ಬಾಬ್ರಿ ಮಸೀದಿ ಧ್ವಂಸ ತೀರ್ಪು -ನ್ಯಾಯದ ಅಪಹಾಸ್ಯ: ಸಿಪಿಐ(ಎಂ)

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಐಗೆ ಸಿಪಿಎಂ ಆಗ್ರಹ

ದೆಹಲಿ: ಬಾಬ್ರ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆಪಾದಿತರ ಖುಲಾಸೆ ಮಾಡಿರುವ ಲಕ್ನೌನ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯ  ಎಂದು ಸಿಪಿಎಂ ಪ್ರತಿಕ್ರಿಯಿಸಿದೆ.

ಘಟನೆ ನಡೆದ ನಂತರ ತೀರ್ಪು ನೀಡಲು ಸುದೀರ್ಘ  28 ವರ್ಷಗಳೇ ಹಿಡಿದವು, ಆದರೆ ನ್ಯಾಯ ನೀಡಿಲ್ಲ. ಈ ಕ್ರಿಮಿನಲ್‍ ಕೃತ್ಯದ ಜಾಗದಲ್ಲಿ ಅದಕ್ಕೆ ಮಾರ್ಗದರ್ಶನ ನೀಡಲು ಹಾಜರಿದ್ದ ಎಲ್ಲ ಉನ್ನತ ಆರೆಸ್ಸೆಸ್‍-ಬಿಜೆಪಿ-ವಿಹೆಚ್‍ಪಿ ಮುಖಂಡರು ಮಸೀದಿ ಧ್ವಂಸದ ಪಿತೂರಿಯ ಆಪಾದನೆಯಲ್ಲಿ ಅಮಾಯಕರು ಎಂದು ಕಂಡು ಬಂದಿದೆಯಂತೆ.

ಇದನ್ನು ಓದಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ಕೋರ್ಟ್ ತೀರ್ಪು ಅಚ್ಚರಿ ಎಂದ ಮಾಜಿ ಗೃಹ ಕಾರ್ಯದರ್ಶಿ

ಕಳೆದ ವರ್ಷ ನವಂಬರ್‍ 8ರಂದು ಅಯೋಧ್ಯಾ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್‍ ಈ ಧ್ವಂಸಕಾರ್ಯ ಕಾನೂನಿನ ಘೋರ ಉಲ್ಲಂಘನೆ ಎಂದಿತ್ತು. ಈಗ ಲಕ್ನೌ ಸಿಬಿಐ ವಿಶೇಷ ನ್ಯಾಯಾಲಯ ಈ ಅಪರಾಧವನ್ನು ಎಸಗಿದ ಪ್ರಮುಖರು ನಿರಪರಾಧಿಗಳು ಎಂದಿದೆ.

ಈ ತೀರ್ಪು ಸಂವಿಧಾನದ ಆಳ್ವಿಕೆಗೆ ಒಳಗಾಗಿರುವ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ದೇಶ ಎಂಬ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಿಬಿಐ ಕೂಡಲೇ ಈ ತೀರ್ಪಿನ ವಿರುದ್ಧ ಅಪೀಲು ಹೋಗಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *