ಮುಸ್ಲಿಂ ಯುವಕನನ್ನು ಕೊಲೆ ಮಾಡಿ ಪೊಲೀಸರಿಗೆ ಆವಾಜ್ ಹಾಕಿದ್ದ ಬಜರಂಗದಳದ ಸಂಜು ನಾಲ್ವಡೆ ಅರೆಸ್ಟ್!

ನರಗುಂದ : ಪೊಲೀಸ್ ಠಾಣೆ ಎದುರು ನೆರೆದಿದ್ದ ಜನರನ್ನುದ್ದೇಶಿಸಿ ಮುಸ್ಲಿಂ ಯುವಕರನ್ನು ಥಳಿಸಲು ಕರೆ ನೀಡಿದ್ದಲ್ಲದೆ, ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ಹಾಕಿ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದ ಭಜರಂಗದಳದ ಮುಖಂಡ ಸಂಜು ನಾಲ್ವಡೆ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ನರಗುಂದದ ಪೊಲೀಸರು ಇಬ್ಬರು ವ್ಯಕ್ತಿಗಳ ಮೇಲೆ ಕೊಲೆ ಆರೋಪದಲ್ಲಿ ಮತ್ತು ನಾಲ್ವರನ್ನು ಹಲ್ಲೆ ಆರೋಪದ ಮೇಲೆ ಬಂಧಿಸಿದ್ದಾರೆ. ಬಜರಂಗದಳ ಮುಖಂಡ ಹಾಗೂ ಸಿವಿಲ್ ಗುತ್ತಿಗೆದಾರ ಸಂಜು ನಾಲ್ವಡೆ, ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನು ಚಂದ್ರಶೇಖರ ಅಕ್ಕಿ, ಸಕ್ರಪ್ಪ ಹನುಮಂತಪ್ಪ ಕಾಕನೂರ ಬಂಧಿತರುಇವರೆಲ್ಲರೂ ನರಗುಂದದವರು ಎನ್ನಲಾಗಿದೆ.

ನರಗುಂದದ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಸರ್ವರ್‌ ಆಗಿದ್ದ ಸಮೀರ್‌ ಶಹಾಪುರ (19) ಹಾಗೂ ಛಾಯಾಗ್ರಾಹಕ ಶಂಶೇರ್‌ ಖಾನ್‌ ಪಠಾಣ್‌ ಅವರನ್ನು ಕೊಂದ ಆರೋಪ ಅವರ ಮೇಲಿದೆ. ಆರೋಪಿಗಳು ಜನವರಿ 16 ರಂದು ರಾತ್ರಿ ಹಲ್ಲೆ ನಡೆಸಿದ್ದರು ಎಂದು ವರದಿಯಾಗಿದೆ.

ಸಮೀರ್ ಶಹಾಪುರ ಅವರು ಜನವರಿ 17 ರಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ನಿಧನರಾಗಿದ್ದು ಬಜರಂಗದಳ ಮತ್ತು ಆರ್‌ಎಸ್‌ಎಸ್ ಸದಸ್ಯರು ಎಂದು ಹೇಳಲಾದ ಸುಮಾರು 15 ಜನರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಜನವರಿ 16 ರಂದು ರಾತ್ರಿ ನರಗುಂದದ ಅಂಗಡಿ ಬಳಿ ಸಮೀರ್ ಮತ್ತು ಆತನ ಸ್ನೇಹಿತ ಶಂಶೇರ್ ಖಾನ್ ಪಠಾಣ್ (19) ಎಂಬವರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.

ಮೋಟಾರು ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ತಡೆದ ಗುಂಪು ರಾಡ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ. ದಾಳಿಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದಾರಿಹೋಕರು ಇಬ್ಬರು ಯುವಕರನ್ನು ನರಗುಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಪೊಲೀಸರು ಅವರನ್ನು ಕಿಮ್ಸ್‌ಗೆ ಸ್ಥಳಾಂತರಿಸಿದರು. ಸಮೀರ್ ಅವರ ಎದೆಗೆ ಗಾಯಗಳಾಗಿದ್ದರೆ, ಶಂಶೇರ್ ಅವರ ಬೆನ್ನಿನ ಮೇಲೆ ಗಾಯಗಳಾಗಿವೆ.

ಇದು ಕೊಲೆ ಎಂದು ಸಮೀರ್ ಕುಟುಂಬಸ್ಥರು ನರಗುಂದ ಪೊಲೀಸರಿಗೆ ದೂರು ನೀಡಿದ್ದರು. ಕೆಲ ಸ್ಥಳೀಯ ಮುಖಂಡರು ಸಮೀರ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. “ನನ್ನ ಮಗ ನಿರಪರಾಧಿ. ಅವರು ಯಾವುದೇ ಅಪರಾಧ ಮಾಡಿಲ್ಲ. ಆತನ ಧರ್ಮದ ಕಾರಣದಿಂದ ಆತನನ್ನು ಗುರಿಯಾಗಿಸಿ ಕೊಂದಿದ್ದಾರೆ”ಎಂದು ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರಿಗೆ ಸವಾಲು ಹಾಕಿದ್ದು ಸಂಜು : ಜನವರಿ 17 ರಂದು ಸಂಜೆ, ಸಂಜು ನಲ್ವಾಡೆ ಅವರು ಪೊಲೀಸ್ ಠಾಣೆಯ ಮುಂದೆ ಜನಸಂದಣಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಮುಸ್ಲಿಂ ಯುವಕರು, ಎದುರು ಸಿಕ್ಕಿದಲ್ಲೆಲ್ಲ ಅವರನ್ನು ಥಳಿಸುವಂತೆ ಕರೆ ನೀಡಿದ್ದ

“ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೆ ತಾಕತ್ತಿದ್ದರೆ ತನ್ನನ್ನು ಬಂಧಿಸಲು ಮತ್ತು ತನ್ನ ಬೆಂಬಲಿಗರ ವಿರುದ್ಧ ಕೇಸುಗಳನ್ನು ದಾಖಲಿಸಲು ಧೈರ್ಯವಿದ್ದರೆ ನಮ್ಮೆಲ್ಲರ ವಿರುದ್ಧ ಈಗಲೇ ಕೇಸ್ ಹಾಕಬೇಕು” ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಸಂಜು ನಾಲ್ವಡೆ ಹಾಗೂ ಇತರರ ವಿರುದ್ಧ ಜನವರಿ 17ರ ರಾತ್ರಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ತಿಳಿಸಿದ್ದಾರೆ.

ಇತ್ತೀಚಿಗೆ ಬಜರಂಗದಳದ ಕಾರ್ಯಕರ್ತರು ಜನರ ಮೇಲೆ ದೌರ್ಜನ್ಯ ನಡೆಸುವುದು, ಮುಸ್ಲಿಂ ವ್ಯಕ್ತಿಗಳನ್ನು ಥಳಿಸುವುದು ಕಂಡು ಬರುತ್ತಿದೆ. ಈ ಬಗ್ಗೆ ಬಲವಾದ ಕಾನೂನು ಕ್ರಮ ಜರುಗಿದರೆ ಮಾತ್ರ ಈ ರೀತಿಯ ಅಪರಾಧಗಳನ್ನು ತಡೆಯಬಹುದಾಗಿದೆ.

 

Donate Janashakthi Media

Leave a Reply

Your email address will not be published. Required fields are marked *