ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ: ಮೈಸೂರು ನಗರ ಬಂದ್‌ ಯಶಸ್ವಿ

ಮೈಸೂರು: ರಾಯಚೂರಿನಲ್ಲಿ ನಡೆದ ಘಟನೆ ಖಂಡಿಸಿ ಇಂದು ಮೈಸೂರು ಬಂದ್ ಕರೆ ನೀಡಲಾಗಿತ್ತು. ಅದರಂತೆ, ಇಂದು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ಜನರು ಸ್ವಯಂ ಪ್ರೇರಿತರಾಗಿ ಬಂದ್‌ ಬೆಂಬಲಿಸಿದ್ದಾರೆ.

ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದರೂ, ರಾಜ್ಯ ಸರ್ಕಾರ ಇವರ ವಿರುದ್ಧ ಈ ವರೆಗೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮೈಸೂರು ನಗರ ಬಂದ್ ಗೆ ಕರೆ ನೀಡಿತ್ತು.

ಮೈಸೂರು ನಗರದ ವಿವಿಧ ಭಾಗಗಳಾದ ಅಶೋಕಪುರಂ, ಗಾಂಧಿನಗರ, ಪಡುವಾರಹಳ್ಳಿ, ಎಕೆ ಕಾಲೋನಿ, ಹಿನಕಲ್, ಸಿದ್ಧಾರ್ಥ ನಗರ, ಶ್ರೀರಾಂಪುರ ಸೇರಿದಂತೆ ಗ್ರಾಮಂತರ ಭಾಗಗಳಿಂದ ನಗರದ ಟೌನ್‌ಹಾಲ್ ಗೆ ವಿವಿಧ ಸಂಘಟನೆಗಳ ಸದಸ್ಯರು ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿಗೆ ಆಗಮಿಸಿದರು.

ಬೈಕ್‌ಗಳ ಮೂಲಕ ಮೈಸೂರು ನಗರದಾದ್ಯಂತ ವಿವಿಧ ಸಂಘಟನೆಗಳು ಜಾಥಾ ನಡೆಸಿದರು. ಜ್ಞಾನ ಪ್ರಕಾಶ ಸ್ವಾಮಿಜಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಲ. ಜಗನ್ನಾಥ್, ನೆಲೆ ಹಿನ್ನೆಲೆ ಗೋಪಾಲ್, ಶಂಬಯ್ಯ, ಶಿವರಾಂ, ಕೆ.ಎಸ್.ಕಲ್ಲಳ್ಳಿ ಕುಮಾರ್, ಭಾಸ್ಕರ್, ಶಾಂತರಾಜ್, ಮಾಜಿ ಮೇಯರ್ ಪುರುಷೋತ್ತಮ್, ಡಿಎಸ್‌ಎಸ್‌, ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *