ಅಂಗನವಾಡಿ ಸಹಾಯಕಿಗೆ ಜಾತಿನಿಂದನೆ; ಆರೋಪಿಗಳ ಬಂಧನಕ್ಕೆ ಡಿಎಚ್‌ಎಸ್‌ ಆಗ್ರಹ

ಸಕಲೇಶಪುರ : ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಗನವಾಡಿ ಸಹಾಯಕಿ, ‘ತೇಜ’ ಎಂಬುವವರು ಡೆಂಗ್ಯೂ ಜಾಗೃತಿ ಮುಡಿಸುವ ಸಂದರ್ಭದಲ್ಲಿ ಮನೆಯೊಳಗೆ ಹೊಗಿದ್ದ ಕಾರಣಕ್ಕೆ ಜಾತಿನಿಂದನೆ ಮಾಡಿ, ಅಸ್ಪೃಶ್ಯತೆ ನಡೆಸಿರುವ ಅನಾಗರೀಕ ಘಟನೆಯನ್ನು ‘ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (ಡಿಎಚ್ಎಸ್)’ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಪೃಥ್ವಿ ಎಂ.ಜಿ ತಿಳಿಸಿದ್ದಾರೆ. ಅಂಗನವಾಡಿ 

ಮಠಸಾಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ‘ತೇಜ’ ಎಂಬುವವರು ಆಶಾ ಕಾರ್ಯಕರ್ತೆಯೊಂದಿಗೆ ಕಳೆದ ಬುಧವಾರ( ಜುಲೈ 09) ಅದೇ ಗ್ರಾಮದಲ್ಲಿ ಮನೆಮನೆಗೆ ತೆಳಿರಳಿ ಡಂಗ್ಯೂ ತಡೆಗಟ್ಟಲು ಜಾಗೃತಿ ಮೂಡಿಸಿರುತ್ತಾರೆ. ಆ ವೇಳೆ ಲಿಂಗಾಯತ ಸಮುದಾಯಕ್ಕೆ ಸೇರಿದ ಕುಮಾರಸ್ವಾಮಿ ಎಂಬುವವರ ಮನೆಗೂ ಹೋಗಿದ್ದಾರೆ. ನಂತರ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ ಯವರೊಂದಿಗೆ ಕುಮಾರಸ್ವಾಮಿ ಮತ್ತು ಕುಟುಂಬದವರು ಕೀಳು ಜಾತಿಗೆ ಸೇರಿದ ನಿಮ್ಮ ಸಹಾಯಕಿ ತೇಜ ನಮ್ಮ ಮನೆಯೊಳಗೆ ಬಂದಿದ್ದು ತಪ್ಪು, ನಮ್ಮ ಮನೆ ಮೈಲಿಗೆ ಯಾಗಿದೆ, ಆಕೆಗೆ ಎಚ್ಚರಿಕೆ ಹೇಳಿ ಎಂದು ಹೇಳಿರುವುದು ಖಂಡನೀಯ.

ಇದನ್ನು ಓದಿ : ಇಡಿಗಂಟಿಗಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ

ಈ ವಿಷಯ ತಿಳಿದು ನೊಂದ ಸಹಾಯಕಿ ತೇಜ, ಮರುದಿನ ಕುಮಾರಸ್ವಾಮಿ ಎಂಬುವವರನ್ನು ಏಕೆ ಹೀಗೆ ಹೇಳಿದ್ದೀರ, ಈ ಕಾಲದಲ್ಲೂ ಜಾತಿ ಭೇದ ಅಸ್ಪೃಶ್ಯತೆ ಮಾಡುತ್ತೀರಲ್ಲ ಅದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ನೀನು ಕೀಳು ಜಾತಿಗೆ ಸೇರಿದವಳು ನಮ್ಮ ಮನೆಗೆ ಏಕೆ ಬಂದಿದ್ದೆ, ನಮ್ಮ ಮನೆಗೆ ನೀವುಗಳು (ಕೀಳು ಜಾತಿ) ಬರಬಾರದು. ನಮಗೆ ಒಳ್ಳೆಯದಾಗುವುದಿಲ್ಲ. ನೀನು ಮನೆಗೆ ಬಂದಿದ್ದಕ್ಕೆ ಮೈಲಿಯಾಗಿ ಮನೆಗೆ ಗಂಜಲ ಹಾಕಿ ಸ್ವಚ್ಚಗೊಳಿಸಬೇಕಾಯಿತು ಎಂದು ಕುಮಾರಸ್ವಾಮಿ, ಆತನ ಪತ್ನಿ ಶೃತಿ ಮತ್ತು ತಾಯಿ ಭಾನುಮತಿ ಎಲ್ಲರೂ ಸೇರಿ ಜಾತಿ ನಿಂದನೆ ಮಾಡಿ, ಅಸ್ಪೃಶ್ಯತೆ ಆಚರಿಸಿ, ಬೆದರಿಕೆ ಹಾಕಿರುವುದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು.

ಈ ದೌರ್ಜನ್ಯದ ವಿರುದ್ಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಜುಲೈ 11ರಂದು ದೂರು ದಾಖಲಿಸಲಾಗಿದ್ದು, ಆರೋಪಿಗಳು ಠಾಣೆಗೆ ಬಂದರೂ ಅವರನ್ನು ಬಂಧಿಸದೇ, ತಲೆ‌ಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಪೊಲೀಸರ ನಿರ್ಲಕ್ಷ್ಯ ಮತ್ತು ದಲಿತ ವಿರೋಧಿ ಧೋರಣೆಯನ್ನು ಡಿ.ಎಚ್.ಎಸ್. ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಡಿಎಚ್ಎಸ್ ರಾಜ್ಯ ಕಾರ್ಯದರ್ಶಿ, ಹಾಸನ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ. ಮತ್ತು ಸಿಐಟಿಯು ಸಕಲೇಶಪುರ ತಾಲ್ಲೂಕು ಮುಂಖಂಡರಾದ ಸೌಮ್ಯ, ಮಠಸಾರದ ಅಂಗನವಾಡಿ ಕೇಂದ್ರಕ್ಕೆ ಬೇಟಿ‌ ನೀಡಿ, ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆಗೆ ಒಳಾಗಾಗಿ ನೊಂದ ಸಹಾಯಕಿ ‘ತೇಜ’ ರವರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಾಂತ್ವಾನ ಹೇಳಿ, ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಲಾಯಿತು.

ಜಾತಿ ನಿಂದನೆ‌ ಮಾಡಿ‌ ಅಸ್ಪೃಶ್ಯತೆಯನ್ನು ಆಚರಿರುವ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ( DHS) ಆಗ್ರಹಿತ್ತದೆ ಮತ್ತು ದೌರ್ಜನ್ಯಕ್ಕೆ ಒಳಗಾದ ದಲಿತ ಅಂಗನವಾಡಿ ಸಹಾಯಕಿ ತೇಜ ರವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆಗೆ ಈ ಮೂಲಕ ಒತ್ತಾಯಿಸುತ್ತದೆ ಎಂದು ಪೃಥ್ವಿ ಎಂ.ಜಿ ತಿಳಿಸಿದರು.

ಇದನ್ನು ನೋಡಿ : ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ – ದೂರು ದಾಖಲುJanashakthi Media

Donate Janashakthi Media

Leave a Reply

Your email address will not be published. Required fields are marked *