ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಾತಿ ಒದಗಿಸಲು ಸರ್ಕಾರಕ್ಕೆ ವರದಿ

ಚಿಕ್ಕಮಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಅನೂಕೂಲ ಕಲ್ಪಿಸುವ ದೃಷ್ಟಿಯಿಂದ ಅನಾಥ ಮಕ್ಕಳಿಗೆ ಮೀಸಲಾತಿ ಕಲ್ಪಿಸಲಾಗಿದೆ,. ಈ ವಿಚಾರವಾಗಿ ಮುಂಬರುವ 1 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ಪ್ರಸಕ್ತ ಅನಾಥ ಮಕ್ಕಳಿಗೆ ಬಾಲಮಂದಿರಗಳಲ್ಲಿ ಆಶ್ರಯ ನೀಡಲಾಗಿದ್ದು. ಶೈಕ್ಷಣಿಕ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಈ ಅನಾಥ ಮಕ್ಕಳು ತಮ್ಮ ಕೀಳರಿಮೆಯನ್ನ ಹೊಗಲಾಡಿಸಿ ಇತರ ಮಕ್ಕಳೊಂದಿಗೆ ಸ್ಪರ್ಧಿಸಲು ಮೀಸಲಾತಿ ಸಹಾಯಕವಾಗಲಿದೆ. ಈಗಾಗಲೆ ತಮಿಳುನಾಡು, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡಲಾಗಿದೆ. ಹಾಗಾಗಿ ಇನ್ನು ರಾಜ್ಯದಲ್ಲಿ ಅನಾಥ ಮಕ್ಕಳಿಗೆ ಮಿಸಲಾತಿ ನೀಡಿಲ್ಲ, ಈ ವಿಚಾರದ ಬಗ್ಗೆ ಚಿಂತನೆ ನೆಡಸಲಾಗಿದ್ದು, ಮಹಿಳೆ ಮತ್ತು ಮಕ್ಕಳ ಇಲಾಖೆಯಿಂದ ಅನಾಥ ಮಕ್ಕಳ ಸರ್ವೇ ನೆಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಮೀಸಲಾತಿಯಿಂದ ಅನಾಥ ಮಕ್ಕಳನ್ನ ಒಂದು ಪ್ರವರ್ಗಕ್ಕೆ ಸೇರಿಸಲು ಅನುಕೂಲವಾಗುತ್ತದೆ. ಸರ್ಕಾರ ಮೀಸಲಾತಿ ಕಲ್ಪಿಸುವುದರಿಂದ, ಅನಾಥ ಮಕ್ಕಳ  ಶಿಕ್ಷಣ, ಉದ್ಯೋಗ ಎಲ್ಲದಕ್ಕೂ ಸಹಕಾರಿಯಾಗಲಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ಮೂರು ದಿನದ ಪ್ರವಾಸ ಕೈಗೊಂಡು ಮಕ್ಕಳ ಪಟ್ಟಿಯನ್ನ ಸರ್ಕಾರಕ್ಕೆ ನೀಡುತ್ತೆವೆ ಎಂದು, ಬುಧವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ  ಮಾತನಾಡಿದರು.

ಈ ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಗಳ ಆಯೋಗದ ಸದಸ್ಯರಾದ ಹೆಚ್‌, ಎಸ್‌, ಕಲ್ಯಾಣಕುಮಾರ್‌, ಕೆ.ಟಿ. ಸುವರ್ಣರಾಜಶೇಖರ್‌, ಅರುಣ್‌ ಕುಮಾರ್‌, ಶಾರದ ನಾಯ್ಕ್‌, ಜಿಲ್ಲಾ ಪಂಚಾಯಿತಿ  ಸಿಇಒ ಜಿ.ಪ್ರಭು, ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್‌ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *