“ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ” : ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ

  • ಭಾರತೀಯ ಸೇನೆಯಲ್ಲಿ ನೇಮಕಾತಿಗೆ ಅಗ್ನಿಪಥ್ ಯೋಜನೆ ಪ್ರಕಟ
  • ಹೊಸ ನೇಮಕಾತಿ ಯೋಜನೆ ವಿರೋಧಿಸಿ ಅನೇಕ ಕಡೆ ಪ್ರತಿಭಟನೆ
  • ಬಿಹಾರದಲ್ಲಿ ಹೆದ್ದಾರಿ, ರೈಲ್ವೆ ಹಳಿಗಳನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು

ಪಾಟ್ನಾ : ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಎಂದೇ ಘೋಷಿತವಾಗಿದ್ದ ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಯೋಜನೆ ಜಾರಿಗೊಂಡ ಮರುದಿನವೇ ದೇಶದ ಅನೇಕ ಭಾಗಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಸರ್ಕಾರ ತಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಅನೇಕ ಯುವಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರದ ಮುಜಫ್ಫರ್‌ಪುರ ಮತ್ತು ಬುಕ್ಸರ್ ಪ್ರದೇಶಗಳಲ್ಲಿ ಬುಧವಾರ ಪ್ರತಿಭಟನೆ ಭುಗಿಲೆದ್ದಿದೆ. ಮುಜಫ್ಫುರ್‌ಪುರದಲ್ಲಿ ಹೆದ್ದಾರಿಗೆ ತಡೆಯೊಡ್ಡಿದರೆ, ಬುಕ್ಸರ್‌ನಲ್ಲಿ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಲಾಗಿದೆ. ನಾಲ್ಕು ವರ್ಷಗಳ ಬಳಿಕ ನಾವು ಏನು ಮಾಡುವುದು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ‘ಕೆಲಸ ಕೊಡಿ. ಇಲ್ಲವೇ ನಮ್ಮನ್ನು ಕೊಂದುಬಿಡಿ’ ಎಂದು ಆಕ್ರೋಶದಿಂದ ಹೇಳಿದ್ದಾರೆ.

“ಕೇವಲ ನಾಲ್ಕು ವರ್ಷಗಳ ಸೇವೆ ಎಂದರೆ, ನಾವು ಅದರಿಂದ ನಿವೃತ್ತರಾದ ಬಳಿಕ ಒಂದೋ ಓದಬೇಕು, ಇಲ್ಲವೇ ಸಿಕ್ಕ ಕೆಲಸ ಮಾಡಬೇಕು. ನಮ್ಮ ವಯಸ್ಸಿನ ಇತರರಿಗಿಂತ ನಾವು ತೀರಾ ಹಿಂದೆ ಉಳಿಯುತ್ತೇವೆ” ಈ ಯೋಜನೆಯಿಂದ ಆಯ್ಕೆಯಾಗುವ ಅಭ್ಯರ್ಥಿಗಳ ಶೇಕಡ 25ರಷ್ಟು ಸೇನೇಯಲ್ಲಿ ಖಾಯಂ ಆಗಿ ನೇಮಕಗೊಳ್ಳುತ್ತಾರೆ. ಆದರೆ ಉಳಿದವರು ಹೊರಗೆ ಬರುತ್ತಾರೆ? ಇವರ ಜೀವನ ನಂತರ ಏನು ಎಂಬುದು ಖಾತರಿ ಇಲ್ಲ ಎಂದು  ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಹೊಸ ನೇಮಕಾತಿ ಉದ್ದೇಶವು ಸರ್ಕಾರದ ಬೃಹತ್ ಪ್ರಮಾಣದ ವೇತನ ಮತ್ತು ಪಿಂಚಣಿ ಮೊತ್ತದ ಹೊರೆಯನ್ನು ತಗ್ಗಿಸುತ್ತದೆ. ಇದರಿಂದ ಸೇನಾ ಶಸ್ತ್ರಗಳ ಖರೀದಿಗೆ ಹೆಚ್ಚಿನ ಅನುದಾನ ಉಳಿಸುತ್ತದೆ. ‘ಅಗ್ನಿವೀರ’ನಾಗಿ ಸೇನೆಗೆ ಸೇರಿಕೊಳ್ಳುವ 10ನೇ ತರಗತಿ ವಿದ್ಯಾರ್ಥಿಗೆ ಸರ್ಕಾರ 12ನೇ ತರಗತಿ ಪ್ರಮಾಣಪತ್ರ ಕೂಡ ಕೊಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಅಗ್ನಿಪಥ ಯೋಜನೆ ಪ್ರಕಾರ 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷ ಅವಧಿಗೆ ‘ಅಗ್ನಿವೀರರು’ ಎಂಬ ಹೆಸರಿನಡಿ ಸೇನೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಅವರಿಗೆ ಮಾಸಿಕ 30,000- 40000 ರೂ ಸಂಬಳ ನೀಡಲಾಗುತ್ತದೆ ಜತೆಗೆ ವೈದ್ಯಕೀಯ ಹಾಗೂ ವಿಮಾ ಸೌಲಭ್ಯಗಳು ಕೂಡ ಸಿಗಲಿದೆ.
ನಾಲ್ಕು ವರ್ಷದ ಬಳಿಕ ಈ ಸೈನಿಕರಲ್ಲಿ ಶೇ 25ರಷ್ಟು ಮಂದಿಯನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಅವರು 15 ವರ್ಷ ಅಧಿಕಾರಿಯೇತರ ಶ್ರೇಣಿಯಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಲಿದ್ದಾರೆ. ಉಳಿದವರಿಗೆ 11- 12 ಲಕ್ಷ ರೂ ನಡುವಿನ ಪ್ಯಾಕೇಜ್‌ನೊಂದಿಗೆ ಸೇನೆಯಿಂದ ನಿವೃತ್ತಿ ನೀಡಲಾಗುತ್ತದೆ. ಅವರಿಗೆ ಪಿಂಚಣಿ ಸೌಲಭ್ಯ ಸಿಗುವುದಿಲ್ಲ.

ಹೊಸ ನೀತಿಯು ಅನೇಕ ವಲಯಗಳಿಂದ ವ್ಯಾಪಕ ಟೀಕೆ ಹಾಗೂ ಪ್ರಶ್ನೆಗಳಿಗೆ ಒಳಗಾಗಿದೆ. ಸೇನೆಯ ಹಿರಿಯ ನಿವೃತ್ತ ಅಧಿಕಾರಿಗಳು ಕೂಡ ಇದನ್ನು ಪ್ರಶ್ನಿಸಿದ್ದಾರೆ. “ಸಶಸ್ತ್ರ ಪಡೆಗಳಿಗೆ ಈಗ ತಾನೆ ಘೋಷಣೆ ಮಾಡಿರುವ ನೇಮಕಾತಿ ನೀತಿಗೆ ಎರಡು ಗಂಭೀರ ಶಿಫಾರಸುಗಳು. ಹೊಸ ನೇಮಕಾತಿಗಳ ಸೇವಾ ಅವಧಿಯನ್ನು ಕನಿಷ್ಠ ಏಳು ವರ್ಷಗಳಿಗೆ ಹೆಚ್ಚಿಸಿ. b. ದೀರ್ಘಾವಧಿ ಸೇವೆಗೆ ಉಳಿಸಿಕೊಳ್ಳುವವರ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸಿ” ಎಂದು ನಿವೃತ್ತ ಮೇಜರ್ ಜನರಲ್ ಬಿಎಸ್ ಧನೊವಾ ಆಗ್ರಹಿಸಿದ್ದಾರೆ.

Donate Janashakthi Media

One thought on ““ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ” : ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ

Leave a Reply

Your email address will not be published. Required fields are marked *