಿಡಿಯೋ ನೋಡಿ:ಬಸ್ ನಿಲ್ದಾಣದ ಮುಂದೆ ಟೆಂಪೋ ನಿಲ್ಲಿಸಲು ಅವಕಾಶ ಕೋರಿ ಮನವಿ