ದೊಡ್ಡವರು ಯಾರು; ಬಂಡೆ-ಹುಲಿ ನಡುವೆ ಕಾದಾಟ: ಕೈ ನಾಯಕರ ಕಾಲೆಳೆದ ನಳೀನ್

Please follow and like us:

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಹೀನಾಯವಾಗಿದೆ. ನಾಯಕತ್ವಕ್ಕಾಗಿ ಬಂಡೆ ದೊಡ್ಡದೋ ಹುಲಿ ದೊಡ್ಡದೋ ಎಂಬ ಹೋರಾಟ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್‍ನಲ್ಲಿ ಕಾಂಗ್ರೆಸ್‍ ನಾಯಕರ ಕಾಲೆಳೆದಿದ್ದಾರೆ 

ಈ ಬಗ್ಗೆ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಹೀನಾಯವಾಗಿದೆ. ಕಾಂಗ್ರೆಸ್ನಲ್ಲಿ ನಾಯಕತ್ವದ ಹೋರಾಟ ನಡೆಯುತ್ತಿದೆ. ಬಂಡೆ ದೊಡ್ಡದೋ ಹುಲಿ ದೊಡ್ಡದೋ ಎಂಬ ಹೋರಾಟ ನಡೆಯುತ್ತಿದೆ. ಇದರ ಪರಿಣಾಮದಿಂದಾಗೆಯೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಬೆಂಕಿ ಬಿದ್ದಿತ್ತು. ಅಖಂಡ ಶ್ರೀನಿವಾಸ್ ಸಿದ್ದರಾಮಯ್ಯ ಬೆಂಬಲಿಗ, ಸಂಪತ್ ರಾಜ್ ಡಿ.ಕೆ ಶಿವಕುಮಾರ್ ಬೆಂಗಲಿಗರಾಗಿದ್ದಾರೆ. ಸಂಪತ್ ರಾಜ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಪೊಲೀಸರ ತನಿಖೆಯು ಸಹ ಸಂಪತ್ ರಾಜ್ ಆರೋಪಿ ಎಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *