‘ಸೇನೆಯ ಚಿತ್ರಹಿಂಸೆ ವರದಿ 24 ಗಂಟೆಯೊಳಗೆ ತೆಗೆದುಹಾಕಿ’ | ದಿ ಕಾರವಾನ್‌ಗೆ ಕೇಂದ್ರ ಸರ್ಕಾರ ಬೆದರಿಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ಭಾರತೀಯ ಸೇನೆ ಎಸಗಿದ ಕ್ರೌರ್ಯದ ಬಗ್ಗೆ ಮಾಡಲಾಗಿದ್ದ ವರದಿಯನ್ನು 24 ಗಂಟೆಗಳ ಒಳಗೆ ತೆಗೆದುಹಾಕುವಂತೆ ಕೇಂದ್ರದ ಬಿಜೆಪಿ ಸರ್ಕಾರ ಸುದ್ದಿ ನಿಯತಕಾಲಿಕೆ ‘ದಿ ಕಾರವಾನ್‌’ಗೆ ಕೇಳಿದೆ ಎಂದು ಮಂಗಳವಾರ ವರದಿಯಾಗಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ಎ ಅಡಿಯ ಅಧಿಕಾರ ಬಳಸಿಕೊಂಡು ಆದೇಶ ನೀಡಿದೆ. ಸೆಕ್ಷನ್ 69 ಎ, ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಮೂಲಕ ಯಾವುದೇ ಮಾಹಿತಿಯ ಸಾರ್ವಜನಿಕರಿಗೆ ಸಿಗದಂತೆ ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ಅಧಿಕಾರವಾಗಿದೆ.

ಪತ್ರಕರ್ತೆ ಜತೀಂದರ್ ಕೌರ್ ತೂರ್ ಅವರು ಮಾಡಿರುವ ‘ಸ್ಕ್ರೀಮ್ಸ್ ಫ್ರಮ್ ದಿ ಆರ್ಮಿ ಪೋಸ್ಟ್’ ಎಂಬ ಶಿರ್ಷಿಕೆಯ ಈ ವರದಿಯನ್ನು ದಿ ಕಾರವಾನ್‌ ಪಠ್ಯ ಮತ್ತು ವಿಡಿಯೋ ರೂಪದಲ್ಲಿ ಪ್ರಕಟ ಮಾಡಿತ್ತು. ಎರಡೂ ವರದಿಯನ್ನು 24 ಗಂಟೆಗಳ ಒಳಗೆ ತೆಗೆದುಹಾಕುವಂತೆ ಸಚಿವಾಲಯವು ನಿಯತಕಾಲಿಕವನ್ನು ಒತ್ತಾಯಿಸಿದ್ದು, ಒಂದು ವೇಳೆ ತೆಗೆದುಹಾಕದಿದ್ದರೆ ಭಾರತ ಸರ್ಕಾರವು ವರದಿಯ URL ಅನ್ನು ನಿರ್ಬಂಧಿಸುತ್ತದೆ ಎಂದು ಬೆದರಿಸಿದೆ.

ಇದನ್ನೂ ಓದಿ:ಮೋದಿ 3ನೇ ಬಾರಿ ಪ್ರಧಾನಿ; ತಡೆಯಲು ಯಾರಿದಂಲೂ ಅಸಾಧ್ಯ – ಕುಮಾರಸ್ವಾಮಿ

ಜಮ್ಮು ಕಾಶ್ಮೀರದ ಪೂಂಚ್ ರಜೌರಿ ಪ್ರದೇಶದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ನಂತರ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್‌ನಿಂದ ವಿಚಾರಣೆಗೆ ಕರೆದೊಯ್ದ ಮೂವರು ನಾಗರಿಕರ ಸಾವಿನ ಬಗ್ಗೆ ಈ ವರದಿಯನ್ನು ಮಾಡಲಾಗಿದೆ.

ತನ್ನ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದ ಈ ಸಂತ್ರಸ್ತರ ಮೇಲೆ ಸೇನೆಯು ವಿದ್ಯುದ್ ಶಾಕ್, ಗುದದ್ವಾರಕ್ಕೆ ಮೆಣಸಿನ ಪುಡಿ ಹಾಕುವುದು ಸೇರಿದಂತೆ ಭಾರಿ ಚಿತ್ರಹಿಂಸೆ ನೀಡಿರುವ ಬಗ್ಗೆ ವಿವರವಾಗಿ ವಿವರಿಸಿದೆ. ಪತ್ರಕರ್ತೆ ಜತೀಂದರ್ ಕೌರ್ ತೂರ್ ಅವರು ಡಿಸೆಂಬರ್ 22 ರಂದು ಟೋಪಾ ಪೀರ್‌ನಲ್ಲಿ ಸೇನೆಯು ಹತ್ಯೆಗೈದ ಮೂವರು ನಾಗರಿಕರಾದ ಸಫೀರ್, ಶಬೀರ್ ಮತ್ತು ಶೌಕತ್ ಅವರ ಕುಟುಂಬಗಳೊಂದಿಗೆ ಮಾತನಾಡಿದ್ದರು.

ಫೆಬ್ರವರಿ 12 ರಂದು ಕ್ಯಾರವಾನ್ ನಿಯತಕಾಲಿಕದ ಸಂಪಾದಕರಿಗೆ ಸಚಿವಾಲಯವು ಸಮನ್ಸ್ ನೀಡಿದ್ದು, ಈ ವರದಿಯು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುತ್ತದೆ, ಆದ್ದರಿಂದ ಅದನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ಹೇಳಿದೆ. ಸಚಿವಾಲಯದ ಈ ಆದೇಶವನ್ನು ಪತ್ರಿಕೆಯು ಅನುಸರಿಸುವುದಾಗಿ ಹೇಳಿದೆ. ಒಂದು ವೇಳೆ ಆದೇಶ ಅನುಸರಿಸದಿದ್ದರೆ ಇಡೀ ವೆಬ್‌ಸೈಟ್ ಅನ್ನು ತೆಗೆದುಹಾಕಲು ಸಚಿವಾಲಯಕ್ಕೆ ದಾರಿ ಮಾಡಿಕೊಟ್ಟಂತೆದಾಗುತ್ತದೆ. ಅದಾಗ್ಯೂ, ಸಚಿವಾಲಯದ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಪತ್ರಿಕೆ ಹೇಳಿದೆ.

ಇದನ್ನೂ ಓದಿ:ರಾಜ್ಯಸಭಾ ಚುನಾವಣೆ | ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ಗೆ ಬಿಜೆಪಿ ಟಿಕೆಟ್ ನಿರಾಕರಣೆ

ಕೇಂದ್ರ ಸರ್ಕಾರ ಆದೇಶಿಸಿರುವ ಸೆನ್ಸಾರ್‌ಶಿಪ್ ಕುರಿತು ಅಧಿಕೃತವಾಗಿ ಟ್ವೀಟ್ ಮಾಡಿರುವ ‘ದಿ ಕಾರವಾನ್’, “ನಾವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಆದೇಶವನ್ನು ಸ್ವೀಕರಿಸಿದ್ದು, ಈ ವೀಡಿಯೊವನ್ನು 24 ಗಂಟೆಗಳಲ್ಲಿ ತೆಗೆದುಹಾಕಲು ನಮಗೆ ನಿರ್ದೇಶಿಸಲಾಗಿದೆ” ಎಂದು ಹೇಳಿದೆ. ಸರ್ಕಾರದ ಆದೇಶವು ‘ಗೌಪ್ಯವಾಗಿದೆ’ ಎಂದು ಕಾರವಾನ್ ಹೇಳಿದ್ದು, ಅದನ್ನು ನ್ಯಾಯಾಲಯದಲ್ಲಿ ಸವಾಲು ಮಾಡುವುದಾಗಿ ತಿಳಿಸಿದೆ.

ದಿ ಕಾರವಾನ್ ಮಾಡಿರುವ ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ. ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಜನಶಕ್ತಿ ಮೀಡಿಯಾ ವಿಡಿಯೊ ನೋಡಿ:ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media

Donate Janashakthi Media

Leave a Reply

Your email address will not be published. Required fields are marked *