ಮಣಿಪುರ: ಲೋಕಸಭಾ ಚುನಾವಣೆಗೆ ನಡೆದ ಮೊದಲ ಹಂತದ ಚುನಾವಣೆಯ ಮತದಾನದ ಮಣಿಪುರದಲ್ಲಿ ಮತದಾನ ಕೇಂದ್ರದ ಬಳಿ ಶಸ್ತ್ರಸಜ್ಜಿತ ಗುಂಪು ಮತದಾರರನ್ನು ತಮ್ಮ ಮನೆಗಳಿಂದ ಹೊರಗೆ ಬರದಂತೆ ಬೆದರಿಕೆ ಹಾಕಿ ಗುಂಡಿನ ದಾಳಿ ನಡೆಸಿದ್ದು, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಹಾನಿಗೊಳಿಸಿರುವ ನಾಲ್ಕು ಘಟನೆಗಳು, ಸಶಸ್ತ್ರ ಗುಂಪಿನಿಂದ ನಕಲಿ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಫಾಲ್ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಂಧಿತ ಮೂವರು ವ್ಯಕ್ತಿಗಳು ಶುಕ್ರವಾರ ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಯಾಂಪು ಸಾಜೆಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದು, ಘಟನೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು.ಗುಂಡಿನ ಘಟನೆಯ ನಂತರ ಮೂವರು ದುಷ್ಕರ್ಮಿಗಳು ವಾಹನದ ಮೂಲಕ ಸ್ಥಳದಿಂದ ಪರಾರಿಯಾಗಿದ್ದರು.
ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿಮೀ ದೂರದಲ್ಲಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿದ್ದ ಒಂದು 0.32 ಪಿಸ್ತೂಲ್, ಮದ್ದುಗುಂಡುಗಳು ಹಾಗೂ 15 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಮೊದಲ ಹಂತದ ಮತದಾನ ಮುಕ್ತಾಯ; ಒಟ್ಟಾರೆ ಶೇ.59.7 ರಷ್ಟು ಮತದಾನ
ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಯಾಂಪು ಸಾಜೆಬ್‌ನಲ್ಲಿ ನಡೆದ ಗುಂಡಿನ ದಾಳಿಯ 25 ಸೆಕೆಂಡ್‌ಗಳ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಈ ವಿಡಿಯೋ ಹಂಚಿಕೊಂಡಿದ್ದ ಎಕ್ಸ್ ಬಳಕೆದಾರರು “ಇಂಫಾಲದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರದ ಪರಿಣಾಮ; ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಲ್ಲಿದೆ? ಅರಂಬಾಯಿ ತೆಂಗೋಲ್ ಭಾರತೀಯ ಸಂವಿಧಾನದ ಕಾನೂನಿಗೆ ಮೇಲಿದೆಯೇ? ಎಂದು ಬರೆದುಕೊಂಡಿದ್ದರು.
ಇದನ್ನೂ ನೋಡಿ: ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿಯನ್ನು ದೇಶದಜನ ಸೋಲಿಸಬೇಕು – ಡಾ. ಜಿ. ರಾಮಕೃಷ್ಣ Janashakthi Media