ಕೇರಳ ರಾಜ್ಯಪಾಲರು ಆ ಹುದ್ದೆಗೆ ಅನರ್ಹರು-ಸಿಪಿಐ(ಎಂ) ಪೊಲಿಟ್‍ಬ್ಯುರೊ

ನವದೆಹಲಿ : ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಚುನಾಯಿತ ರಾಜ್ಯ ಸರ್ಕಾರದ ಮೇಲಿನ ತನ್ನ  ನಿರಂತರ ರಾಜಕೀಯ ದಾಳಿಗಳು ಮತ್ತು ಯದ್ವಾತದ್ವಾ ನಡವಳಿಕೆಯಿಂದಾಗಿ ಎಲ್ಲಾ ಗಡಿಗಳನ್ನೂ ದಾಟಿ ಹೋಗುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಕ್ರೋಶ ವ್ಯಕ್ತಪಡಿಸಿದೆ.ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ “ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆಯ ಕುಸಿತದ ಆರಂಭ” ಎಂಬ ಅವರ ಹೇಳಿಕೆ, ರಾಜ್ಯ ಸರ್ಕಾರದ ವಿರುದ್ಧದ ಇಂತಹ ಬೆದರಿಕೆಗಳನ್ನು ರಾಜ್ಯದ ಜನತೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎಂದು ಅದು ಹೇಳಿದೆ.

ಕೇರಳ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯಗಳ ಸೆನೆಟ್‌ಗಳಲ್ಲಿ ಆ ವಿಶ್ವವಿದ್ಯಾಲಯಗಳ ಕುಲಪತಿಯೆಂಬ ತನ್ನ  ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ನಾಮನಿರ್ದೇಶಿತ ಸ್ಥಾನಗಳಿಗೆ ಆರ್‌ಎಸ್‌ಎಸ್ ಮಂದಿಯನ್ನು ತುಂಬಿಸಿದ ನಂತರ  ರಾಜ್ಯಪಾಲರು ವಿದ್ಯಾರ್ಥಿಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ, ಶಾಂತಿಯುತವಾಗಿ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ವಿದ್ಯಾರ್ಥಿಗಳಿಗೆ ಹೊಂದಿದ್ದರೂ, ರಾಜ್ಯಪಾಲರು ಈ ಪ್ರತಿಭಟನೆಗಳಿಗೆ ಮುಖ್ಯಮಂತ್ರಿಯನ್ನು ದೂಷಿಸಲು ಪ್ರಯತ್ನಿಸಿದ್ದಾರೆ, ಮತ್ತು ಅವರ ಬಗ್ಗೆ  ಅವಮಾನಕರ ಉಲ್ಲೇಖಗಳನ್ನು ಮಾಡಿದ್ದಾರೆ.

ಇದು ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗೆ ತಕ್ಕುದಾದ ವರ್ತನೆಯಲ್ಲ, ಅವರು ಆ ಹುದ್ದೆಯಲ್ಲಿ ಮುಂದುವರಿಯಲು ತಾನು ಅನರ್ಹರು ಎಂದು ಸಾಬೀತುಪಡಿಸಿದ್ದಾರೆ ಎಂದು  ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *