ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು

ಬೆಂಗಳೂರು: ಬಾಂಗ್ಲಾದೇಶದ 23 ವರ್ಷದ ಯುವತಿ ಮೇಲೆ ರಾಮಮೂರ್ತಿನಗರದಲ್ಲಿ ಮನೆಯೊಂದರಲ್ಲಿ ಕೆಲ‌ದಿನಗಳ ಹಿಂದೆ ಆರೋಪಿಗಳು ಅತ್ಯಾಚಾರ ಎಸಗಿದ್ದರು. ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳನ್ನು ನೆನ್ನೆ ಸಂಜೆ ಬಂಧಿಸಲಾಗಿತ್ತು.

ಯುವತಿ‌ ಜೊತೆ ಅತ್ಯಂತ ಕೆಟ್ಟರೀತಿಯಲ್ಲಿ ನಡೆದುಕೊಂಡಿದ್ದರು. ಬೆಂಗಳೂರಿನ ಮಹಿಳೆಯೊಬ್ಬಳ ಸಹಾಯದಿಂದ ಆರು ಮಂದಿ ಆರೋಪಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ವಿಡಿಯೊವನ್ನು ಆರೋಪಿಗಳೇ ಚಿತ್ರೀಕರಿಸಿ ಸಾಮಾಜಿಕ‌ ಜಾಲತಾಣಗಳಲ್ಲಿ‌ ಹರಿಬಿಟ್ಟಿದ್ದರು.

ಇದನ್ನು ಓದಿ: ಯಸ್ ಚಂಡಮಾರುತ: ಬಂಗಾಳದಲ್ಲಿ ಅತೀ ಹೆಚ್ಚಿನ ಹಾನಿ ಸಂಭವಿಸಿದೆ

ಸ್ಥಳ ಮಹಜರು‌ ಮಾಡಲು ಆರೋಪಿಗಳನ್ನು ಅವರ ಮನೆಗೆ ಇಂದು ಬೆಳಿಗ್ಗೆ  ಕೆ. ಚನ್ನಸಂದ್ರದ ಕನಕ‌ ನಗರಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು.‌ ಆಗ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು, ಪೊಲೀಸರ ಮೇಲೆ‌ ಹಲ್ಲೆ‌ ಮಾಡಲು‌ ಮುಂದಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೋಲೀಸರು ಗುಂಡು ಹಾಸಿದ್ದಾರೆ. ಆರೋಪಿಗಳಾದ ರಿದಾಯ್ ಹಾಗೂ‌‌ ಸಾಗರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಡಿಯೊ ಆಧರಿಸಿ‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ನಗರದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಸಂಬಂಧ ಬಾಂಗ್ಲಾದೇಶದ ಸಾಗರ್, ಮೊಹಮ್ಮದ್ ಬಾಬಾ ಶೇಖ್, ರಿದಾಯ್ ಬಾಬು ಹಾಗೂ ಹೈದರಾಬಾದ್‌ನ ಹಕೀಲ್ ಬಂಧಿತ ಆರೋಪಿಗಳು.

ಅತ್ಯಾಚಾರ ಘಟನೆ ಬಳಿಕ ಯುವತಿ ತನ್ನ ಸ್ನೇಹಿತ ಲಕ್ಷ್ಮೀಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ತನಿಖಾ ಕೈಗೊಂಡ ಪೊಲೀಸರಿಗೆ ಸಂತ್ರಸ್ತೆ ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಇನ್ಸ್​​ಪೆಕ್ಟರ್, ಮಹಿಳಾ ಪಿಎಸ್ಐ ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಗಳಿಗೆ  ಕಠಿಣವಾದ ಕಾನೂನು ಕ್ರಮಸಿಎಂ

ಬಾಂಗ್ಲಾದೇಶದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯು ಅತ್ಯಂತ ಅಮಾನುಷವಾಗಿದ್ದು, ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಇದನ್ನು ಓದಿ: ಆಕ್ಸಿಜನ್ ಸೇವಾ ಕೇಂದ್ರ ಆರಂಭಿಸಿದ ಸಿಐಟಿಯು

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಇದೊಂದು ಅಮಾನುಷವಾದ ಘಟನೆ. ಯಾರು ಸಹಿಸಲು ಸಾಧ್ಯವಿಲ್ಲ. ಆರೋಪಿಗಳಿಗೆ ಸರಿಯಾದ ರೀತಿಯ ಶಿಕ್ಷೆಯಾಗಬೇಕು. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದರು.

ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ, “ಗ್ಯಾಂಗ್ ರೇಪ್ ಆಗಿರುವ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿರುವ ವ್ಯಕ್ತಿಗಳು ಯಾರು ಅಂತ ಆಗ ಸಂಶಯ ಇತ್ತು. ನಮ್ಮ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಿಣ್ ರಿಜಿಜು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು.”

ಈ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಪಡೆದು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಯುವತಿ ಸೇರಿ ಕೆಲವರು ವಿಡಿಯೋದಲ್ಲಿದ್ದಾರೆ. ಇನ್ನೂ ಕೆಲವರು ಕೇರಳದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಯುವತಿಯು ಕೇರಳದ ಕಲ್ಲಿಕೋಟೆಯಲ್ಲಿರುವ ಮಾಹಿತಿ ಇರುವ ಬಗ್ಗೆ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಂತ್ರಸ್ತೆಯನ್ನು ಕರೆತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

ಮೊದಲು ಈ ಅತ್ಯಾಚಾರ ಪ್ರಕರಣ ಎಲ್ಲಿ ನಡೆದಿದ್ದು, ಯಾವ ಜಾಗ ಅಂತ ಗೊತ್ತಿರಲಿಲ್ಲ. ನಂತರ ಪತ್ತೆ ಮಾಡಿದಾಗ ಬೆಂಗಳೂರು ಅಂತ ಗೊತ್ತಾಗಿದೆ. ಬಳಿಕ ರಾಮಮೂರ್ತಿನಗರದಲ್ಲಿ ಎಂದು ಗೊತ್ತಾಯಿತು, ಕಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಘಟನೆ ಹಿನ್ನೆಲೆ
ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಇಷ್ಟು ದಿನ ಗುಟ್ಟಾಗಿ ವೇಶ್ಯಾವಾಟಿಕೆ ಮಾಡಿಕೊಂಡು ಹಣ ಮಾಡುತ್ತಿದ್ದ ಸ್ನೇಹಿತರು ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಯುವಕರು ಯುವತಿಯ ಕೈ, ಬಾಯಿ ಗಟ್ಟಿಯಾಗಿ ಮುಚ್ಚಿಕೊಂಡಿದ್ದರೆ, ಉಳಿದವರು ಅಟ್ಟಹಾಸ ಮೆರೆದಿದ್ದಾರೆ. ಎಲ್ಲವನ್ನೂ ಮೊಬೈಲ್​ನಲ್ಲಿ ಸೆರೆ ಹಿಡಿದು ಆ ವಿಡಿಯೋ ವೈರಲ್ ಆಗಿತ್ತು.

ಆರೋಪಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರೆಲ್ಲ ಒಂದೇ ಗುಂಪಿನವರಾಗಿದ್ದಾರೆ. ಇವರು ಮೂಲತಃ ಬಾಂಗ್ಲಾದೇಶದವರಾಗಿದ್ದು, ವೇಶ್ಯಾವಾಟಿಕೆಗಾಗಿ ಸಂತ್ರಸ್ತೆ ಯುವತಿಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *