ಸಾರ್ವಜನಿಕರಿಗೆ ಕ್ಷಮೆಯಾಚಿಸಲು ಪತಂಜಲಿಯ ಬಾಬಾ ರಾಮ್‌ದೇವ್‌ ಸಿದ್ಧ

ನವದೆಹಲಿ: ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆ ಜಾಹೀರಾತುಗಳನ್ನು ನೀಡಿರುವ ಆರೋಪ ಎದುರಿಸುತ್ತಿರುವ ಪತಂಜಲಿಯ ಬಾಬಾ ರಾಮ್‌ದೇವ್‌ ಹಾಗೂ ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಆಚಾರ್ಯ ಸಾರ್ವಜನಿಕ ಕ್ಷಮೆಗೆ ಸಿದ್ಧವಾಗಿದ್ದು, ಮುಂದಿನ ವಿಚಾರಣೆ ಏಪ್ರಿಲ್‌ 23 ರಂದು ನಡೆಯಲಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಕೈಗೆತ್ತಿಕೊಂಡಿತು.ವಿಚಾರಣೆಯಲ್ಲಿ ಪತಂಜಲಿ ಪರ ವಾದ ವಕೀಲರು ವಾದ ಮಂಡಿಸಿದ ವಕೀಲರು, ಬಾಬಾ ರಾಮ್‌ದೇವ್ ಮತ್ತು ಬಾಲಕೃಷ್ಣ ಆಚಾರ್ಯ ಇವರು ಸಾರ್ವಜನಿರಕಗೆ ಕ್ಷಮೆ ಯಾಚಿಸಲು ಸಿದ್ಧ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ಹಿರಿಯ ವಕೀಲ ಮುಕುಲ್ ರೋಹಟಗಿ ತಮ್ಮ ವಾದವನ್ನು ಮಂಡಿಸಿದರು.

ಇದನ್ನೂ ಓದಿ:  ಪತಂಜಲಿ| ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ರಾಮ್‌ದೇವ್‌ಗೆ ಸಮನ್ಸ್ ಜಾರಿ

ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ತಪ್ಪನ್ನು ಒಂದು ವಾರದೊಳಗೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದ್ದು, ಏಪ್ರಿಲ್ 23 ರಂದು ಮುಂದಿನ ವಿಚಾರಣೆ ವೇಳೆ ನಡೆಯಲಿದೆ. ಅಂದು “ಈ ಹಿಂದಿನ ಆದೇಶದಲ್ಲಿ ನಾವು ಏನು ಹೇಳಿದ್ದೇವೆ ಎಂಬುದು ನಿಮಗೆ ತಿಳಿದಿರದಿರುವಷ್ಟು ನೀವು ಮುಗ್ಧರಲ್ಲ” ಎಂದು ಎಸ್‌ಸಿ ಮಂಗಳವಾರ ಸಂಸ್ಥೆಯ ಎಂಡಿ ಬಾಲಕೃಷ್ಣ ಅವರಿಗೆ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.

ಕಳೆದ ವಿಚಾರಣೆಯಲ್ಲಿ, ಪತಂಜಲಿ ಆಯುರ್ವೇದ ಪ್ರಕಟಿಸಿದ ತಪ್ಪುದಾರಿಗೆಳೆಯುವ ಜಾಹೀರಾತುಗಳ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದ ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.ನ್ಯಾಯಾಲಯದಲ್ಲಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ರಾಮದೇವ್ ಮತ್ತು ಬಾಲಕೃಷ್ಣ ಅವರಿಗೆ ಸೂಚಿಸಿದೆ.

ಇದನ್ನೂ ನೋಡಿ: ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ

Donate Janashakthi Media

Leave a Reply

Your email address will not be published. Required fields are marked *