ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ರವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಪರವಾಗಿ ಹಾಗೂ ಮುಖ್ಯಮಂತ್ರಿಗಳು ಹೇಳಿದ ಅಭ್ಯರ್ಥಿಗಳ ಪರವಾಗಿ ಮತವನ್ನು ಕೋರಿ ಚುನಾವಣಾ ಪ್ರಚಾರ ನಡೆಸುವುದಾಗಿ ಸಾರ್ವಜನಿಕವಾಗಿ ಘೋಷಿಸಿರುತ್ತಾರೆ. ಹೀಗಾಗಿ ಸುದೀಪ್ ರವರ ನಟನೆಯ ಚಲನಚಿತ್ರಗಳು, ಜಾಹೀರಾತು ಸೇರಿದಂತೆ ಕಿರುತರೆ ಕಾರ್ಯಕ್ರಮಗಳು ಪ್ರಸಾರವಾಗದಂತೆ ತಡೆಹಿಡಿಯಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಈ ಸಂದರ್ಭದಲ್ಲಿ ನಟ ಸುದೀಪ್‌ರವರ ಕಾರ್ಯಕ್ರಮಗಳು ಪ್ರಸಾರವಾದರೆ ಅದು ಜನತೆಯ ಮೇಲೆ ಪ್ರಭಾವ ಬೀರಿ ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿ ಚುನಾವಣೆಯಲ್ಲಿ ಅನುಕೂಲವಾಗುವ ಸಾದ್ಯತೆ ಇರುತ್ತದೆ ಹೀಗಾಗಿ ಅವರ ಕಾರ್ಯಕ್ರಮಗಳಿಗೆ ತಡೆಹಾಕಬೇಕೆಂದು 2 ಪ್ರಮುಖ ಬೇಡಿಕೆಗಳನ್ನು ಅಖಿಲ ಭಾರತ ವಕೀಲರ ಒಕ್ಕೂಟವು ಚುನಾವಣಾ ಆಯೋಗದ ಮುಂದಿಟ್ಟಿದೆ.
ಇದನ್ನೂ ಓದಿ : ಸುದೀಪ್ ನಟನೆಯ ಚಲನಚಿತ್ರ, ಟಿವಿಶೋ, ಜಾಹೀರಾತುಗಳಿಗೆ ಬ್ರೇಕ್ ಹಾಕುವಂತೆ ಚುನಾವಣಾ ಆಯೋಗಕ್ಕೆ ಮನವಿ ಪತ್ರ!
1. ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಸುದೀಪ್ ರವರನ್ನು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪಕ್ಷದ ರಾಜ್ಯ ಮಟ್ಟದ ಸ್ಟಾರ್ ಕ್ಯಾಂಪೇನರ್ ಎಂದು ಪರಿಗಣಿಸಿ ಅವರ ಹೆಸರನ್ನು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪರ ಪ್ರಚಾರ ನಡೆಸುವ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸೇರಿಸಬೇಕು.
2. ಕನ್ನಡ ಚಿತ್ರನಟರಾದ ಸುದೀಪ್ ನಟಿಸಿರುವ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆ 2023 ನೀತಿ ಸಂಹಿತ ಮುಕ್ತಾಯವಾಗುವವರೆಗೆ ಪ್ರಸಾರವಾಗದಂತೆ ತಡೆಯಿಡಿಯಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟವು ಆಗ್ರಹಿಸಿದೆ.