ಅರಣ್ಯ ಭವನದಲ್ಲಿ ಭೀಮಾರ್ಜುನರ ಪ್ರೀತಿ…

ಮೈಸೂರು: ಮೈಸೂರು ದಸರೆಗೆ ದಿನಗಣನೆ ಆರಂಭವಾಗಿರುವ ಸಂಭ್ರಮದೊಳಗೆ ಅರಣ್ಯ ಭವನದೊಳಗೆ ಭೀಮಾರ್ಜುನರ ಪ್ರೀತಿ ನೋಡುಗರ ಖುಷಿ ಇಮ್ಮಡಿಗೊಳಿಸಿದೆ.

ಹೌದು, ಮಹಾಭಾರತದಲ್ಲಿನ ಭೀಮಾರ್ಜುನರ ಪ್ರೀತಿ ಎಲ್ಲರಿಗೂ ಗೊತ್ತಿದೆ. ಆದರೆ, ಮೈಸೂರಿನ ಅರಣ್ಯ ಭವನದೊಳಗಿನ ಭೀಮಾರ್ಜುನರ ಪ್ರೀತಿ ನಿಜಕ್ಕೂ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ನಿನ್ನೆ(ಆಗಸ್ಟ್‌ 07) ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಆನೆಗಳಾದ ಭೀಮ ಹಾಗೂ ಅರ್ಜುನ ಆನೆಗಳೇ ಇಂದು ರಿಲ್ಯಾಕ್ಸ್ ಮೂಡ್ ನಲ್ಲಿ ಅರಣ್ಯ ಭವನದ ಆತಿಥ್ಯ ಸ್ವೀಕರಿಸಿ ಇಂತಹದೊಂದು ಪ್ರೀತಿಯಲ್ಲಿ ತೊಡಗಿ ಎಲ್ಲರ ಗಮನ ಸೆಳೆದವು.

ಇಂತಹ ಸಾಕಷ್ಟು ಸಂಭ್ರಮದ ಕ್ಷಣ ಕಾಣಲು ಸ್ಥಳೀಯ ಹಲವು ನಿವಾಸಿಗಳು ಆಟೋ, ಸ್ಕೂಟರ್ ಮೂಲಕ ಅರಣ್ಯ ಭವನಕ್ಕೆ ಆಗಮಿಸಿ ಆನೆಗಳ ಕಂಡು ಸಂಭ್ರಮಿಸುತ್ತಿರುವುದು ವಿಶೇಷ‌.

ಈ ಬಾರಿಯೂ ಅಂಬಾರಿಯನ್ನು 57 ವರ್ಷದ ಅಭಿಮನ್ಯು ಹೊರುತ್ತಿದ್ದು, ಅದರೊಂದಿಗೆ ಗಜಪಡೆಯ ಹಿರಿಯ 63 ವರ್ಷದ ಅರ್ಜುನ, 44 ವರ್ಷದ ಧನಂಜಯ, 39 ವರ್ಷದ ಗೋಪಾಲಸ್ವಾಮಿ, 45 ವರ್ಷದ ಕಾವೇರಿ, 21 ವರ್ಷದ ಲಕ್ಷ್ಮಿ, 49 ವರ್ಷದಚೈತ್ರ ಮತ್ತು 22 ವರ್ಷದಭೀಮ, 39 ವರ್ಷದ ಮಹೇಂದ್ರ ಇದೆ ಪ್ರಥಮ ಬಾರಿಗೆ ಮೈಸೂರಿಗೆ ಪಯಣ ಬೆಳೆಸಿ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದೆ.

ಅರಣ್ಯ ಭವನದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರತಿಯೊಬ್ಬರ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು, ಮಾವುತರು, ಕಾವಾಡಿಗರು ಹಾಗೂ ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿದೆ.

ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಂದು ಆನೆಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಲಾಗುತ್ತಿದೆ, ದೂರ ದೂರದಲ್ಲಿ ಆನೆಗಳನ್ನು ಇರಿಸಲಾಗಿದೆ. ಆನೆಗಳು ಇರುವ ಜಾಗದಲ್ಲಿ ಕೆಂಪಪಟ್ಟಿ ಅಳವಡಿಸಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಈ ಬಾರಿ ಆನೆಗಳ ಪಟ್ಟಿ ದೊಡ್ಡದಿದೆ. ಮೂರು ಆನೆಗಳು ಹೊಸದಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಬಂಡಿಪುರದ ರಾಮಪುರ ಆನೆ ಶಿಬಿರದ 18 ವರ್ಷದ ಅತಿಕಿರಿಯ ಪಾರ್ಥಸಾರಥಿ, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ 40 ವರ್ಷದ ಶ್ರೀರಾಮ ಹಾಗೂ ಮತ್ತಿಗೋಡು ಆನೆ ಶಿಬಿರದ 39 ವರ್ಷದ ಮಹೇಂದ್ರ ಪ್ರಥಮ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

Donate Janashakthi Media

Leave a Reply

Your email address will not be published. Required fields are marked *